Thursday 25th, April 2024
canara news

ದಕ್ಷಿಣ ಭಾರತೀಯ ಫಿಲ್ಮ್‍ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನಪಡೆಯುತ್ತಿವೆ

Published On : 05 Jul 2016   |  Reported By : Rons Bantwal


ಜಗ್ಗುದಾದಾ... ಚಲನಚಿತ್ರ ನಿರ್ದೇಶಕ ನಾರವಿ ರಾಘವೇಂದ್ರ ಹೆಗ್ಡೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜು.04: ಸ್ವತಃ ನಿರ್ಮಾಪಕರೇ ಆಗಿರುವವರೇ ಬಾಲಿವುಡ್‍ನ ಸಿನೇಮಾಗಳನ್ನು ತಯಾರಿಸುತ್ತಿದ್ದು ಹೊಸಬರಿಗೆ ಅವಕಾಶಗಳು ಬರಿದಾಗಿವೆ. ಅಲ್ಲದೆ ದಕ್ಷಿಣ ಭಾರತೀಯ ಚಲನಚಿತ್ರಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನಗಳನ್ನು ಗಿಟ್ಟಿಸಿಕೊಂಡ ಈ ಸಮಯದಲ್ಲಿ ಬಜೆಟ್ ಚಿತ್ರಗಳತ್ತ ನಾನು ಗಮನ ಹರಿಸಿರುವೆ. ಸದ್ಯ ಹಿಂದಿಯ ಬಾಲಿವುಡ್‍ಕ್ಕಿಂತ ಕನ್ನಡದ ಸ್ಯಾಂಡಲ್‍ವುಡ್, ತೆಲುಗುವಿನ ಟಾಲಿವುಡ್, ತಮಿಳುವಿನ ಟೆಲಿವುಡ್‍ಗಳೂ ಇದೀಗ ಅಂತರಾಷ್ಟ್ರೀಯ ಮಟ್ಟದ ಚಿತ್ರವೀಕ್ಷಕರನ್ನು ಮನಾಕರ್ಷಿಸುವಲ್ಲಿ ಸಫಲತೆ ಪಡೆದಿವೆ. ಇಲ್ಲಿ ಮಿತವ್ಯಯದ ಚಿತ್ರಗಳನ್ನು ರಚಿಸಿಯೂ ಚಿತ್ರರಂಗದಲ್ಲಿ ಮೆರೆಯಲು ಸುವರ್ಣಾವಕಾಶವಿದೆ. ಸದ್ಯ ಕನ್ನಡ ಚಲನಚಿತ್ರಗಳು ಒಳ್ಳೆಯ ಮಟ್ಟದಲ್ಲಿ ಮುನ್ನಡೆಯಿತ್ತಿವೆ. ಇಲ್ಲಿನ ಬಂಡವಾಳವೂ ಪೂರೈಸುವಂತಿದೆ. ಬಾಲಿವುಡ್ ನಲ್ಲಿ ಅದು ಸದ್ಯ ಅಸಾಧ್ಯ ಎಂದು ತುಳು-ಕನ್ನಡಿಗರ ಹಿರಿಮೆಯ, ಜಗ್ಗುದಾದಾ... ಚಲನಚಿತ್ರದ ನಿರ್ಮಾಪಕ, ನಿರ್ದೇಶಕ ರಾಘವೇಂದ್ರ ಹೆಗ್ಡೆ (ರಘು ನಾರವಿ) ಇಂದಿಲ್ಲಿ ಅಂಧೇರಿಪೂರ್ವದ ಲಕ್ಷ್ಮೀ ಇಂಡಸ್ಟ್ರೀಯಲ್ ಎಸ್ಟೇಟ್ ನಲ್ಲಿ ಪತ್ರಕರ್ತರನ್ನುದ್ದೇಶಿಸಿ ತಿಳಿಸಿದರು.

ತಮ್ಮ ಕಥೆ ರಚನೆ, ನಿರ್ಮಾಣ ಹಾಗೂ ನಿರ್ದೇಶನದಲ್ಲಿ `ಜಗ್ಗುದಾದಾ' ಕನ್ನಡ ಚಲನಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ಕಾಮಿಡಿ ಎನ್‍ಟ್ರೈಟೆಯ್ನ್‍ಮೆಂಟ್ ಪಾತ್ರದಲ್ಲಿ ಐರಾವತನಾಗಿ ಮುಖ್ಯ ಭೂಮಿಕೆಯಲ್ಲಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದು, ಆರ್9 ಎಂಟರ್‍ಟೈನ್‍ಮೆಂ ಟ್‍ನಲ್ಲಿ ಆರ್‍ಹೆಚ್ ಎಂಟರ್‍ಟೈನ್‍ಮೆಂಟ್ ಪ್ರಸ್ತುತ ಪಡಿಸಿದ ಜಗ್ಗುದಾದಾ...' ಚಿತ್ರ ಕಳೆದ ಜೂನ್.10ರಿಂದ ತೆರೆಕಂಡು ಭರ್ಜರಿ ಯಶಕಾಣುವಲ್ಲಿ ತುಳು-ಕನ್ನಡಿಗರ ಪ್ರಧಾನ ಪಾತ್ರವಿದೆ. `ಎನ್ನ ಮುದ್ದು ಪೆÇಣ್ಣು' ತುಳು ಹಾಡು ಚಿತ್ರ ವೀಕ್ಷಕರ ಮನೆ, ಮನಮಾತಾಗಿರುವುದು ಮತ್ತು ಕನ್ನಡ ಸಿನೇಮಾ ರಂಗದಲ್ಲೇ ಚಿತ್ರ ಬಿಡುಗಡೆಯ ಒಂದೇ ದಿನದಲ್ಲಿ ಸುಮಾರು 4.90 ಕೋಟಿ ಕಲೆಕ್ಷನ್ ಗಳಿಕೆಗೆ ಪಾತ್ರವಾದ ಮೊತ್ತ ಮೊದಲ ಸಿನೇಮಾ ಇದಾಗಿದೆ ಎಂದೇಳಲು ಅಭಿಮಾನವೆಣಿಸುತ್ತದೆ.

ಸುಮಾರು ಮೂರು ದಶಕಗಳ ಹಿಂದೆ ಮುಂಬಯಿ ಸೇರಿದ ನಾನು ಹಿಂದಿರಂಗದಲ್ಲೇ ಶ್ರಮಿಸುವುದು ಅನಿವಾರ್ಯವಾಯಿತು. ಆ ಮಧ್ಯೆಯಲ್ಲೂ ಹರಿದ ಚಡ್ಡಿಅಂಗಿ ಹಾಕಿ ಏನೂ ಅರಿಯದ ನನನ್ನು ಆಶ್ರಮ ಶಾಲೆಗಳೇ ಬೆಳೆಸಿದ್ದ ಕಾರಣ ನನ್ನಲ್ಲಿ ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆ ಕಾಡುತ್ತಿದ್ದು ಇದರ ಋಣಸಂದಾಯಕ್ಕೆ `ಜಗ್ಗುದಾದಾ' ಕನ್ನಡ ಚಿತ್ರ ನೀಡುವಲ್ಲಿ ಪ್ರೇರಕವಾಯಿತು. ಅಂದಾಜು 1934ರಿಂದ ಆದಿಗೊಂಡ ಕನ್ನಡ ಸಿನೇಮಾರಂಗದ ಮೊದಲ ಚಿತ್ರ `ಸತ್ಯಹರೀಶ್ಚಂದ್ರ' ದಿಂದಲೂ ಈ ವರೇಗೆ ಕನ್ನಡ ಸಿನೇಮಾಗಳಲ್ಲಿ ತುಳು ಭಾಷೆಯ ಸಂಭಾಷಣೆ ಯಾ ಹಾಡುಗಳನ್ನು ಅಳವಡಿಕೆ ಆಗಿರುವುದು ನನ್ನ ಮಟ್ಟಿಗೆ ತಿಳಿದಿಲ್ಲ. ಆದರೆ `ಜಗ್ಗುದಾದಾ' ಸಿನೇಮಾದಲ್ಲಿ `ಎನ್ನ ಮುದ್ದು ಮುದ್ದು ಪೆÇಣ್ಣು ಮಸ್ತ್ ಪೆÇರ್ಲುಳ್ಳಲು...!' ತುಳು ಹಾಡುವೊಂದನ್ನು ಅಳವಡಿಸಿ ತುಳು-ಕನ್ನಡದ ಸಾಮರಸ್ಯತ್ವಕ್ಕೆ ಒತ್ತು ನೀಡಿದ್ದೇನೆ. ಇಲ್ಲಿ ಬಂದೂಕು ಗುಂಡು (ಗನ್‍ಬುಲೆಟ್) ಹಾರಾಟದ ಕ್ಷಣಾರ್ಧದಲ್ಲಿ ದರ್ಶನ್ ಅವರ ದೇಹರಚನೆಯಲ್ಲಿ ಹೊಸ ಕಲ್ಪನೆ ಮೂಡಿಸಿರುವೆ.

ಬಾಲಿವುಡ್ ರಂಗದ ದಿಗ್ಗಜರುಗಳಾದ ವಿಪುಲ್ ಶ್ಹಾ, ದಾದಾ ಕೋಣ್ಕೆ, ಜಬ್ಬರ್ ಪಾಟೇಲ್ ಅವರ ಗರಡಿಯಲ್ಲಿ ಸಹಾಯಕನಾಗಿ ಪಳಗಿದ ನಾನು ನಂತರ ಕಿರುತೆರೆಯತ್ತ ಒಲವು ಮೂಡಿಸಿದೆ. ಈ ವರೆಗೆ ಸುಮಾರು ನನ್ನಿಂದ ರಚಿತ 500ಕ್ಕೂ ಅಧಿಕ ಟಿವಿ ಧಾರವಾಹಿಗಳÀು ಕಿರುತೆರೆಯಲ್ಲಿ ಪ್ರಕಟವಾಗಿದ್ದು ಬಹುತೇಕವು ಇಂದಿಗೂ ಜನಮಾನಸದಲ್ಲಿ ರಾರಾಜಿಸಿವೆ.ಸದ್ಯ ಕಲರ್ಸ್ ಟಿವಿಯಲ್ಲಿ ಅಶೋಕ, ಉಡಾನ್, ಇಸ್ಕಾ ರಂಗ್ ಸಫೇದ್, ಸ್ಟಾರ್ ಟಿವಿಯಲ್ಲಿ ದಿಯಾ ಔರ್ ಬಾತೀ, ಏಕ್ ಲಡ್ಕಿ ಸುವಾಹಿಶಿ, ಇಸ್ಕ್‍ಬಾಝ್, ಜಾನ ನಾ ದಿಲ್‍ಸೆ ದೂರ್..., ಸೋನಿ ಟಿವಿಯಲ್ಲಿ ಕ್ರೈಂ ಪೆಟ್ರೋಲ್ ಇತ್ಯಾದಿ ಧಾರವಾಹಿಗಳÀು ಪ್ರಸಾರವಾಗುತ್ತಿವೆ. ಎಂದರು. ಈ ಸಂದರ್ಭದಲ್ಲಿ ಬಾಲಿವುಡ್‍ನ ಕೇಶವಿನ್ಯಾಸಕಾರ, ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಅತ್ತೂರು ಡಾ| ಶಿವರಾಮ ಕೆ.ಭಂಡಾರಿ ಉಪಸ್ಥಿತರಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಅರಸ್‍ಕಟ್ಟೆ ನಿವಾಸಿಗಳಾದ ಪದ್ಮಯ್ಯ ಹೆಗ್ಡೆ ಮತ್ತು ಮುತ್ತು ಹೆಗ್ಡೆ ದಂಪತಿ ಸುಪುತ್ರರಾದ ಇವರು ಆಶ್ರಮ ಶಾಲೆ ನಾರವಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳದ ಆಶ್ರಮ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮೂಡಬಿದ್ರೆಯ ಆಶ್ರಮ ಶಾಲೆಯಲ್ಲಿ ಫ್ರೌಡಶಾಲೆ ಓದಿದಷ್ಟೇ ಇವರ ಶಿಕ್ಷಣ. ಬಳಿಕ ಮುಂಬಯಿ ಸೇರಿದರೂ ಪಿಯುಸಿ ಓದಲು (ವಲಸೆ) ಮೈಗ್ರೇಶನ್ ಸರ್ಟಿಫಿಕೇಟ್ ಅಡ್ಡಿಯಾಗಿ ಶಿಕ್ಷಣ ವಂಚಿತನಾದ ಇವರದ್ದು ಬಹುದೊಡ್ಡ ಸಾಧನೆ. ಸದ್ಯ ಪತ್ನಿ ರೇವತಿ ಹೆಗ್ಡೆ, ಸುಪುತ್ರ ಮಾ| ರೋಹನ್ ಹೆಗ್ಡೆ, ಸುಪುತ್ರಿ ಕು| ರಿವಾ ಹೆಗ್ಡೆ ಅವರೊಂದಿಗೆ ಸಮೃದ್ಧಿಯ ಸಾಂಸರಿಕ ಬದುಕು ಸಾಗಿಸುತ್ತಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here