Friday 19th, April 2024
canara news

ಭಾರದ ಶಾಲಾಬ್ಯಾಗ್ ಹೊರಲು ಸರಕಾರ `ಶಾಲಾ ಬಸ್ ಭಾಗ್ಯ'ಯೋಚಿಸಲಿ. ವಾಹನದ ಬಣ್ಣ ಬದಲಾದರೆ ಸಾಲದು ಮಕ್ಕಳ ಪಾಲಕರು ಬದಲಾಗಬೇಕು

Published On : 25 Jun 2016   |  Reported By : Rons Bantwal


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಾಹನ ಅಪಘಾತಕ್ಕೆ ಅಲ್ಲಿನ ಜನತೆಯೇ ಪ್ರಮುಖ ಕಾರಣವೇ ಹೊರತು ಸರಕಾರವೂ ಅಲ್ಲ ಪೆÇಲೀಸರೂ ಅಲ್ಲ ಎಂದರೆ ತಪ್ಪಾಗಲಾರದು. ಅಜಾಗರುಕತಾ ವಾಹನ ಚಾಲವನೆ ಮತ್ತು ಮಕ್ಕಳ ಪಾಲಕರೇ ಕಾರಣ ಎಂದರೆ ತಪ್ಪಾಗಲಾರದು. ಮಕ್ಕಳ ಮೋಜಿಗಾಗಿ ಬೇಕಾಬಿಟ್ಟಿ ವ್ಯಯಿಸುವ ಪಾಲಕರು ಮಕ್ಕಳ ಸುರಕ್ಷತೆ ಬಗ್ಗೆ ಯೋಜಿಸುವುದೇ ಇಲ್ಲ. ಮಕ್ಕಳ ಪ್ರಯಾಣಕ್ಕೆ ಹೆಚ್ಚುವರಿಯಾಗಿ ಭರಿಸಲು ಹಿಂದೆ ಸರಿಯುವ ಧೋರಣೆಯೇ ಇವೆಲ್ಲಾ ಅವಾಂತರಕ್ಕೆ ಕಾರಣ..! ಪಾಲಕರಿಗೆ ರಾಜಕಾರಣಿಗಳ ದೋಸ್ತಿಗತಿ ಮಾತ್ರ ಪ್ರಮುಖ ಆಗುತ್ತದೆಯೇ ಹೊರತು ತಮ್ಮ ಮಕ್ಕಳ ಭವಿಷ್ಯವಾಗಲೀ, ಊರಿನ ಉದ್ಧಾರವಾಗಲೀ ಆಗಬೇಕೆನ್ನುವ ಆಶಯವೇ ಇಲ್ಲ. ತಮ್ಮ ಕಾರ್ಯಕ್ರಮಗಳಿಗೆ ಹಾಜರಾಗುವ ರಾಜಕಾರಣಿಗಳ ಅಭಯವೇ ಇವರ ಪಾಲಿನ ದೊಡ್ಡತನವಾಗಿದೆ. ಸದಾ ಬರೇ ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿ ಕೊಳ್ಳುವ ಇಲ್ಲಿನ ಜನತೆಗೆ ತಮ್ಮೂರೇ ವಿಶ್ವವಾಗಿದೆ. ಜಗತ್ತನ್ನು ತಿಳಿದು ತಮ್ಮನ್ನು ಜಾಗತೀಕರಣದತ್ತ ಒಯ್ಯುವ ಚಿಂತನೆ ಇವರಿಗಿಲ್ಲ. ಇಲ್ಲಿನ ಶಿಕ್ಷಕರೂ ಅಷ್ಟೇ..! ತನ್ನ ವಿದ್ಯಾಥಿರ್üಗಳು ಜಗದಗಲ ಸುತ್ತಾಡಿ ಅಧುನಿಕತೆಯ ವಿಶ್ವವ್ಯಾಪಿ ಅರಿಯು ಪಡೆದು ಊರಿನತ್ತ ಆಗಮಿಸಿದರೂ ಅಂದು ತಾನು ಕಲಿಸಿದ ಪಾಠದ ಬಗ್ಗೆಯೇ ತಿಳಿಸಿ ಸಮಾಧಾನ, ಸಂತೋಷ ಪಡುತ್ತಾರೆ. ಆದರೆ ತಮ್ಮ ಅಸುಪಾಸಿನಲ್ಲಿನ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಚಿಂತಿಸಲಾರರು.

ಹೆತ್ತವರು ತಮ್ಮಮಕ್ಕಳಿಗೆ ಸಂಸ್ಕಾರಯುತ ಬದುಕನ್ನು ಬಯಸುವ ಬದಲಾಗಿ ಮಕ್ಕಳನ್ನು ನಾಡಿನ ಪ್ರತಿಭಾನ್ವಿತ -ರನ್ನಾಗಿಸುವುದೇ ಪಾಲಕರ ಚಿಂತೆ, ಸಾಧನೆಯಾಗುತ್ತಿದೆ. ಪೆÇೀಷಕರಲ್ಲಿ ತಮ್ಮ ಮಕ್ಕಳು ಆದಷ್ಟು ಅಧಿಕ ಅಂಕಗಳನ್ನು ಪಡೆಯ ಬೇಕೆನ್ನುವ ಆಶಯ ಕಾಡುತ್ತಿದೆಯೇ ಹೊರತು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ನೀಡುವ ಗೋಜಿಗೆ ಹೋಗುವಲ್ಲಿ ವಿಫಲರಾಗುತ್ತರೆ. ಇದೇ ದೊಡ್ಡ ದುರಂತವಾಗಿ ಕಾಡುವ ಕಾರಣ ಅನಾಹುತಗಳು ತಮ್ಮ ವಠಾರಗಲಲ್ಲಿ ಸರದಿಯಲ್ಲಿ ನಿಲ್ಲುತ್ತ್ತಿವೆ.

ಪ್ರಸ್ತುತ ಒಂದೇ ಸೂರಿನಡಿ ವಾಸಿಸುವ ಇಬ್ಬರು ಸಹೋದರರಲ್ಲಿ ಒಬ್ಬಾತ ವಿದೇಶದಲ್ಲಿದ್ದು ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಓದಿಸುತ್ತಿದ್ದರೆ ಅದೇ ಮನೆಯಲ್ಲಿದ್ದು ಮನೆ ತೋಟ, ಗದ್ದೆ ನೋಡುತ್ತಾ ಹೆತ್ತವರ ಸೇವೆಯಲ್ಲಿ ತೊಡಗಿಸಿದ ಮತ್ತೊರ್ವ ಸಹೋದರನ ಮಕ್ಕಳನ್ನು ಸರಕಾರಿ ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದಿಸುವುದು ಶೋಚನೀಯ. ಇಂಗ್ಲೀಷ್ ಮೀಡಿಯಂನ ಮಕ್ಕಳು ಇಂಗ್ಲೀಷ್‍ನಲ್ಲಿ ಲಟಪಟವಾಗಿ ಮಾತನಾಡುತ್ತ ಶ್ರೀಮಂತ ಮಕ್ಕಳೆನಿಸಿ ಕೊಂಡರೆ ಕನ್ನಡ ಮಾಧ್ಯಮದ ಮಕ್ಕಳು ಕನ್ನಡದಲ್ಲಿ ಮಾತನಾಡಿ ಮುಜುಗರಕ್ಕೆ ಒಳಗಾಗುತ್ತಿರುವಂತೆಯೇ ಅಲ್ಲೇ ಭಿನ್ನತೆ ಹುಟ್ಟ ತೊಡಗುತ್ತದೆ. ಇಲ್ಲಿನ ಇಂಗ್ಲೀಷ್ ಮೀಡಿಯಂ ಮಕ್ಕಳಿಗೆ ಟ್ಯೂಶನ್ ಫ್ಯಾಶನ್ ಆದರೂ, ಕನ್ನಡ ಓದಿನ ಮಕ್ಕಳಿಗೆ ತಾಯಿಯ ಬೋಧನೆಯೇ ಡಿಸ್ಟಿಂಕ್ಷನ್‍ಗೆ ಕಾರಣವಾದಾಗ ಒಂದೇ ಮನೆಯಲ್ಲೇ ಪಾಲಕರಲ್ಲೂ, ಮಕ್ಕಳಲ್ಲೂ ತಾರತಮ್ಯತಾ ಸ್ಪೋಟಿಸÀುತ್ತದೆ. ಇಲ್ಲಿಂದಲೇ ಮೇಲುಕೀಳು ಎಂಬ ಭಾವನೆ ಮನೆಮಂದಿಯಲ್ಲೇ ಸೃಷ್ಟಿಯಾಗಿ ಭೇದಬಾವಗಳ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

ಇಂದು ಹತ್ತಾರು ನಿಮಿಷದ ದಾರಿಗೂ ಶಾಲಾ ವಾಹನ ಅನಿವಾರ್ಯತೆÉ. ಅದಕ್ಕೂ ಕಾರಣ ಎಂದರೆ 20 ಕೆಜಿ ತೂಕದ ಮಗುವಿಗೆ 25 ಕೆಜಿ ಭಾರದ ಶಾಲಾಬ್ಯಾಗ್ ಒತ್ತಡ ಮೂಲ ಕಾರಣ. ಇಂತಹ ಸ್ಪರ್ಧಾತ್ಮಕ ಬದುಕಿನಲ್ಲಿ ಮಕ್ಕಳನ್ನು ಒಂದು ಫರ್ಲಾಂಗು ದೂರಕ್ಕೂ ವಾಹನದಲ್ಲಿ ಕಳುಹಿಸುವ ಪಾಲಕರಿಗೆ ದುರಂತವಾಗಿದೆ. ಇಲ್ಲವಾದರೆ ರಸ್ತೆಯುದ್ದಕ್ಕೂ ಪಿಸುಗುಸು ಮಾತನಾಡುತ್ತಾ ನಲಿದಾಡಿ ಶಾಲೆಗೆ ಹೋಗಬಹುದೆನೋ..? ಮಕ್ಕಳನ್ನು ಜಾಗತೀಕರಣಕ್ಕೆ ಸಿದ್ಧ ಪಡಿಸುವ ಒಂದೇ ಉದ್ದೇಶ ಪಾಲಕರದ್ದಾದರೆ ಶಾಲಾ ಮಂಡಳಿ ಮತ್ತು ಪ್ರಾಂಶುಪಾಲರಿಗೆ 100% ಫಲಿತಾಂಶ ತಂದೊದಗಿಸುವ ಕನಸು..! ಎಲ್ಲರಲ್ಲೂ ದೊಡ್ಡತನ ಕಾಡುವುದು ಸಮಸ್ಯೆಗಳಿಗೆ ಆಹ್ವಾನ.

ಶಾಲಾ ವಾಹನ ಎಷ್ಟು ದುಬಾರಿ ಗೊತ್ತೇ..? ಶಾಲಾ ವಾಹನ ಕಡ್ದಾಯ ಹಳದಿ ಬಣ್ಣದಲ್ಲಿರಬೇಕೆ...?

ಈ ಬಗ್ಗೆ ಎಲ್ಲರೂ ಏನೇನೂ ಹೇಳಬಹುದು ನೂರಾರು ಸಲಹೆಗಳನ್ನೂ ಕೊಡಬಹುದು. ಆದರೆ ವಾಹನದ ಮಾಲಿಕನ ಸಂಕಷ್ಟ, ಆತನಿಗಾಗುವ ನಷ್ಟ ಯಾರು ಬಲ್ಲರು...? ದೈನಂದಿನವಾಗಿ ರಸ್ತೆಗಳಲ್ಲಿ (ಉದಾ: ಉಡುಪಿ-ಮಂಗಳೂರು, ಮುಂಬಯಿ-ಮಂಗಳೂರು-ಬೆಂಗಳೂರು ಮಾರ್ಗಗಳಲ್ಲಿ ಪ್ರವಾಸಿ (ಟೂರಿಸ್ಟ್) ವೊಲ್ವೋ, ಡಿಲಕ್ಸ್, ಸ್ಲೀಪರ್ ಇತ್ಯಾದಿ ಪ್ರಯಾಣಿಕರನ್ನು ಸಾಗಿಸುವ ಬಸ್ ಮಾಲಿಕರು ಯಾಕೆ ಕನಿಷ್ಟ ಒಂದೆರಡು ಶಾಲಾ ಬಸ್/ ವ್ಯಾನ್‍ಗಳನ್ನು ಸೇವೆಗಿಳಿಸುವುದಿಲ್ಲ..? ಕಾರಣ ಇಲ್ಲಿ ಲಾಭಾಕ್ಕಿಂತ ನಷ್ಟವೇ ಜಾಸ್ತಿ. ಕರ್ನಾಟಕದ ಕರಾವಳಿ ತೀರದ ರಾಜಕಾರಣಿಗಳನೇಕರು ನೂರಾರು ಬಸ್ ಮಾಲಿಕರಾಗಿದ್ದಾರೆ. ಸ್ಥಳಿಯ ಮತದಾರದ ವೋಟ್‍ಗಳಿಂದ ಲೇ ಶಾಸಕ, ಸಚಿವ, ಜನಪ್ರತಿನಿಧಿಗಳಾಗಿ ಮೆರೆಯುತ್ತಿದ್ದಾರೆ. ಅವರೇಕೆ ಕನಿಷ್ಠ ತಮ್ಮತಮ್ಮ ಕ್ಷೇತ್ರದ ಮತದಾರದ ಮಕ್ಕಳಿಗೆ ಶಾಲೆಗೆ ಹೋಗುವ ಬಸ್/ ವ್ಯಾನ್‍ಗಳ ಸೇವೆಯತ್ತ ಗಮನ ಹರಿಸುತ್ತಿಲ್ಲ..? ಮಕ್ಕಳ ಪಾಲಕರೂ ಏಕೆ ಇವರಲ್ಲಿ ಕೇಳುವುದಿಲ್ಲ..? ಅಥವಾ ಪರ್ಯಾಯ ವ್ಯವಸ್ಥೆ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ...?

ವಿವಿಧ ರೀತಿಯ ತೆರಿಗೆಗಳು, ಆರ್‍ಟಿಒ, ಟ್ರಾಫಿಕ್, ಇನ್ಸೂರೆನ್ಸ್, ಪರಿಶೀಲನಾ ವೆಚ್ಚ, ಬ್ಯಾಂಕ್ ಸಾಲ, ಅಲ್ಲದೆ ದೈನಂದಿನ ವಾಹನ ನಿರ್ವಾಹಣಾ ವೆಚ್ಚ, ಪೆಟ್ರೋಲ್, ಆಯಿಲ್, ಮೈಟನನ್ಸ್, ಡ್ರೈವರ್, ಕಂಡಕ್ಟರ್ ಸಂಬಳ, ಬತ್ತೆ ಇತ್ಯಾದಿ ಎನ್ನುತ್ತಾ ಸುಮಾರು ನಾಲ್ಕೈದು ಲಕ್ಷ ರೂಪಾಯಿ ವ್ಯಯಿಸಿ (ಉದಾ: ಒಂದು ಓಮ್ನಿ) ವ್ಯಾನ್ ಖರೀಸಿದರೂ ಸರಕಾರದ ನಿಯಮದಂತೆ ಬರೇ 7 ವರ್ಷಗಳ ಚಾಲಾವಣಾವಧಿಯಲ್ಲಿ ದಿನಂಪ್ರತಿ ಗರಿಷ್ಠ 7 ಮಕ್ಕಳನ್ನು ಹೊತ್ತು ವರ್ಷದ 125 ದಿನಗಳಲ್ಲಿ ಓಡಾಡಿಸಿದರೆ ದಿನವೊಂದರಂತೆ ಕನಿಷ್ಠ 1,000 ರೂಪಾಯಿ ಖರ್ಚುಮಾಡಿ 200 ಸಂಪಾದಿಸಿದರೆ ಮಾಲಕನ ಗತಿಯೇನು..? ಇಂತಹ ದುಸ್ಥಿತಿ ಎದುರಿಸಿ ಶಾಲಾ ವಾಹನ ನಡೆಸುವುದಾದರೂ ಹೇಗೆ...? ಪಾಲಕರೂ ಪ್ರತಿ ಮಕ್ಕಳಿಗೆ 125 ದಿನಂಪ್ರತಿ ನೀಡಿದರೆನೇ ದೊಡ್ದ ವಿಷಯ. ಬಾಕಿ ಹಣಕ್ಕೆ ಯಾರು ಜವಾಬ್ದಾರರು..? ಶಾಲಾ ವಾಹನ ಎಂದು ಒಮ್ಮೆ ಹಳದಿ ಬಣ್ಣ ಬಳಿದರೆ... ಮತ್ತೆ ಆ ಬಸ್/ ವ್ಯಾನ್‍ಗಳು ವಿದ್ಯಾಥಿರ್üಳಿಗೆ ಮಾತ್ರ ಸೀಮಿತ..! ಇದು ಮತ್ತು ಅಂಬ್ಯುಲೆನ್ಸ್ ಒಂದೇ ರೂಪ ಪಡೆಯುತ್ತವೆ. ಹಳದಿ ಬಣ್ಣ ಬಳಿದ ವಾಹನ ಅಗತ್ಯ ಕಾಲಕ್ಕೆ ರಸ್ತೆಗಿಳಿದರೂ ಕೂಡಾ ಪಾಲಕರು ಬಿಡಿ ಶಿಕ್ಷಕರೂ ಈ ವಾಹನದಲ್ಲಿ ಪ್ರಯಾಣಿಸಲು ನಾಚುತ್ತಾರೆ..! ಇದು ಮಾಲಕನ ಖಾಸಾಗಿ, ಮನೆಮಂದಿಗರ ಪ್ರಯಾಣಕ್ಕೂ ಬಳಸಲಾಗದು. ಇಡೀ ವರ್ಷದಲ್ಲಿ ಅಂದಾಜು 125 ದಿನಗಳಲ್ಲಿ ಮಾತ್ರ ಶಾಲಾ ವಾಹನಗಳ ಬಳಕೆ ಆಗುತ್ತದೆ. ಆ ರಜೆ ಈ ರಜೆ ಎನ್ನುತ್ತಾ ಉಳಿದ 240 ದಿನಗಳಲ್ಲಿ ಶಾಲಾ ವಾಹನ ಉಪಯೋಗ ಏನು...?. ಸಂಜೆ ಹೊತ್ತು ಆಮಲೆಟ್, ಚೈನೀಸ್ ಗಾಡಿಗೂ ಬೇಡಿಕೆಯಿಲ್ಲದ ಶಾಲಾ ವಾಹನ ನಡೆಸುವ ಮಾಲೀಕರ ಪಾಡೇನು...? ಮಳೆ, ಚಳಿ, ಬಿಸಿಲು ಎನ್ನದೆ ತಮ್ಮ ಖಾಸಾಗಿ ಕಾರ್ಯಕ್ರಮ, ಅಗತ್ಯ ಸೇವೆ ಇತ್ಯಾದಿಗಳನ್ನು ಬದಿಗೊತ್ತಿ ಶಾಲಾ ವಾಹನ ಮಾಲೀಕರು-ಚಾಲಕರು ಮಕ್ಕಳನ್ನು ಜಾಗರುಕತೆಯಿಂದ ಮನೆ-ಶಾಲೆ ಸೇರಿಸುತ್ತಾರೆ. ಇಂದಿನ ಮಕ್ಕಳು ಎಷ್ಟು ಪೆÇೀಕ್ರಿ ಎಂದು ಊಹಿಸಲಾಸಾಧ್ಯ. ಅಂತಹ ಮಕ್ಕಳಿಗೆ ಮನೆಮಂದಿ ಪೆಟ್ಟಾಕಿದರೆ ಸರಿ ಹೋಗುತ್ತೆ... ಆದರೆ ಡ್ರೈವರ್, ಕಂಡಕ್ಟರ್ ಜೋರು ಮಾಡಿದರೂ ಇಲ್ಲಸಲ್ಲದ ಆರೋಪಗಳನ್ನು ಹೊರೆಸಿ ಅದೇ ಪಾಲಕರು ಪೆÇೀಲಿಸು ಠಾಣೆ ಮೆಟ್ಟಲೇರಿದ ಘಟನೆಗಳು ನಮ್ಮಲ್ಲಿ ಕಡಿಮೆಯೇ...? ಇವಕ್ಕೆಲ್ಲಾ ಪರಿಹಾರ ಹುಡುಕುವ ಅಗತ್ಯವಿದೆ. ಸರಕಾರವೇನು ಈ ವಾಹನಗಳಿಗೆ ಸಬ್ಸಿಡಿ, ಸಾಲ ಯೋಜನೆ, ರಸ್ತೆ ತೆರಿಗೆ, ಟ್ರಾಫಿಕ್ ಪೆÇೀಲಿಸ್ ಆರ್‍ಟಿಒ, ಪರಿಶೀಲನೆಯಲ್ಲಿ ವಿನಾಯಿತಿ ನೀಡುತ್ತದೆಯೇ...? ಬದಲಾಗಿ ಶಾಲಾ ವಾಹನ ಎನ್ನುತ್ತಾ ಆ ಮಾಲೀಕರಿಗೆ ಇಲ್ಲಸಲ್ಲದ ಕಾರಣ, ಕ್ರಮಗಳೆಂದು ಇಂತಹ ಸೇವಾನಿಷ್ಠ ಮಾಲೀಕರಿಗೆ ಹೆಚ್ಚಾಗಿಯೇ ಸತಾಯಿಸುತ್ತಾರೆ.

ಬಹುತೇಕವಾಗಿ ಶಾಲಾ ವಾಹನಕ್ಕೆ ಡ್ರೈವರ್, ಕಂಡಕ್ಟರ್ ಸಿಗುವುದೇ ಕಷ್ಟ. ವರ್ಷವಿಡೀ ಅವರು ದಿನಸಂಬಳ ಆಗಿಸಿ ಕೂಲಿಕಾರ್ಮಿಕರಂತೆ ದುಡಿಯ ಬೇಕಾಗುವುದು ಅನಿವಾರ್ಯ. ಸರಕಾರಿ ಬಿಡಿ, ಒಂದು ಖಾಸಾಗಿ ಶಾಲೆಯಲ್ಲಿ ಪೂರ್ಣಕಾಲಿಕವಾಗಿ ಡ್ರೈವರ್, ಕಂಡಕ್ಟರ್‍ಗಳನ್ನು ಇರಿಸುವುದೇ ಕಷ್ಟಕರ. ಕಾರಣ 125 ದಿನಗಳಿಗಾಗಿ ವರ್ಷವಿಡೀ ಸಂಬಳ ನೀಡುವುದಾದರೂ ಹೇಗೆ...? ಇವರಿಗೆ ಶಾಲಾ ರಜಾದಿನಗಳಲ್ಲಿ ಸಂಬಳ ಹೇಗೆ ನೀಡಲು ಸಾಧ್ಯ...? ಅದಕ್ಕಾಗಿ ಸರಕಾರದ ವಿಶೇಷ ಪ್ಯಾಕೇಜ್‍ಗಳಿವೆಯೇ...? ಇಲ್ಲವೇ ಅವರು ರಜಾದಿನಗಳಲ್ಲಿ ಬೇರೆ ಕೆಲಸಕ್ಕೆ ಹೋಗಲಾಗುತ್ತದೆಯೇ...? ಡ್ರೈವರ್, ಕಂಡಕ್ಟರ್‍ಗೆ ವರ್ಷವಿಡೀ ವಿದ್ಯಾಥಿರ್üಗಳ ಪಾಲಕರು ಸಂಬಳ ಭರಿಸಲು ಸಾಧ್ಯವೇ..?

ಜಪಾನ್‍ನಲ್ಲಿ ಒಂದು ಮಗು ಕಾಣೆಯಾಗಿದ್ದಕ್ಕೆ ಅಲ್ಲಿನ ಪೆÇಲೀಸು, ಮಿಲಿಟರಿ, ಸರ್ಕಾರ ಇಡೀ ರಾಷ್ಟ್ರವೇ ಒಂದಾಗಿ ಮಗುವಿನ ಹುಡುಕಾಟದಲ್ಲಿ ತೊಡಗಿಸುತ್ತದೆ. ಆದರೆ ನಮ್ಮಲ್ಲಿ ಸಾವಿರಾರು ಮಕ್ಕಳು ದುರಂತಮಯವಾಗಿ ಕಣ್ಣೆದುರೇ ಅಸುನೀಗಿದರೂ ಕೇಳುವವರಿಲ್ಲ. ಇದಕ್ಕೆ ಜನರ ಮೌನವೇ ಮೂಲ ಕಾರಣ ಎನ್ನ ಬಹುದು. ಅಲ್ಲೊಂದು ಇಲ್ಲೊಂದು ದುರಂತಗಳು ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸರಕಾರ, ಜಿಲ್ಲಾಡಳಿತ ಭವಿಷ್ಯತ್ತಿನ ಚಿಂತನೆಯ ಬಗ್ಗೆ ದೂರದೃಷ್ಠಿಯನ್ನರಿಸಿ ಕ್ರಮಕೈಗೊಳ್ಳದಿರುವುದೇ ಇಂತಹ ದುರ್ಘಟನೆಗಳಿಗೆ ಪ್ರಮುಖ ಕಾರಣವಾಗಿದೆ.

ಪಾಲಕರೂ ಅಷ್ಟೇ..! ತಮ್ಮ ಮಕ್ಕಳನ್ನು ಒಯ್ಯುವ ವಾಹನಗಳ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ ನಡೆದಷ್ಟು ನಡೆಯಲಿ ಎಲ್ಲರ ಬದುಕು ಸಾಗಲಿ ಎಂದೆಣಿಸಿ ಕನಿಷ್ಟ ಈ ಪುಣ್ಯತ್ಮರು ನಮ್ಮ ಮಕ್ಕಳನ್ನು ಒಯ್ಯುತ್ತಾರಲ್ಲಾ ಎಂದೆಣಿಸಿ ತಮ್ಮ ಪಾಡಿಗೆ ತಾವು ಖುಷಿ ಪಡುತ್ತಾರೆ. ದುರ್ಘಟನೆಗಳು ಸಂಭವಿಸಿದಾಗಲೇ ತಮ್ಮ ಹಣೆಬರಹವನ್ನು ನೆನೆದು, ಹೆತ್ತುಹೊತ್ತು ಸಾಕಬೇಕಾದ ಮಕ್ಕಳ ಅಗಲುವಿಕೆಯನ್ನು ಚಿಂತಿಸಿ ಘಟನೆಯ ಮರೆವಿನಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲೇ ಹೊಸ ಸಕರಕಾರ... ಹೊಸ ಭರವಸೆಗಳು.. ಮತ್ತೆ ನೂತನ ಯೋಜನೆಗಳು..! ಅಷ್ಟಕ್ಕೇ ಬದುಕು ಜಟಕಾಬಂಡಿಯಾಗಿ ಸಾಗುತ್ತಲಿರುತ್ತದೆ..!

ನಿಯಮ ಉಲ್ಲಂಘನೆಗೆ ಪೆÇೀಲಿಸರಲ್ಲ ಮಕ್ಕಳ ಪಾಲಕರೇ ಪ್ರಮುಖ ಕಾರಣ. ತಮ್ಮ ಅನುಕೂಲತೆ, ಒಂದಿಷ್ಟು ಹಣದ ಉಳಿತಾಯಕ್ಕೆ ಎಲ್ಲವನ್ನೂ ಗಾಳಿಗೆ ತೂರಾಡುತ್ತಾರೆ. ವಾಹನಗಳ ಸುರಕ್ಷತೆ ಬರೇ ಪೆÇೀಲಿಸರ ಕರ್ತವ್ಯ ಆಗದೆ ಪ್ರತೀಯೋರ್ವ ಮಕ್ಕಳ ಪಾಲಕರು, ಶಿಕ್ಷಕರ ಹೊಣೆಯಾಗಬೇಕು. ಪ್ರಕರಣ ದಾಖಲಿಸುವುದರಿಂದ ವ್ಯವಸ್ಥೆ ಸುಧಾರಣೆ ಅಸಾಧ್ಯ. ಬದಲಾಗಿ ಎಲ್ಲಾ ಕ್ರಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಹಳದಿ ಬಣ್ಣ ಬಳಿದಾಗ ಎಲ್ಲವೂ ಸರಿ ಹೋಗದು. ಓವರ್ ಲೋಡು ನಿಯಂತ್ರಣಕ್ಕೆ ಪೆÇೀಲಿಸರ ಅಗತ್ಯ ಹಾಸ್ಯಸ್ಪದ ವಿಚಾರ. ಮಕ್ಕಳ ಜವಾಬ್ದಾರಿ ಪೆÇೀಲಿಸರಿಗೆ ಅಗತ್ಯವೋ... ಪಾಲಕರಿಗೆ...? ಜನರು ಎಲ್ಲದಕ್ಕೂ ಪೆÇೀಲಿಸರು, ಜನಪ್ರತಿನಿಧಿಗಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವರ್ಗ, ಶಾಲಾ ವಾಹನ ಮಾಲೀಕ, ಚಾಲಕರನ್ನು ದೂರುವುದರಲ್ಲಿ ಅರ್ಥವಿಲ್ಲ. ಮನೆಯಲ್ಲೇ ತಮ್ಮ ತಮ್ಮ ಮಕ್ಕಳಿಗೆ ಶಿಸ್ತುಬದ್ಧತೆ ಕಲಿಸಿ ತಾವೂ ಪಾಲಿಸಿದರೆ ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ.

ಸರಕಾರವು ಶಾಲಾ ಮಕ್ಕಳ ಬ್ಯಾಗ್‍ಭಾರವನ್ನು ಕನಿಷ್ಟ ಭಾರಕ್ಕೆ ಇಳಿಮುಖ ಗೊಳಿಸಿದರೆ ಶಾಲಾ ಅಸುಪಾಸಿನ ಮಕ್ಕಳು ನಡೆದುಕೊಂಡೇ ಶಾಲೆಗೆ ಬರಲು ಅನುಕೂಲ ಆಗಬಹುದು. ಇದರಿಂದ ಬಹುತೇಕ ಪಾಲಕರೂ ಮಕ್ಕಳ ಬ್ಯಾಗ್‍ಹೊತ್ತು ದೈನಂದಿನವಾಗಿ ಶಾಲೆಯತ್ತ ಆಗಮಿಸುವುದನ್ನೂ ತಡೆಯಬಹುದು. ಆವಾಗ ಶಾಲಾ ವಠಾರದಲ್ಲಿ ಪಾಲಕರ ಸಂಖ್ಯೆ ಇಳಿಮುಖ ಆಗುತ್ತಾ ವಾಹನ ದಟ್ಟನೆಯೂ ಕಡಿಮೆಗೊಳ್ಳಲು ಸಾಧ್ಯ.

ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಸರಕಾರಗಳು ಅನ್ನಭಾಗ್ಯ, ಮೊಟ್ಟೆಭಾಗ್ಯ, ಕ್ಷೀರಭಾಗ್ಯ ಇತ್ಯಾದಿ ಹತ್ತಾರು ಯೋಜನೆಗಳನ್ನು ರೂಪಿಸುತ್ತದೆ. ಆದರೆ ಮಕ್ಕಳಿಗೆ ಮನೆಯಿಂದ ಶಾಲೆಗೆ ಕರೆತರಲು ವ್ಯಾನ್‍ಭಾಗ್ಯ ಯಾಕೆ ಯೋಜಿಸುತ್ತಿಲ್ಲ..? ಮಧ್ಯಾಹ್ನದ ಅನ್ನಭಾಗ್ಯಕ್ಕೆ ಮಕ್ಕಳು ಮನೆಯಿಂದಲೇ ಟಿಫಿನ್ ತರಲು ಸಾಧ್ಯವಿದೆ. ಆದರೆ ಅಷ್ಟೊಂದು ಭಾರದ ಶಾಲಾಬ್ಯಾಗ್ ಹೊತ್ತು ಶಾಲೆಗೆ ಬರಲು ಕಷ್ಟಕರವಾಗುವ ಮಕ್ಕಳಿಗೆ ಹೊರೆಭಾಗ್ಯ ಮುಕ್ತ ಶಾಲಾ ವ್ಯಾನ್‍ಭಾಗ್ಯ ಸರಕಾರ ಚಿಂತಿಸಿದರೆ ನೂರಾರು ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸ ಬಹುದು. ಇದು ಮಕ್ಕಳಿಗೂ, ಪೆÇೀಷಕರಿಗೂ ಮತ್ತು ಸರಕಾರಕ್ಕೂ ವರದಾನವಾಗಲಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here