Thursday 28th, March 2024
canara news

ಅಂತರ್ರಾಜ್ಯ ವಾಹನ ಚೋರರ ಬಂಧನ

Published On : 16 Jun 2016   |  Reported By : Canaranews Network


ಮಂಗಳೂರು: ವಾಹನ ಕಳವುಗೈದು ನಕಲಿ ಆರ್ ಸಿ ಸೃಷ್ಠಿಸಿ ಬ್ಯಾಂಕ್ಗಳಿಂದ ಸಾಲ ಪಡೆದು ಮಾರಾಟ ಮಾಡುತ್ತಿದ್ದ ತಂಡವೊಂದರ ಸದಸ್ಯರಿಬ್ಬರನ್ನು ಕಾರ್ಕಳ ಎಎಸ್ಪಿ ಡಾ. ಸುಮನಾ ನೇತೃತ್ವದಲ್ಲಿ ಕಾರ್ಕಳ ನಗರ ಠಾಣಾಧಿಕಾರಿ ರವಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಕಾರ್ಕಳ ನಗರದ ಜರಿಗುಡ್ಡೆ ನಿವಾಸಿ ನಜೀಮ್, ಮಂಗಳೂರು ಕೋಟೆಕಾರು ನಿವಾಸಿ ಅಬೂಬಕ್ಕರ್ ಪ್ರಕರಣದ ಆರೋಪಿತರು.ಜೂನ್ 2ರಂದು ಜರಿಗುಡ್ಡೆಯಲ್ಲಿ ನಿಲ್ಲಿಸಿದ್ದ ನೊಂದಾವಣೆಯಾಗದ ಪಿಕ್ಅಪ್ ಜೀಪನ್ನು ಆರೋಪಿತರು ಕಳವುಗೈದು ನಕಲಿ ನಂಬ್ರ ಅಂಟಿಸಿ ಉಪಯೋಗಿಸುತ್ತಿದ್ದರು.

ಸೊತ್ತು ಕಳೆದುಕೊಂಡಿರುವ ಪೆರ್ವಾಜೆ ಸಲಾಂ ಖಾನ್ ಈ ಬಗ್ಗೆ ನಗರ ಠಾಣೆಗೆ ದೂರೊಂದನ್ನು ಸಲ್ಲಿಸಿ, ನಜೀಮ್ನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಕಾರ್ಯಪ್ರವೃತರಾದ ಎಎಸ್ಪಿ ಡಾ. ಸುಮಾನಾ ಅವರು ಆರೋಪಿಗಳ ಬಂಧನಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸಿರುವ ಫಲವಾಗಿ ಆರೋಪಿಗಳಿಂದ ಎಗರಿಸಿರುವ ಪಿಕ್ಅಪ್ ವಾಹನ ಪತ್ತೆಯಾಗಿದೆ. ಅದರ ಮೌಲ್ಯ 4 ಲಕ್ಷ ಎಂದು ಅಂದಾಜಿಸಲಾಗಿದೆ.ಆರೋಪಿ ನಜೀಮ್ನ ವಿರುದ್ಧ ಮಣಿಪಾಲ ಠಾಣೆಯಲ್ಲಿ, ಕೋಟೆಕಾರು ಅಬೂಬಕ್ಕರ್ ವಿರುದ್ಧ ಹುಬ್ಬಳ್ಳಿ, ಲಕ್ನೋ ಮೊದಲಾದೆಡೆಗಳಲ್ಲಿ ಇಂತಹದೇ ಪ್ರಕರಣದಡಿ ಕೇಸು ಇರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here