Thursday 25th, April 2024
canara news

ಗೋಕುಲದಲ್ಲಿ ಜರುಗಿದ ಯುವ ವಿಭಾಗದವರಿಂದ ಚಿಣ್ಣರಿಗಾಗಿ ಬೇಸಿಗೆ ಶಿಬಿರ

Published On : 15 Jun 2016


ಮುಂಬಯಿ, ಜೂ.15: ಬಿಎಸ್‍ಕೆಬಿ ಅಸೋಸಿಯೇಶನ್ ಸಾಯನ್ ಮುಂಬಯಿ ಇದರ ಯುವ ವಿಭಾಗವು ಸಂಘದ ಸದಸ್ಯರ ಮಕ್ಕಳಿಗಾಗಿ ದ್ವಿದಿನಗಳ 2016ನೇ ಸಾಲಿನ ವಾರ್ಷಿಕ ಬೇಸಿಗೆ ಶಿಬಿರವನ್ನು ನೆರೂಲ್ ಅಲ್ಲಿರುವ `ಆಶ್ರಯ' ದಲ್ಲಿ ಆಯೋಜಿಸಿತ್ತು. ಸುಮಾರು 25 ಚಿಣ್ಣರು ಈ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದರು.

ಕಳೆದ (ಜೂ.10) ಶುಕ್ರವಾರ ಆದಿಗೊಂಡ ಶಿಬಿರಕ್ಕೆ ಬಿಎಸ್‍ಕೆಬಿ ಅಸೋಸಿಯೇಶನ್ ಕಾರ್ಯಕಾರೀ ಸಮಿತಿ ಸದಸ್ಯರು ದೀಪ ಪ್ರಜ್ವಲನೆಗೈದು ಚಾಲನೆಯನ್ನಿತ್ತರು. ಶಿಬಿರಾಥಿರ್ü ಮಕ್ಕಳು ಗಣಪತಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಸಂಘದ ಸದಸ್ಯರಾದ ಸರೋಜಾ ಸತ್ಯನಾರಾಯಣ, ಪಿ.ಸಿ ಎನ್ ರಾವ್, ಲೋಹಿತಾ ರಾವ್, ಅರುಣಾ ಆಚಾರ್, ಶಾಲಿನಿ ಉಡುಪ ಮುಂತಾದವರು ಬಣ್ಣ ಬಣ್ಣದ ಕಾಗದಗಳಿಂದ ವೈವಿಧ್ಯಮಯ ಕಸೂತಿ ತಯಾರಿಸುವುದನ್ನು ಕಲಿಸಿ ಕೊಟ್ಟರು. ಅಂಜನಾ ರಾವ್ ರಂಗೋಲಿ ಬಿಡಿಸುವುದನ್ನು, ಸಹನಾ ಪೆÇೀತಿ ಭಜನಾ ಹಾಡುಗಳನ್ನು ಕಲಿಸಿಕೊಟ್ಟರು. ಅನಂತಪದ್ಮನಾಭ ಪೆÇೀತಿ ಯವರು `ವೈದಿಕ ಗಣಿತ'ದ ಶಕ್ತಿಯನ್ನು ಕಲಿಸಿಕೊಟ್ಟರು. ಪ್ರಶಾಂತ್ ಹೆರ್ಲೆ ಯವರು ಪ್ರತಿ ಮುಂಜಾನೆ ಮಕ್ಕಳನ್ನು ಹೊರಾಂಗಣಕ್ಕೆ ಕರೆದೊಯ್ದು ವ್ಯಾಯಾಮ ಮಾಡಿಸಿದರು. ಸಹನಾ ಭಾರದ್ವಾಜ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ' ಆಟದೊಂದಿಗೆ ಪಾಠ' ವಾಗಿ ಕನ್ನಡ ಕಲಿಸಿಕೊಟ್ಟು ಮಕ್ಕಳ ಮನ ಗೆದ್ದರು. ರಚಿತಾ ರಾವ್ ಜಟ್ ಫಟ್ ಚಾಟ್ ತಯಾರಿಸುವ ರೀತಿ ತೋರಿಸಿಕೊಟ್ಟು ಮಕ್ಕಳನ್ನು ಖುಶಿ ಪಡಿಸಿದರು.

ಕಳೆದ ರವಿವಾರ ಸಂಜೆ ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಶಿಬಿರದ ಸಮಾರೋಪ ಸಮಾರಂಭ ಜರಗಿತು.

ಡಾ| ಸುರೇಶ್ ರಾವ್ ಮಾತನಾಡಿ ಯುವ ವಿಭಾಗದವರು ಶಿಬಿರವನ್ನು ಆಯೋಜಿಸಲು ತೋರಿಸಿದ ಮುತುವರ್ಜಿ ಹಾಗೂ ಪ್ರಯತ್ನಗಳನ್ನು ಮೆಚ್ಚುತ್ತಾ `ಇಂತಹ ಶಿಬಿರವು ಮಕ್ಕಳಿಗೆ ಹೆಚ್ಚಿನ ಚಟುವಟಿಕೆಗಳನ್ನು ಕಲಿಯಲು ಹಾಗೂ ಪರಸ್ಪರ ಸ್ನೇಹವರ್ಧನೆಗೆ ಸಹಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಶಿಬಿರದ ಪ್ರಯೋಜನವನ್ನು ಪಡೆಯುವಂತಾಗಲಿ' ಎಂದು ಆಶಿಸುತ್ತಾ ಯುವ ವಿಭಾಗದವರನ್ನು, ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳನ್ನು ಹಾಗೂ ಸಹಕರಿಸಿದ ಎಲ್ಲಾ ಸ್ವಯಂ ಸೇವಕರನ್ನು ಅಭಿನಂದಿಸಿದರು. ಅಂತೆಯೇ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪೆÇ್ರೀತ್ಸಾಹಕರ ಬಹುಮಾನಗಳನ್ನೀತ್ತು ಗೌರವಿಸಿದರು.

ಯುವ ವಿಭಾಗದ ಸಂಚಾಲಕ ದೀಪಕ್ ಶಿವತ್ತಾಯ ಶಿಬಿರಾಥಿರ್ü, ಮಕ್ಕಳ ಪಾಲಕರು ಹಾಗೂ ಸರ್ವರನ್ನು ಸ್ವಾಗತಿಸಿದರು. ವಿನೋದಿನಿ ರಾವ್ ಅವರು ಎರಡು ದಿನದ ಕಾರ್ಯಾಗಾರದಲ್ಲಿ ನಡೆದ ಚಟುವಟಿಕೆಗಳನ್ನು ವಿಸ್ತಾರವಾಗಿ ತಿಳಿಸಿದರು. ಉಮೇಶ್ ರಾವ್ ಬಹುಮಾನಗಳಿಗೆ ತಮ್ಮ ದೇಣಿಗೆಯನ್ನಿತ್ತು ಸಹಕರಿಸಿದರು. ಯುವ ವಿಭಾಗ ಹಾಗೂ ಮಹಿಳಾ ವಿಭಾಗದವರ ಸಂಪೂರ್ಣ ಸಹಕಾರದಿಂದ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here