Thursday 25th, April 2024
canara news

ಶಿಕ್ಷಕನಿಂದ ಶಿಕ್ಷಕಿಯ ಅತ್ಯಾಚಾರ; ನಗ್ನ ಚಿತ್ರ ತೆಗೆದು ಬ್ಲ್ಯಾಕ್‍ಮೇಲ್

Published On : 16 Jun 2016   |  Reported By : Canaranews Network


ಮಂಗಳೂರು: ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕನೋರ್ವ ಶಿಕ್ಷಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ನಗ್ನ ಚಿತ್ರ ತೆಗೆದು ಬ್ಲ್ಯಾಕ್ ಮೇಲ್ ನಡೆಸಿ ಚೆಕ್ ಗಳಿಗೆ ಸಹಿ ಪಡೆದಾತನನ್ನು ಕೊಣಾಜೆ ಪೊಲೀಸರು ಮಂಗಳವಾರ ದೇರಳಕಟ್ಟೆಯಿಂದ ಬಂಧಿಸಿದ್ದಾರೆ.ಮೈಸೂರು ನಿವಾಸಿ ನರಸಿಂಹ ಮೂರ್ತಿ (34) ಬಂಧಿತ ಶಿಕ್ಷಕ. ದೇರಳಕಟ್ಟೆ ನೇತಾಜಿ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ.

ಘಟನೆ ವಿವರ: ಶಿಕ್ಷಕ ನರಸಿಂಹ ಮೂರ್ತಿ ಹಾಗೂ ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಂಡ್ಯ ಮೂಲದ ಯುವತಿಗೆ ಕಳೆದ 2014ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಮೊರಾರ್ಜಿ ದೇಸಾಯಿ ಶಿಕ್ಷಕರ ತರಬೇತಿ ಸಂದರ್ಭ ಪರಿಚಯವಾಗಿತ್ತು. ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ನರಸಿಂಹ ಮೂರ್ತಿ ಶಿಕ್ಷಕಿಯನ್ನು ವಿವಾಹವಾಗುವುದಾಗಿ ನಂಬಿಸಿದ್ದ. ಜೂ.2 ರಂದು ಶಿಕ್ಷಕಿಯನ್ನು ತನ್ನ ರೂಮಿಗೆ ಕರೆದಿದ್ದ ನರಸಿಂಹ ಮೂರ್ತಿ ಆಕೆಯನ್ನು ಬಲವಂತವಾಗಿ ಅತ್ಯಾಚಾರಗೈದಿದ್ದ. ಇದೇ ವೇಳೆ ಆತನಲ್ಲಿದ್ದ ಶಿಕ್ಷಕಿಯ ನಗ್ನ ಚಿತ್ರ ತೆಗೆದು ಬ್ಲ್ಯಾಕ್ ಮೇಲ್ ಗೊಳಿಸಿ ಸಾವಿರಾರು ರೂ. ನಗದಿನ ಚೆಕ್‍ಗೆ ಸಹಿ ಹಾಕಿಸಿಕೊಂಡಿದ್ದ.ನೊಂದ ಶಿಕ್ಷಕಿ ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಂತೆ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ, ನಗ್ನ ಚಿತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಣಾಜೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here