Saturday 20th, April 2024
canara news

ಜಿಲ್ಲಾ ರಂಗ ಮಾಹಿತಿ ಕೈಪಿಡಿ

Published On : 07 Jul 2016   |  Reported By : Rons Bantwal


ಕರ್ನಾಟಕ ನಾಟಕ ಅಕಾಡೆಮಿಯು `ಜಿಲ್ಲಾ ರಂಗ ಮಾಹಿತಿ ಕೈಪಿಡಿ' ಇದರ ಸರಣಿಯಲ್ಲಿ ಉಡುಪಿ ಜಿಲ್ಲಾ ಸಮಗ್ರ ರಂಗ ಮಾಹಿತಿ ಕೈಪಿಡಿಯನ್ನು ರಚಿಸಲು ನಿರ್ಧರಿಸಿದ್ದು, ಇದರ ಮಾಹಿತಿ ಕ್ರೋಢೀಕರಣದ ಜವಾಬ್ದಾರಿಯನ್ನು ಜಿಲ್ಲೆಯ ಹಿರಿಯ ನಾಟಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿ ಇದರ ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪ್ರದೀಪ್‍ಚಂದ್ರ ಕುತ್ಪಾಡಿಯವರಿಗೆ ನೀಡಿದೆ.

ಕೈಪಿಡಿಯು ಜಿಲ್ಲಾ ರಂಗ ಇತಿಹಾಸ ಮತ್ತು ಪರಂಪರೆ, ರಂಗಪ್ರಕಾರಗಳು, ಜನಪದ ರಂಗಭೂಮಿ, ರಂಗಚಟುವಟಿಕೆಗಳು, ಮಕ್ಕಳ ರಂಗಭೂಮಿ, ವೃತ್ತಿ ಹಾಗೂ ಹವ್ಯಾಸಿ ನಾಟಕ ತಂಡಗಳು ಮತ್ತು ಕಲಾವಿದರು, ನೇಪಥ್ಯ ಕಲಾವಿದರು, ತಂತ್ರಜ್ಞರು, ನಾಟಕ ಪ್ರದರ್ಶನಕ್ಕೆ ಯೋಗ್ಯವಾದ ಬಯಲು ರಂಗಮಂದಿರಗಳು (ಲಭ್ಯವಿರುವ ಸೌಲಭ್ಯಗಳೊಂದಿಗೆ), ಜಿಲ್ಲೆಯ ನಾಟಕಕಾರರು ಹಾಗೂ ಬರೆದ ನಾಟಕಗಳ ಪಟ್ಟಿ ಹೀಗೆ ಇನ್ನಿತರ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರಬೇಕೆಂಬ ಆಶಯದ್ದಾಗಿರುತ್ತದೆ.

ಆದುದರಿಂದ ಜಿಲ್ಲೆಯ ಎಲ್ಲಾ ರಂಗತಂಡಗಳು, ಕಲಾವಿದರು, ತಂತ್ರಜ್ಞರು, ನಾಟಕಕಾರರು ತಮ್ಮ ಚುಟುಕು ಪರಿಚಯ ಹಾಗೂ ಭಾವಚಿತ್ರವನ್ನು ಜುಲೈ 17ರ ಒಳಗೆ ಪ್ರದೀಪ್‍ಚಂದ್ರ ಕುತ್ಪಾಡಿ, `ರಂಗಭೂಮಿ', ಕುತ್ಪಾಡಿ ಅಂಚೆ, ಉಡುಪಿ-574118 (ದೂರವಾಣಿ: 9448952847) ಇಲ್ಲಿಗೆ ಕಳುಹಿಸಿಕೊಡಬೇಕಾಗಿ ವಿನಂತಿ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here