Friday 19th, April 2024
canara news

ವೈಭವದ ರಜಕೋತ್ಸವ-2016 ಸಂಭ್ರಮಿಸಿದ ಶ್ರೀ ರಜಕ ಸಂಘ ಮುಂಬಯಿ

Published On : 15 Jun 2016   |  Reported By : Rons Bantwal


ಮುಂಬಯಿ, ಜೂ.16: ಶ್ರೀ ರಜಕ ಸಂಘ ಮುಂಬಯಿ ತನ್ನ ವಾರ್ಷಿಕ ಕಾರ್ಯಕ್ರಮವನ್ನಾಗಿಸಿ ರಜಕೋತ್ಸವ 2016 ಸಂಭ್ರಮವನ್ನು ಕಳೆದ ರವಿವಾರ ಸಂಜೆ ದಾದರ್ ಪೂರ್ವದಲ್ಲಿನ ಕಿಂಗ್ ಜಾರ್ಜ್ ಹೈಸ್ಕೂಲ್ ಸಭಾಂಗಣದಲ್ಲಿ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿಸಿತು.

ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಸಾಲಿಯಾನ್ ದೀಪ ಪ್ರಜ್ವಲಿಸಿ, ತುಳುನಾಡ ಸಂಪ್ರದಾಯದಂತೆ ತೆಂಗಿನ ಹೂವನ್ನು ಅರಳಿಸಿ ರಜಕೋತ್ಸವಕ್ಕೆ ಚಾಲನೆ ನೀಡಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಂಭ್ರಮದಲ್ಲಿ ರಜಕ ಸದಸ್ಯರು ಮತ್ತು ಮಕ್ಕಳು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

ತುಳುನಾಡು ಮತ್ತು ಮಹಾರಾಷ್ಟ್ರದಲ್ಲಿ ವರುಷವಿಡೀ ಆಚರಿಸುವಂತಹ ಯುಗಾದಿ (ಗುಡಿಪಾಡ್ವ) ಯಿಂದ ಕ್ರಮವಾಗಿ ಹೋಲಿ ಹಬ್ಬದ ವರೆಗಿನ ಎಲ್ಲಾ ಹಬ್ಬಗಳ ಆಚರಣೆ, ಮಹತ್ವ, ವಿಶೇಷತೆಯನ್ನು ತೋರಿಸುವಂತಹ ತುಳು ಮಹಾಪರ್ವ ಆಚರಿಸಲಾಯಿತು. ತುಳುನಾಡಿನಲ್ಲಿ ನಡೆಯುವ ದೇವಿ-ದೇವರ ಆರಾಧನೆ, ನಾಗಾರಾಧನೆ, ಭೂತದ ಕೋಲ, ಸತ್ಯದೇವತೆ, ತುಳುನಾಡ ಸಿರಿ, ಕೋಟಿಚೆನ್ನಯ, ರಾಣಿ ಅಬ್ಬಕ್ಕ, ಅಗೋಳಿ ಮಂಜಣ್ಣ ಇವರೆಲ್ಲರ ಹಬ್ಬವನ್ನು ಯಾವ ರೀತಿ ಆಚರಿಸುತ್ತಾರೆ ಅನ್ನುವುದನ್ನು ರಜಕ ಸಂಘದ ವಸಾಯಿ ವಲಯದ ಸದಸ್ಯರು ತಮ್ಮ ಮಕ್ಕಳು ಮಕ್ಕಳನ್ನೊಳಗೊಂಡು ನೃತ್ಯನಟನೆ ಮೂಲಕ ಬಹಳ ಸೊಗಸಾಗಿ ಪ್ರದರ್ಶಿಸಿದರು.

ಸೆಂಟ್ರಲ್ ವಲಯವು ಗೋಕುಲಾಷ್ಟಮಿ ವಿಜೃಂಭಣೆ, ಡೊಂಬಿವಿಲಿ ವಲಯವು ದೇವಿಯ ಆರಾಧನೆ ಮತ್ತು ದಾಂಡಿಯ ನೃತ್ಯ, ಹುಲಿವೇಷ ಕುಣಿತದ ಮೂಲಕ ದಸರಾ ಹಬ್ಬವನ್ನು ಆಚರಿಸಿ ತೋರಿಸಿದರು. ಪಶ್ಚಿಮ ವಲಯವು ಮಹಿಳೆಯರು ಕೆಡ್ಡಸ ಹಬ್ಬವನ್ನು ನೃತ್ಯದ ಮೂಲಕ ಪ್ರದರ್ಶಿಸಿದರೆ ನವಿ ಮುಂಬಯಿ ವಲಯವು ದೀಪಾವಳಿ ಹಬ್ಬವನ್ನು ನೃತ್ಯರೂಪಕದಲ್ಲಿ ಸುಂದರವಾಗಿ ಪ್ರದರ್ಶಿಸಿದರು. ಯುವರಜಕವು ರಕ್ಷಾಬಂಧನ, ಗಣಪತಿ, ಶಿವರಾತ್ರಿ, ಹೋಲಿ ಹಬ್ಬವನ್ನು ಮನಮೋಹಕವಾದ ನೃತ್ಯಾಭಿನಯದ ಮೂಲಕ ಪ್ರದರ್ಶಿಸಿದರು. ಇತರ ಹಬ್ಬಗಳ ವಿವರಣೆಯನ್ನು, ಸಂಬಂಧ ಪಟ್ಟ ದೃಶ್ಯಗಳ ಪೂರ್ವರೆಕಾರ್ಡಿಂಗ್ ಮಾಡಿ ಪರದೆಯ ಮೇಲೆ ಬಿತ್ತರಿಸಲಾಯಿತು. ಸತೀಶ್ ಸಾಲಿಯಾನ್ ಧ್ವನಿಗ್ರಹಣಕ್ಕೆ ಕಂಠದಾನ ಹಾಗೂ ಸಂಬಂಧ ಪಟ್ಟ ದೃಶ್ಯಗಳನ್ನು ನೀಡಿದ್ದು, ತುಳು ಮಹಾಪರ್ವದ ಕತೆಯ ಬರವಣಿಗೆಯನ್ನು ಸುಮಿತ್ರ ಪಲಿಮಾರ್ ರಚಿಸಿದ್ದರು.

ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ತರಬೇತಿ ಮತ್ತು ನಿರ್ದೇಶನದಲ್ಲಿ, ರಜಕ ಯಾನೆ ಮಡಿವಾಳ ಸಂಘ ಮೂಲ್ಕಿ ಅಧ್ಯಕ್ಷ ಕಟೀಲು ಸಂಜೀವ ಮಡಿವಾಳ ಅವರ ಕಥಾಭಾಗದ ಪದ್ಯದೊಂದಿಗೆ ರಜಕ ಮಹಿಳೆಯರು `ರಜಕ ಕುಲಗುರು ಗುರು ಮಾಚಿದೇವ' ಯಕ್ಷಗಾನ ಪ್ರದರ್ಶಿಸಿದ್ದು, 33 ಪಾತ್ರಧಾರಿಗಳ ಅಭಿನಯವನ್ನು 23 ಜನ ಮಹಿಳೆಯರು ನಿಭಾಯಿಸಿ ರಜಕ ಚರಿತ್ರೆಯನ್ನೇ ರಚಿಸಿದರು. ಭಾಗವಕೆಯಲ್ಲಿ ಹರೀಶ್ ಶೆಟ್ಟಿ, ಚೆಂಡೆ-ಮದ್ದಳೆಯಲ್ಲಿ ಆನಂದ್ ಶೆಟ್ಟಿ ಇನ್ನ, ಗಣೇಶ್ ಎಕ್ಕಾರ್, ತೇಜಸ್ ಶೆಟ್ಟಿ, ಚಕ್ರತಾಳದ ಶಾಮ ಶೆಟ್ಟಿ, ಮತ್ತು ಗೀತಾಂಬಿಕ ಕೃಪಾ ಯಕ್ಷಗಾನ ಮಂಡಳಿ ಅಸಲ್ಫಾ ಘಾಟ್ಕೋಕೋಪರ್ ವೇಷಭೂಷಣದೊಂದಿಗೆ ಸಹಕರಿಸಿದ್ದರು.

ಸಂಘದ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಕಾರ್ಯಕಾರಿ ಸಮಿತಿ, ಮಹಿಳಾ ಮತ್ತು ಯುವ ವಿಭಾಗ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಸಾಲಿಯಾನ್ ಹಾಗೂ ಸರ್ವ ಪ್ರಾದೇಶಿಕ ವಲಯಧ್ಯಕ್ಷರ ಉಪಸ್ಥಿತಿಯಲ್ಲಿ ಅಧ್ಯಕ್ಷ ಸತೀಶ್ ಸಾಲಿಯಾನ್ ಅವರು ಅಜೆಕಾರ್ ಬಾಲಕೃಷ್ಣ ಶೆಟ್ಟಿ ಮತ್ತು ಕಟೀಲು ಸಂಜೀವ ಮಡಿವಾಳ, ಪದ್ಯವನ್ನು ಗದ್ಯದಲ್ಲಿ ರೂಪಾಂತರಿಸಿ ಕೊಟ್ಟ ಮುಂಬಯಿ ನಗರದ ಪ್ರಸಿದ್ಧ ಕಲಾವಿದ ಕೊಲ್ಯ ರಾಜು ಶೆಟ್ಟಿ, ಪ್ರಸಿದ್ಧ, ಹಿರಿಯ ಭಾಗವತ ಪೆÇಲ್ಯ ಲಕ್ಷಿ ್ಮೀನಾರಾಯಣ ಶೆಟ್ಟಿ, ಸಹಕಲಾವಿದರಿಗೆ ಸನ್ಮಾನಿಸಿ ಅಭಿವಂದಿಸಿದರು.

ಸ್ಪರ್ಶ್ ಸಾಲಿಯಾನ್ ತಾಂತ್ರಿಕ ವಿಭಾಗ ನಿರ್ವಹಿಸಿದ್ದು, ಯುವರಜಕದ ಮನೀಷ್ ಕುಂದರ್, ಸಾಯಿ ಕುಮಾರ್, ಲಲಿತ್ ಸಾಲಿಯಾನ್ ಮತ್ತಿತರರ ಸಹಕಾರದೊಂದಿಗೆ ರಜಕೋತ್ಸವದ ಪೂರ್ವ ಸಿದ್ಧತೆ ನಿರ್ವಹಿಸಿದ್ದರು. ಸುಮಿತ್ರ ಪಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ರಜಕೋತ್ಸವ ಸಮಾಪ್ತಿ ಕಂಡಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here