Friday 19th, April 2024
canara news

ಬಳ್ಕೂರು ಗ್ರಾ. ಪಂ.: 94 ಸಿಸಿ ಯಡಿ ಹಕ್ಕುಪತ್ರ ವಿತರಣೆ

Published On : 01 Jul 2016   |  Reported By : Bernard J Costa


ಕುಂದಾಪುರ ತಾಲೂಕು ಬಳ್ಕೂರು ಗ್ರಾ. ಪಂ. ವ್ಯಾಪ್ತಿಯ ಕಳ್ಳಿಗುಡ್ಡೆ ಎಂಬಲ್ಲಿ 94ಸಿಸಿ ಅಡಿಯಲ್ಲಿ ಮಂಜೂರಾದ ಸುಮಾರು 34 ಕುಟುಂಬಗಳ ಪೈಕಿ ಸಾಂಕೇತಿಕವಾಗಿ ರಾಧಾ ಕುಲಾಲ್ತಿ ಕಳ್ಳಿಗುಡ್ಡೆ ಎಂಬ ಮಹಿಳೆಗೆ ಬಳ್ಕೂರು ಗ್ರಾ.ಪಂ. ಪರವಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಹಕ್ಕು ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ. ಪಂ. ಅಧ್ಯಕ್ಷ ಅಕ್ಷತ ಶೇರೆಗಾರ್‍ರವರು ‘1982ರಲ್ಲಿ ತಾಲೂಕಿನಾದ್ಯಂತ ನೆರೆ ಬಂದಾಗ ಕಂದಾಯ ಇಲಾಖೆಯ ವತಿಯಿಂದ ಬಳ್ಕೂರಿನ ನದಿ ದಡದಲ್ಲಿದ್ದವರನ್ನು ಕಳ್ಳಿಗುಡ್ಡೆಯ ಸರಕಾರಿ ಜಾಗಕ್ಕೆ ಸರಕಾರಿ ಅಧಿಕಾರಿಗಳ ವತಿಯಿಂದಲೇ ಸ್ಥಳಾಂತರಿಸಲಾಗಿತ್ತು. ಮತ್ತು ಇಲಾಖೆಯ ಅಧಿಕಾರಿಗಳು ಸೂಚಿಸಿದ ಸ್ಥಳಗಳಲ್ಲಿ ಅವರು ಮನೆಯನ್ನು ನಿರ್ಮಿಸಿಕೊಂಡಿದ್ದರು. ಆದರೆ ಆ ನಂತರ ಆ ಸ್ಥಳ ಗೋಮಾಳ ಎಂಬ ಕಾರಣಕ್ಕೆ ಹಕ್ಕು ಪತ್ರ ನೀಡಲು ನಿರಾಕರಿಸಲಾಗಿತ್ತು. ಆದರೆ ಮಾನ್ಯ ಜಯಪ್ರಕಾಶ್ ಹೆಗ್ಡೆಯವರು ಸಂಸದರಾದ ನಂತರ ಆಗ ಜಿಲ್ಲಾಧಿಕಾರಿಯಾಗಿದದ ಮುದ್ದು ಮೋಹನ್‍ರವರನ್ನು ಮತ್ತು ತಹಶೀಲ್ದಾರರನ್ನು ಸ್ಥಳಕ್ಕೆ ಕರೆತಂದು ಹಕ್ಕು ಪತ್ರ ನೀಡದಿದ್ದರೆ ಅಲ್ಲಿ ನೆಲೆ ನಿಂತ ಜನರ ಬದುಕು ತೀರ ದುಸ್ತರವಾಗುವ ಕಾರಣಕ್ಕೆ ಹಕ್ಕು ಪತ್ರ ನೀಡುವ ಕುರಿತು ಪುನಃ ಪರಿಶೀಲಿಸುವಂತೆ ಒತ್ತಾಯಿಸಿ ಹಕ್ಕು ಪತ್ರ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆ ಕಾರಣಕ್ಕಾಗಿ ನಾನು ಈ ಎಲ್ಲಾ 34 ಫಲನಾನುಭವಿಗಳ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ’ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಬಳ್ಕೂರು ಗ್ರಾ.ಪಂ. ಅಧ್ಯಕ್ಷ ಅಕ್ಷತ್ ಶೇರೆಗಾರ್, ಸದಸ್ಯರಾದ ಅಶೋಕ್ ಕಳ್ಳಿಗುಡ್ಡೆ, ಗೀತಾ ಕಳ್ಳಿಗುಡ್ಡೆ, ನಾಗರಾಜ್ ಪುತ್ರನ್, ಗುರು ಕಳ್ಳಿಗುಡ್ಡೆ, ಪ್ರದೀಪ್ ಮೊಗವೀರ, ಮಹೇಶ್ ಮೊಗವೀರ, ಲಕ್ಷ್ಮಣ್ ಪೂಜಾರಿ, ಮಹೇಶ್ ಪೂಜಾರಿ, ಕುಷ್ಠ ಮೊಗವೀರ, ದಿನೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here