Thursday 25th, April 2024
canara news

ಶ್ರೀ ಕವಳೆ ಮಠ ವಾಲ್ಕೇಶ್ವರ ಪ್ರತಿಷ್ಠಾ ಸುವರ್ಣ ಮಹೋತ್ಸವ ಸಮಾರೋಪ

Published On : 09 Jun 2016   |  Reported By : Rons Bantwal


ಧರ್ಮವು ಬಂಧುತ್ವ-ಸಹಬಾಳ್ವೆಯ ಪ್ರತೀಕ : ಶಿವಾನಂದ ಸರಸ್ವತಿ ಸ್ವಾಮೀಜಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.09: ಧರ್ಮ ಎನ್ನುವುದು ಮಾನವ ಜೀವನದ ಅವಿಭಾಜ್ಯ ಅಂಗ. ಇದು ಪುರಾತನ ಕಾಲದಿಂದಲೂ ನಡೆದುಬಂದ ನಂಬುಗೆ. ಧರ್ಮ ಬಂಧುತ್ವ-ಸಹಬಾಳ್ವೆಯನ್ನು ಬಿತ್ತುತ್ತದೆ. ಇಂತಹ ಧರ್ಮದ ಹಾದಿಯಲ್ಲಿ ಸಾಗಿದಾಗಲೇ ಜೀವನ ಪಾವನ. ಆದುದರಿಂದ ಪಾವಿತ್ರ್ಯತೆಯ ಪರಂಪರೆಗಳನ್ನು ರಕ್ಷಿಸುವುದು ಪ್ರತೀಯೊಂದು ಸಮಾಜದ ಪರಮ ಕರ್ತವ್ಯವಾಗಲಿ ಎಂದು ಗೌಡ ಪಾದಾಚಾರ್ಯ ಕವಳೆ ಮಠಧೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಕರೆಯಿತ್ತÀರು.

ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ ಬಿ) ಸಮಾಜದ ಆದಿಮಠ ಜನನಿತ, ಮುಂಬಯಿ ಮಲಬಾರ್‍ಹಿಲ್ ಸನಿಹದ ಬಾಣಗಂಗ ಅಲ್ಲಿನ ಶ್ರೀ ಗೌಡ ಪಾದಾಚಾರ್ಯ ಮಠದ ಮುಂಬಯಿ ಶಾಖೆ ಶ್ರೀ ಶಾಂತದುರ್ಗಾ ದೇವಿಗೆ ಸಮರ್ಪಿತ ಶ್ರೀ ಕವಳೆ ಮಠ ವಾಲ್ಕೇಶ್ವರ ಇದರ ಪ್ರತಿಷ್ಠಾ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವು ಇಂದಿಲ್ಲಿ ಆದಿತ್ಯವಾರ ಸಂಜೆ ದಾದರ್ ಪೂರ್ವದ ಹಿಂದೂ ಕಾಲೋನಿಯಲ್ಲಿನ ಪ್ರಾಚಾರ್ಯ ಬಿ.ಎನ್ ವೈದ್ಯ ಸಭಾಗೃಹದಲ್ಲಿ ನೆರವೇರಿಸಲ್ಪಟ್ಟಿದ್ದು, ಭವ್ಯ ಸಮಾರಂಭದಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಸದ್ಭಕ್ತರ ಸನ್ಮಾನ ಸ್ವೀಕರಿಸಿ ಅನುಗ್ರಹಿಸಿ ಮಾತನಾಡಿದರು.

ವಾಲ್ಕೇಶ್ವರ ಮಠದಲ್ಲಿ ಶ್ರೀ ಶಾಂತದುರ್ಗಾ ದೇವಿಯ ಪ್ರತಿಷ್ಠಾ ಸುವರ್ಣಮಹೋತ್ಸವ ಹಾಗೂ ಶ್ರೀ ಸಂಸ್ಥಾನ ಪರಂಪರೆಯ 77ನೇ ಪೀಠಸ್ಥರಾಗಿ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣಾ (ದೀಕ್ಷೆಯ) 21 ವರ್ಷಾಚರಣಾ ನಿಮಿತ್ತ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ಶ್ರೀಗಳನ್ನು ಪುರೋಹಿತರು ಮತ್ತು ಭಕ್ತಾಭಿಮಾನಿಗಳು ಸಾಂಪ್ರದಾಯಿಕ ವಿಧಿಗಳನ್ನು ನೆರವೇರಿಸಿ ಭಕ್ತಿಪೂರ್ವಕವಾಗಿ ಗೌರವಿಸಿ ಅಭಿವಂದಿಸಿದರು.

ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಸಾರಸ್ವತ್ ಬ್ಯಾಂಕ್‍ನ ಗೌತಮ್ ಠಾಕೂರ್, ಎನ್‍ಕೆಜಿಎಸ್‍ಬಿ ಬ್ಯಾಂಕ್‍ನ ಕಿಶೋರ್ ಕುಲ್ಕರ್ಣಿ, ಇಂಡಿಯನ್ ಎಜ್ಯುಕೇಶನ್ ಸೊಸೈಟಿಯ ಸತೀಶ್ ಲೋಟ್ಲೀಕರ್, ಸತೀಶ್ ಆರ್.ನಾಯಕ್, ಶ್ರೀ ಕವಳೆ ಮಠ ವಾಲ್ಕೇಶ್ವರ ಪ್ರತಿಷ್ಠಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ| ಪ್ರೇಮಾನಂದ ಎಸ್.ರಮಣಿ, ಉಪಾಧ್ಯಕ್ಷರುಗಳಾದ ಗಣೇಶ್ ಶ್ಯಾನ್‍ಭಾಗ್, ಡಾ| ಪ್ರಫುಲ್ ಹೆಡೆ, ಗೌರವ ಕೋಶಾಧಿಕಾರಿ ಚಿಂತಮಣಿ ನಾಡ್ಕರ್ಣಿ, ಜೊತೆ ಕಾರ್ಯದರ್ಶಿ ಪ್ರಮೋದ್ ಗಾಯ್ತೊಂಡೆ, ಜೊತೆ ಕೋಶಾಧಿಕಾರಿ ಸಚಿನ್ ಸಬ್ನೀಸ್, ಜನಸಂಪರ್ಕಾಧಿಕಾರಿ ಕಮಲಾಕ್ಷ ಸರಾಫ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಶ್ರೀ ಭವಾನಿ ಶಂಕರ ದೇವರಿಗೆ ಹಾಗೂ ಶ್ರೀ ಶಾಂತದುರ್ಗಾ ದೇವಿಗೆ ನಮಿಸಿ ಸಮಾರಂಭ ಆರಂಭಿಸಲ್ಪಟ್ಟಿತು. ಅತಿಥಿüಗಳು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನೀಡಿ ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ಕವಳೆ ಮಠ ವಾಲ್ಕೇಶ್ವರ ಬಳಗವು ಭಾವಗೀತೆ ಮತ್ತು ಭಕ್ತಿಗೀತೆಗಳ ಸಂಗೀತ ರಜನಿ ಹಾಗೂ ಸ್ವಪ್ನೀಲ್ ಪಂಡಿತ್ ತಂಡವು ಮೇಘಾಮಲ್ಲಾರ್‍ಗುರುವಂದನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ಕಳೆದ ನವದಿನಗಳಿಂದ ವಿಶೇಷ ಸೇವೆ, ಪೂಜೆಗಳಿಂದ ಸಂಭ್ರಮಿಸಲ್ಪಟ್ಟ ಪ್ರತಿಷ್ಠಾ ಸುವರ್ಣ ಮಹೋತ್ಸವ ಇಂದಿಲ್ಲಿ ಸಮಾಪನ ಕಂಡಿತು.

ಶ್ರೀಗಳನ್ನು ಕುಂಭಸ್ವಾಗತ ಕೋರಿ ಬರಮಾಡಿಕೊಳ್ಳಲಾಗಿದ್ದು, ಬಳಿಕ ಶಿವಾನಂದ ಸ್ವಾಮೀಜಿ ಅವರೌ ಇಂಡಿಯನ್ ಎಜುಕೇಶನ್ ಸೊಸೈಟಿಯ ಬಿ.ಎನ್ ವೈದ್ಯ ಸಭಾಗೃಹದ ಎರಡು ಎಲೆವ್ಹೇಟರ್ಸ್ (ಲಿಫ್ಟ್)ಗಳನ್ನು ಉದ್ಘಾಟಿಸಿ ಸಭಾಗೃಹಕ್ಕೆ ಪಾದಾರ್ಪಣೆಗೈದರು ಮತ್ತು ಸ್ಮರಣಸಂಚಿಕೆ ಅನಾವರಣ ಗೊಳಿಸಿದರು. ಸಮಿತಿಯ ಕಾರ್ಯನಿರತ ಅಧ್ಯಕ್ಷ ಎನ್.ಎನ್ ಪಾಲ್ ಸ್ವಾಗತಿಸಿದರು. ವೀಣಾ ಗಾತ್ಯೊಂಡೆ ಬಳಗವು ಸ್ವಾಗತ ಗೀತೆಗೈದರು. ವೈಧಿಕರು ಮಂತ್ರಘೋಷಣೆ ಮತ್ತು ಪ್ರಾರ್ಥನೆಯನ್ನಾಡಿದರು. ರತ್ನಾಕರ್ ನಾಡ್ಕರ್ಣಿ ಮತ್ತು ಸುಭಾಶ್ ಸರಾಫ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.ಗೌರವ ಕಾರ್ಯದರ್ಶಿ ಭೂಷನ್ ಜಿ.ಜಾಕ್ ಪ್ರಸ್ತಾವಿಕ ನುಡಿಗಳನ್ನಾಡಿ ವಂದನಾರ್ಪಣೆಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here