Thursday 25th, April 2024
canara news

ತ್ರಾಸಿ ಅಪಘಾತದಲ್ಲಿ ಮರಣಪಟ್ಟ ಮೂರು ಕಂದಮ್ಮಗಳ ಅಂತಿಮ ಸಂಸ್ಕಾರ ತಲ್ಲೂರಿನಲ್ಲಿ - ಅಸಂಖ್ಯಾತ ಜನರ ಅಶ್ರು ತರ್ಪಣ

Published On : 24 Jun 2016   |  Reported By : Bernard J Costa


ಕುಂದಾಪುರ, ಜೂ.23: ತಾರೀಕು 21 ರಂದು ಬೆಳೆಗ್ಗೆ ನೆಡೆದ ಭೀಕರ ಅಪಘಾತದಲ್ಲಿ ಮರಣಪಟ್ಟ ಡಾನ್ ಬೊಸ್ಕೊ ಸ್ಕೂಲಿನ 3 ಮಕ್ಕಳ, ನಿಖಿತಾ ಮತ್ತು ಅನನ್ಯ  ಕಟ್‍ಬೆಲ್ತುರಿನ ಲಾಯ್ಡ್ ಮತ್ತು ಮರೀನಾ ಡಿಸಿಲ್ವಾರ ಪುತ್ರಿಯರ ಮತ್ತು ರಾಯ್ಸ್‍ಟನ್  ಹೆಮ್ಮಾಡಿಯ ವಿನೋದ್ ಮತ್ತು ಶಾಂತಿ ಲೋಬೊರ ಪುತ್ರ ಇವರ ಅಂತಿಮ ಸಂಸ್ಕಾರವು ಉಡುಪಿ ಧರ್ಮಪ್ರ್ಯಾಂತ್ಯದ ಬಿಶಪ್ ಅತಿ ವಂದನೀಯ ಡಾ|ಐಸಾಕ್ ಜೆರಾಲ್ಡ್ ಲೋಬೊ ಇವರ ಪ್ರಧಾನ ಯಾಜಕತ್ವದಲ್ಲಿ ತಲ್ಲೂರಿನ St. Francis Assisi  ಇಗರ್ಜಿಯಲ್ಲಿ ಪವಿತ್ರ ಬಲಿದಾನ ಮೂಲಕ, ಅಂತಿಮ ಸಂಸ್ಕಾರಗಳೊಂದಿಗೆ ನೇರವೇರಿತು.

 

 

  ಈ ವೇಳೆ ಹೆತ್ತವರ, ಕುಂಟುಬಸ್ತರ ರೋಧನ ಮುಗಿಲು ಮುಟ್ಟಿತು. ಮಕ್ಕಳ ಶವವನ್ನು ದಫನಿಸುವಾಗ, ಇಡಿ ಜನಸ್ತೋಮ ದುಖದ ಕಟ್ಟೆ ಒಡೆದು ರೋಧಿಸತೊಡಗಿತು. ಹೆತ್ತವರು ತಮ್ಮ ಮಕ್ಕಳ ಶವವವನ್ನು ಅಪ್ಪಿ ಮುದ್ದಾಡಿ ಗೋಳಿಡುವುದನ್ನು ಕಲ್ಲ ಹ್ರದಯದವರನ್ನು ಕರಗಿಸುವಂತಿತ್ತು.ಆಕಾಶದಿಂದ ಮಳೆಯ ನೀರು ಬೀಳುತ್ತಾ ಇರುವಾಗ ಇದರ ಜೊತೆ ಜನಸ್ತೋಮನದ ಕಣ್ಣಿರು ಕೂಡ ಧರೆಗಿಳಿಯ ತೊಡಗಿತು.

ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜ ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು, ಸಾಸ್ತಾನ ಇಗರ್ಜಿಯ ಧರ್ಮಗುರು ವ|ವಾಲ್ಟರ್ ಮೆಂಡೊನ್ಸಾ ಸಂದೇಶ ನೀಡಿದರು. ಬರೋಡಾ ಧರ್ಮಪ್ರಾಂತ್ಯದ ಧರ್ಮಗುರು ಡಿಸಿಲ್ವಾ ಕುಟುಂಬದ ವ|ಪಾವ್ಲ್ ಡಿಸಿಲ್ವಾ ಶ್ರಂದಾಜಲಿ ಅರ್ಪಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ, ಸದಸ್ಯರ ಜೊತೆ ಅಂತ್ಯಕ್ರಿಯೆಯ ಸಿದ್ದತೆಗಳಿಗೆ ಸಹಕರಿಸಿದ್ದರು.

ಈ ಅಂತ್ಯ ಕ್ರಿಯೆಗೆ ಹಲವು ಸಾವಿರ ಜನರು ಹಾಜರಿದ್ದರು. ಶವಗಳ ದರ್ಶನಕ್ಕೆ ನೂಕುನುಗ್ಗಲೂಂಟಾಯ್ತು. ಹಲವಾವಾರು ಧರ್ಮಭಗಿನಿಯರು, ಹಲವಾರು ರಾಜಾಕೀಯ ದುರೀಣರು ಹಾಜರಿದ್ದರು. ಬೈಂದೂರು ಶಾಸಕ ಜೋಪಾಲ ಪೂಜಾರಿ, ಡಿ.ಎಸ್.ಪಿ. ಅಣ್ಣಾಮಲೈ, ಪ್ರಾರ್ಥಿವ ಶರೀರಗಳಿಗೆ ಪುಶ್ಪಗಳನ್ನಿಟ್ಟು ನಮಿಸಿದರು. ಡಿ.ವೈ.ಎಸ್.ಪಿ. ಮಂಜುನಾಥ್ ಶೆಟ್ಟಿ ಮತ್ತು ಗ್ರಹ ರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಪುಸ್ಪವನ್ನು ಅರ್ಪಿಸಿ ಪ್ರಾರ್ಥಿವ ಶರೀರಗಳಿಗೆ ಸೆಲ್ಯುಟ್ ಮಾಡಿ ಗೌರವ ಅರ್ಪಿಸಿದರು.

ಶವಗಳನ್ನು ಮೆರವಣಿಗೆಯ ಮೂಲಕ ಇಗರ್ಜಿಗೆ ತರುವಾಗ ದಾರಿ ಮಧ್ಯದಲ್ಲಿ ಜಾತಿ ಭೇದವಿಲ್ಲದಂತೆ ರಸ್ತೆ ಮಧ್ಯೆ ಜನ ನಿಂತು ಶವಗಳಿಗೆ ಹೂ ಹಾರಗಳನ್ನು ಅರ್ಪಿಸಿ ಗೌರವ ಸಲ್ಲಿಸಿತು. ಕೆಲವಡೆ ಸ್ವಇಚ್ಚೆಯಂತೆ ಅಂಗಡಿಗ ಮಟ್ಟುಳನ್ನು ಮುಚ್ಚಿ ಬಂದ್ ಆಚರಿಸಿ ಗೌರವ ಸಲ್ಲಿಸಿದರು.

ಈ ಮುಗ್ದ ಮಕ್ಕಳ ಅಂತ್ಯಕ್ರಿಯೆಗೆ ಜಿಲ್ಲಾದ್ಯಾಂತ ಅಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಅಸಂಖ್ಯಾತ ಕ್ರೈಸ್ತ ಭಾಂದವರು ಆಗಮಿಸಿದ್ದಲ್ಲದೆ, ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ, ಮುಸ್ಲಿಂ ಎನ್ನದೆ ಎಲ್ಲಾ ಸಮುದಾಯದರು ಆಗಮಿಸಿ ಈ ನತದ್ರಶ್ಟ ಮಕ್ಕಳಿಗೆ ಅಂತಿಮ ನಮನ ಸಲ್ಲಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here