Friday 29th, March 2024
canara news

ಸೃಜನಾ ಮುಂಬಯಿ ಸಂಸ್ಥೆಯಿಂದ ನಡೆಸಲ್ಪಟ್ಟ ಬಹು ಭಾಷಾ ವಿಚಾರಗೋಷ್ಠಿ

Published On : 26 Jun 2016   |  Reported By : Rons Bantwal


ಜಾನಪದ ಸಾಹಿತ್ಯ ನಿರ್ಮಾಣ ಆದದ್ದೇ ಮಹಿಳೆಯರಿಂದ : ಡಾ| ಕೃಷ್ಣ ಕೊಲ್ಹಾರ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.26: ಮಹಾನಗರದಲ್ಲಿನ ಮಹಿಳಾ ಲೇಖಕಿಯರ ಸಂಘಟನೆ `ಸೃಜನಾ' ಮುಂಬಯಿ ಸಂಸ್ಥೆಯು ಕರ್ನಾಟಕ ಸಂಘ ಮುಂಬಯಿ ಸಹಯೋಗದೊಂದಿಗೆ `ಜಾನಪದದಲ್ಲಿ ಮಹಿಳೆ' ವಿಷಯವಾಗಿಸಿ `ಬಹು ಭಾಷಾ ವಿಚಾರ ಗೋಷ್ಠಿ' ಆಯೋಜಿಸಿತ್ತು.

ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಜರುಗಿದ `ವಿಚಾರ ಗೋಷ್ಠಿ' ಅಧ್ಯಕ್ಷತೆಯನ್ನು ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ವಹಿಸಿದ್ದರು.

ಜಾನಪದ ಸಾಹಿತ್ಯ ನಿರ್ಮಾಣ ಆದದ್ದೇ ಮಹಿಳೆಯರಿಂದ. ಜಾನಪದದಲ್ಲಿ ಮಹಿಳೆಯರ ಚಿತ್ರಣ ಕುತೂಹಲಕರವಾಗಿದೆ. ಮಹಿಳೆಯನ್ನು ಶಿಷ್ಠ ಸಾಹಿತ್ಯಕ್ಕಿಂತ ಭಿನ್ನವಾಗಿ ಇಲ್ಲಿ ಚಿತ್ರಿಸಲಾಗಿದೆ. ಯಾವ ಭಾಷೆಗಳಲ್ಲೂ ಮಹಿಳೆಯರ ಭಾವನೆಗಳಲ್ಲಿ ಬದಲಾವಣೆ ಇಲ್ಲ. ಕನ್ನಡದಲ್ಲಿನ ಬೀಸುಕಲ್ಲಿನ ಪದ ಮುಸ್ಲಿಮರಲ್ಲಿ ಚಕ್ಕಿನಾಮ ರೂಪದಲಿ ್ಲಬಂದಿದೆ. ಭಾವನೆಗಳಿಗೆ ಮೂಲವಾದುದೇ ಮಹಿಳೆ. ಇಂದು ಹಿಂದಿನ ಜಾನಪದದ ಸಂದರ್ಭದ ಭಾವನೆಗಳು ಇಲ್ಲ ಎಂದÀು ಅಧ್ಯಕ್ಷೀಯ ನುಡಿಗಳನ್ನಾಡಿ ಡಾ| ಕೃಷ್ಣ ಕೊಲ್ಹಾರ ಎಂದರು.

ಶಾಫಿ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನ್ಯಾ| ಬಿ.ಮೊಯಿದ್ದೀನ್ ಮುಂಡ್ಕೂರು (ಬ್ಯಾರಿ ಭಾಷೆ), ಶ್ರೀಮತಿ ಅರುಷಾ ಎಸ್.ಶೆಟ್ಟಿ (ತುಳು), ಕನ್ನಡ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಜನಿ ಎಸ್.ಪೈ (ಕೊಂಕಣಿ), ಸಮಾಜ ಸೇವಕಿ ಶ್ರೀಮತಿ ವಿಶಾಲಾಕ್ಷಿ (ಕೊಡವ), ಸೃಜನಾ ಸಂಸ್ಥೆಯ ಸಹ ಸಂಚಾಲಕಿ ಶ್ರೀಮತಿ ಮೀನಾಕ್ಷಿ ಕಳಾವಾರ (ಕನ್ನಡ) ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಕರ್ನಾಟಕ ಸಂಘ ಮುಂಬಯಿ ಗೌ| ಕೋಶಾಧಿಕಾರಿ ಎಂ.ಡಿ.ರಾವ್ ಉಪಸ್ಥಿತರಿದ್ದರು.

ಸೃಜನಾದ ರೂವಾರಿ ಡಾ| ಸುನೀತಾ ಎಂ.ಶೆಟ್ಟಿ ಅವರು ಸಭಾಧ್ಯಕ್ಷ ಡಾ| ಕುಲಕರ್ಣಿ ಅವರನ್ನು ಪರಿಚಯಿಸಿದರು. ಕೃತಿ ಗೌರವನ್ನಿತ್ತು ಗೌರವಿಸಿದರು. ಮಿತ್ರಾ ವೆಂಕಟ್ರಾಜ್ ಕುಲಕರ್ಣಿ ಅವರಿಗೆ ಗ್ರಂಥ ಗೌರವ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಶಿಮಂತೂರು ಚಂದ್ರಹಾಸ ಸುವರ್ಣ ತುಳು ಪಾಡ್ದನವನ್ನಾಡಿದರು. ಡಾ| ವಾಣಿ ಉಚ್ಚಿಲ್ಕರ್ ಮೋಯಾ ಭಾಷಾ ಜಾನಪದ ಗೀತೆ ಪ್ರಸ್ತುತ ಪಡಿಸಿದರು.

ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತ ಬಯಸಿದರು. ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಸೃಜನಾ ಸಂಚಾಲಕಿ ದಾಕ್ಷಾಯಣಿ ಯಡಹಳ್ಳಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಮತಾ ಮಲ್ಹಾರ್, ಅನುಸೂಯ ಯಾಳಗಿ, ಯಶೋಧಾ ಶೆಟ್ಟಿ, ಶ್ಯಾಮಲಾ ಮಾಧವ್, ಗಾಯತ್ರಿ ರಾಮು ಅವರು ವಿಚಾರ ಗೋಷ್ಠಿಕಾರರನ್ನು ಪರಿಚಯಿಸಿದರು. ಲಲಿತಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಸೃಜನಾ ಕಾರ್ಯದರ್ಶಿ ಶಾರದಾ ಅಂಬೆಸಂಗಿ ಧನ್ಯವಾದ ಸಮರ್ಪಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here