Friday 19th, April 2024
canara news

ವಾರ್ಷಿಕ ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಪ್ರದಾನಿಸಿದ ಕರ್ನಾಟಕ ಸಂಘ ಮುಂಬಯಿ

Published On : 26 Jun 2016   |  Reported By : Rons Bantwal


ಶ್ರೇಷ್ಠ ಶಿಕ್ಷಕಿಯ ಪ್ರೋತ್ಸಾಹದಿಂದ ಶ್ರೇಷ್ಠ ಸಾಹಿತಿಗೆ ಗೌರವಾರ್ಪಣೆ-ಡಾ| ಎಸ್.ಕೆ ಭವಾನಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.26: ಕರ್ನಾಟಕ ಸಂಘ ಮುಂಬಯಿ ವಾರ್ಷಿಕವಾಗಿ ಕೊಡಮಾಡುವ `ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ-2016'ಯನ್ನು ಇಂದಿಲ್ಲಿ ಮಾಟುಂಗಾದಲ್ಲಿನ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಪ್ರದಾನಿಸಲಾಯಿತು.

ಕರ್ನಾಟಕ ಸಂಘ ಮುಂಬಯಿ ಇದರ ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯ, ಕಲಾಭಾರತಿ ಸಂಚಾಲಕ ಡಾ| ಎಸ್.ಕೆ ಭವಾನಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇತಿಹಾಸ ತಜ್ಞ , ಹಿರಿಯ ಸಾಹಿತಿ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ (ಬಿಜಾಪುರ) ಅವರಿಗೆ ಅವರಿಗೆ 15,000/- ರೂಪಾಯು ಗೌರವಧನ, ಪ್ರಶಸ್ತಿ ಪತ್ರ, ಫಲಪುಷ್ಫ, ಫಲಕವನ್ನೀಡಿ ಶಾಲು ಹೊದಿಸಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.

ಮುಂಬಯಿ ಮಹಾನಗರಿ ನನ್ನ ಸಾಹಿತ್ಯದ ಮೂಲ ಬೀಜ ಉಳುವಿಗೆ ಕಾರಣ. ಈ ತವರುಮನೆಗೆ ಆಹ್ವಾನಿಸಿ ಪ್ರಾಪ್ತಿಸಿದ ಪ್ರಶಸ್ತಿ ಇದಾಗಿದೆ ಎಂದು ಸಂತೋಷದಿಂದ ಸ್ವೀಕರಿಸುತ್ತೇನೆ. 1960ರಲ್ಲಿ ಸೆಂಟ್ರಲ್ ಟೆಲಿಗ್ರಾಫ್ಸ್‍ನಲ್ಲಿ ಸೇವಾ ನಿರತ ಸಮಯ ಮುಂಬಯಿಯಲ್ಲಿ ಸಾಹಿತ್ಯಕೂಟ ರೂಪುಗೊಂಡಿತು. ಕರ್ನಾಟಕದ ರಾಜಧಾನಿ ಬೆಂಗಳೂರುನವರು, ಸಾಹಿತ್ಯ ಕಾರ್ಯ ಮುಂಬಯಿಯಲ್ಲಿ ಹೆಚ್ಚು ನಡೆಸುತ್ತಿದ್ದು, ನನ್ನ ಸಾಹಿತ್ಯಾಸಕ್ತಿಗೆ ಪ್ರೇರಣೆಯಾಗಿತ್ತು. ನಾನು ಮುಂಬಯಿಯಲ್ಲೇ ಮೊದಲು ನಾಡಿನ ಹಿರಿಯ ಸಾಹಿತಿಗಳ ಜೊತೆ ಫಳಗಿದವನಾಗಿ ದ್ದೇನೆ ಎಂದು ಪ್ರಶಸ್ತಿಗೆ ಉತ್ತರಿಸಿ ಡಾ| ಕೃಷ್ಣ ಕುಲಕರ್ಣಿ ನುಡಿದರು.

ಪ್ರಶಸ್ತಿ ಪ್ರಯೋಜಕಿ ಡಾ| ಸುನೀತಾ ಶೆಟ್ಟಿ ಮಾತನಾಡಿ ನನ್ನ ಪಾಲಿಗೆ ಒದಗಿದ ಅಂದು ಒದಗಿದ ಅತ್ತಿಮಬ್ಬೆ ಪ್ರಶಸ್ತಿ ಗೌರವ ಮೊತ್ತಕ್ಕೆ ಒಂದಿಷ್ಟು ಸೇರಿಸಿ ನಾನು ಕರ್ನಾಟಕ ಸಂಘ ಮುಂಬಯಿ ಸಂಸ್ಥೆಗೆ ನೀಡಿರುವ ದತ್ತಿಯಿಂದ ಈ ಪ್ರಶಸ್ತಿ ಸುಮಾರು ಆರು ವರ್ಷಗಳಿಂದ ಪ್ರದಾನಿಸುತ್ತಿದೆ. ಮುಂಬಯಿಯಲ್ಲೇ ಇದ್ದ ಡಾ| ಕೃಷ್ಣ ಕೋಲ್ಹಾರ ಅವರಿಗೆ ಈ ಪ್ರಶಸ್ತಿ ಸಂದಿರುವುದು ಅಭಿನಂದನೀಯ ಎಂದರು.

ಶ್ರೇಷ್ಠ ಶಿಕ್ಷಕಿ ಸಾಹಿತಿ ಡಾ| ಸುನೀತಾ ಶೆಟ್ಟಿ ಅವರು ಕರ್ನಾಟಕ ಸಂಘಕ್ಕೆ ನೀಡಿರುವ ದತ್ತಿಯ ಮೂಲಕ ಈ ಪ್ರಶಸ್ತಿ ಸ್ಥಾಪನೆಗೊಂಡು ಇದೀಗ 7ನೇ ಪ್ರಶಸ್ತಿಯು ಡಾ| ಕೊಲ್ಹಾರ ಅವರಿಗೆ ಸಂದಿದೆ. ಡಾ| ಸುನೀತಾ ಅವರಂತಹ ಮೇಧಾವಿಗಳು ನೀಡಿರುವ ಈ ಪ್ರಶಸ್ತಿಗೆ ತನ್ನದೇ ಆದ ಗಣತೆ ಇದೆ. ಮುಂಬಯಿಯಲ್ಲಿದ್ದು ಇದೀಗ ಕರ್ನಾಟಕದಲ್ಲಿ ನೆಲೆಸಿರುವ ಡಾ| ಕೃಷ್ಣ ಅವರ ಪಾಂಡಿತ್ಯ ಪೂರ್ಣ ಬರಹಗಳು ಹಾಗೂ ಸಂಶೋಧನಾ ಕೃತಿಗಳನ್ನು ವಿಮರ್ಶಕರ ಹಾಗೂ ಸಹೃದಯರ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಡಾ| ಭವಾನಿ ತಿಳಿಸಿದರು.


ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಂಘದ ಮಾಜಿ ಉಪಾಧ್ಯಕ್ಷ ಡಾ| ಭರತ್‍ಕುಮಾರ್ ಪೆÇಲಿಪು ಕಾರ್ಯಕ್ರಮ ನಿರ್ವಾಹಿಸಿ ವಂದನಾರ್ಪಣೆಗೈದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here