Thursday 18th, April 2024
canara news

ಕುಸಿಯುತ್ತಿದೆ ಭತ್ತದ ಬೆಳೆ: ಕೇರಳ ಮಾದರಿ ಪ್ಯಾಕೇಜ್‌ ನಿರೀಕ್ಷೆ

Published On : 16 Jun 2016   |  Reported By : Canaranews Network


ಮಂಗಳೂರು: ಕರ್ನಾಟಕದಲ್ಲಿ ಭತ್ತದ ಬೆಳೆ ಕುಸಿಯುತ್ತಿದೆ. ಒಟ್ಟು ಉತ್ಪಾದನೆಯಲ್ಲಿ ಈ ವರ್ಷ 11 ಲಕ್ಷ ಟನ್‌ ಭತ್ತದ ಬೆಳೆ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ 33,000 ಹೆಕ್ಟೇರ್‌ನಿಂದ 28,700 ಹೆಕ್ಟೇರ್‌ಗೆ ಇಳಿದಿದೆ. ಬೆಲೆ ಕುಸಿತ, ಕಾರ್ಮಿಕರ ಕೊರತೆ ಕರಾಧಿವಳಿಯಲ್ಲಿ ರೈತರು ಭತ್ತದ ಬೆಳೆಯಿಂದ ವಿಮುಖರಾಗಲು ಪ್ರಮುಖ ಕಾರಣ. ಬೆಳೆ ಪ್ರಮಾಣ ಕುಸಿಯುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ಉತ್ತೇಜನ ನೀಡುವ ಕ್ರಮಗಳು ಸರಕಾರದಿಂದ ಜಾರಿಯಾಗಬೇಕು ಎಂಬ ಬೇಡಿಕೆ ರೈತರಿಂದ ನಿರಂತರ ಮಂಡನೆಯಾಗುತ್ತಲೇ ಬಂದಿದೆ.

ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿಧಿದ್ದಾರೆ. ನೆರೆಯ ಕೇರಳ ರಾಜ್ಯದಲ್ಲಿ ಜಾರಿಯಲ್ಲಿರುವ ವಿಶೇಷ ಪ್ಯಾಕೇಜ್‌ಗಳನ್ನು ಜಾರಿಗೊಳಿಸುವಂತೆ ಸರಕಾರ ನೇಮಿಸಿದ್ದ ಅಧ್ಯಯನ ತಂಡ ಕೂಡ ಶಿಫಾರಸು ಮಾಡಿದೆ. ಪ್ರಸಕ್ತ ಸಾಲಿನ ಮುಂಗಾರು ಬೆಳೆ ಚಟುಧಿವಟಿಕೆಗಳು ಇದೀಗ ಆರಂಭಗೊಂಡಿವೆ. ಈ ಹಂತದಲ್ಲಿ ರೈತರಿಗೆ ಉತ್ತೇಜನ ಲಭಿಸಿದರೆ ಬೆಳೆ ಕುಸಿತ ತಡೆಗಟ್ಟಲು ಸಾಧ್ಯವಿದೆ. ಮಾತ್ರವಲ್ಲದೆ ಬೆಳೆ ಪ್ರಮಾಣ ವಿಸ್ತರಣೆಗೂ ನೆರವಾಗುತ್ತದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here