Friday 29th, March 2024
canara news

ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ- ಡಾ.ಡಿ.ವಿ.ಹೆಗ್ಗಡೆ

Published On : 09 Jun 2016   |  Reported By : Rons Bantwal


-ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 10.001ನೇ ಪ್ರಗತಿಬಂಧು ಸ್ವ.ಸಹಾಯಸಂಘದ ಉದ್ಘಾಟನೆ-
-ಗಜಾಗುಂಡ್ಲ ಕಲ್ಯಾಣಿಯ ಅಭಿವೃದ್ದಿ ಕಾಮಗಾರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಅಡಿಗಲ್ಲು-

ಮಾಲೂರು- ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಸಹೋದರರಂತೆ ಬಾಳ್ವೆ ಮಾಡಿಕೊಂಡು ಜೀವನ ನಡೆಸಬೇಕು ನೀರಿನ ವಿಚಾರದಲ್ಲಿ ದಾಯಾಧಿಗಳಂತೆ ಕಾದಾಡುವುದು ಸಮಂಜಸವಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

ಅವರು ಬುಧವಾರ ಪಟ್ಟಣದ ಹೊರವಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡಿದ್ದ 10.001ನೇ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಉದ್ಘಾಟನೆ ಮತ್ತು ವಿವಿಧ ಅನುದಾನಗಳ ವಿತರಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿ ಕರಾವಳಿ ಭಾಗದ ಹಾಗೂ ಬಯಲುಸೀಮೆ ಜನತೆಯ ನಡುವಿನ ಭಾಂದವ್ಯ ಅತ್ಯಂತ ಮಹತ್ವಪೂರ್ಣದಾಯಕವಾದದ್ದು. ಬಯಲುಸೀಮೆಯ ಜನರಷ್ಟೇ ಕರಾವಳಿಯ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನೇತ್ರಾವತಿಯ ಹಂಚಿಕೆ ಶಬ್ದ ಕೇಳಿದರೆ ಹೋರಾಟ ಮಾಡಲು ನೇತೃತ್ವ ವಹಿಸಿ ಎಂದು ಕರಾವಳಿ ಭಾಗದ ಜನ ಕೇಳುತ್ತಾರೆ. ಬಯಲುಸೀಮೆಗೆ ಬಂದರೆ ಶಾಶ್ವತ ನೀರಾವರಿಗಾಗಿ ನೀವು ಮನಸ್ಸು ಮಾಡಿದರೆ ಬಗೆಹರಿಯುತ್ತದೆ ಎಂದು ಹೇಳುತ್ತಾರೆ. ಆದರೆ ಸರ್ಕಾರವು ಕರಾವಳಿ ಭಾಗದ ಜನತೆಯ ಮುಂದೆ ನೇತ್ರಾವತಿ ನದಿ ತಿರುವು ಅಥವಾ ನೇತ್ರಾವತಿ ನದಿ ಹಂಚಿಕೆಯ ಬಗ್ಗೆ ಸಮಗ್ರವಾದ ವರದಿಯನ್ನು ಮಂಡಿಸಿ ಒಪ್ಪಿಗೆ ಪಡೆದು ಎಲ್ಲರ ಸಹಮತದೊಂದಿಗೆ ಮತ್ತು ಅವರ ನಂಬಿಕೆಗೆ ದಕ್ಕೆ ಬಾರದಂತೆ ಯೋಜನೆಯನ್ನು ಪೂರ್ಣಗೊಳಿಸುವುದನ್ನು ಬಿಟ್ಟು ಕರಾವಳಿ ಹಾಗೂ ಬಯಲುಸೀಮೆಯ ಜನತೆಯ ನಡುವೆ ವಿರಸ ಮಾಡುವ ಕೆಲಸ ಖಂಡನೀಯ ಎಂದರು. ನೀರಿನ ವಿಚಾರದಲ್ಲಿ ಶ್ರೀಮಂಜುನಾಥ ಪರಿಹಾರವನ್ನು ಶೀಘ್ರದಲ್ಲೇ ಬಗೆಹರಿಸುವ ನಂಬಿಕೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಮಾಲೂರು ಗ್ರಾಮದೇವತೆ ಶ್ರೀಮಾರಿಕಾಂಭ ದೇವಿ ಲಭಿಸಿದ ಗಜಾಗುಂಡ್ಲ ಕಲ್ಯಾಣಿಯ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸು ಮೂಲಕ ಇಡೀ ಮಾಲೂರು ಇತಿಹಾಸದ ಪುಗಳಲ್ಲಿ ಅತ್ಯಂತ ಹೆಚ್ಚು ಜನತೆ ಸೇರಿದ ಕಾರ್ಯಕ್ರಮವಾಗಿ ಹೊರಹೊಮ್ಮಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ಶ್ರೀವೀರೇಂದ್ರ ಹೆಗ್ಗಡೆಯವರಿಗೆ ಶಾಸಕ ಕೆ.ಎಸ್.ಮಂಜುನಾಥ್‍ಗೌಡ ಹಾಗೂ ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಬೆಳ್ಳಿ ಕಿರೀಟ ಧಾರಣೆ ಮಾಡಿದರು. ಕೋಚಿಮುಲ್‍ನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮಜ್ಜಿಗೆಯನ್ನು ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಾವತಿಹೆಗ್ಗಡೆ, ಸಂಸದ ಕೆ.ಹೆಚ್.ಮುನಿಯಪ್ಪ, ಶಾಸಕ ಕೆ.ಎಸ್.ಮಂಜುನಾಥ್‍ಗೌಡ, ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ, ತಹಸೀಲ್ದಾರ್ ಎಸ್.ನಾಗರಾಜ್, ಜಿ.ಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯೆ ಗೀತಮ್ಮ, ತಾ.ಪಂ ಅಧ್ಯಕ್ಷೆ ತ್ರಿವರ್ಣರವಿ, ಸದಸ್ಯರಾದ ಹೆಚ್.ಎನ್.ಶ್ರೀನಾಥ್, ಮಾಲಾ, ಸುಮಿತ್ರ, ಇ.ಓ ಸಂಜೀವಪ್ಪ, ಕೋಚಿಮುಲ್ ನಿದೇರ್ಶಕ ಕೆ.ವೈ.ನಂಜೇಗೌಡ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಶ್ರೀಮಾರಿಕಾಂಭ ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ಪಿ.ವೆಂಕಟೇಶ್, ಪುರಸಭಾ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಸದಸ್ಯರಾದ ಎಂ.ಪಿ.ವಿಜಯಕುಮಾರ್, ಎಂ.ವಿ.ವೇಮನ, ಸಿ.ಪಿ.ನಾಗರಾಜ್, ಸಂಪಂತ್‍ಯಾದವ್, ಬೋರ್‍ರಮೇಶ್, ಜೆ.ಡಿ.ಎಸ್. ನಗರಾಧ್ಯಕ್ಷ ಟಿ.ರಾಮಚಂದ್ರ, ಅರಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಸುಬ್ರಮಣಿ, ಸಿ.ಪಿ.ಐ ರಾಘವೇಂದ್ರನ್, ಎಸ್.ಐ. ಎಂ.ಎಲ್.ಚೇತನ್‍ಕುಮಾರ್ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಜನರಲ್ ಮ್ಯಾನೇಜರ್ ಜಿ.ಎಸ್.ರವಿಸುಧಾಕರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಡಾ.ಎಲ್.ಹೆಚ್.ಮಂಜುನಾಥ್, ಜಿಲ್ಲಾ ನಿದೇರ್ಶಕ ವಿ.ವಿಜಯ್‍ಕುಮಾರ್ ನಾಗನಾಳ, ತಾಲೂಕಿನ ಯೋಜನಾಧಿಕಾರಿ ರವಿ, ಇದ್ದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here