Thursday 18th, April 2024
canara news

ಹುಬ್ಬಳ್ಳಿಯಲ್ಲಿ 97ನೇ ಶಾಖೆ ಸೇವಾರಂಭಿಸಿದ ಭಾರತ್ ಬ್ಯಾಂಕ್

Published On : 14 Jul 2016   |  Reported By : Rons Bantwal


ಭಾರತ್ ಬ್ಯಾಂಕ್ ಬಾಂಧವ್ಯತೆಯ ಪ್ರತೀಕ : ಗೌತಮ್ ಬೇಕಳ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಹುಬ್ಬಳ್ಳಿ, ಜು.14: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 97ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಹುಬ್ಬಳ್ಳಿ ಕೇಂದ್ರ ಪ್ರದೇಶದ ಕೊಪ್ಪಿಕಾರ್ ರಸ್ತೆಯಲ್ಲಿನ ಸ್ಯಾಟಲೈಟ್ ಕಾಂಪ್ಲೆಕ್ಸ್‍ನಲ್ಲಿ ಸೇವಾರಂಭಿಸಿದ್ದು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಸೇವಾರಂಭ ಗೊಳಿಸಿದರು.

ಗೌರವ್ವಾನಿತ ಅತಿಥಿüಗಳಾಗಿ ಹಿರಿಯ ಉದ್ಯಮಿ ಕಟ್ಟಡದ ಮಾಲೀಕ ಗೌತಮ್ ಬೇಕಳ್ ಉಪಸ್ಥಿತರಿದ್ದು, ಜ್ಯೋತಿ ಬೆಳಗಿಸಿ ಸಾಂಕೇತಿಕವಾಗಿ ಶಾಖೆಯನ್ನು ಉದ್ಘಾಟಿಸಿದರು. ಮತ್ತು ಸಾಯಿ ಪ್ಯಾಲೇಸ್ ಹೊಟೇಲು ಸಮೂಹದ ನಿರ್ದೇಶಕ ರವಿ.ಎಸ್.ಶೆಟ್ಟಿ ಎಟಿಎಂ ಸೇವೆ, ಬ್ಯಾಂಕ್‍ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ ಲಾಕರ್ ಸೇವೆಗಳಿಗೆ ಚಾಲನೆಯನ್ನೀಡಿ ನೂತನ ಉನ್ನತಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ವಿಶೇಷ ಆಮಂತ್ರಿತರಾಗಿ ಗುಜರಾತ್ ಬಿಲ್ಲವರ ಸಂಘದ ಸಂಸ್ಥಾಪಕ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಯುವೋದ್ಯಮಿಗಳಾದ ಅಭಯ್ ಬೇತಳ್, ಅಶ್ವಿನ್ ಬೇತಾಳ್, ಅನುಪಮ್ ಬೇತಾಳ್, ಸಮಾಜ ಸೇವಕರುಗಳಾದ ದಿಲೀಪ್ ಭಾಯಿ ವಿ.ತೇಲಿಸಾರ್, ನಾರಾಯಣ ಆಚಾರ್ಯ, ರಾಜೇಂದ್ರ ಶೆಟ್ಟಿ (ಪಂಜುರ್ಲಿ), ರವಿಕಾಂತ್ ಶೆಟ್ಟಿ ಇನ್ನಾ, ಶಶಿಕಾಂತ್ ಶೆಟ್ಟಿ, ವಿಜಯ್ ಸಾಲ್ಯಾನ್ ಇರುವೈಲು (ಬೆಳಗಾವಿ), ಸುನೀಲ್ ಆರ್.ಪೂಜಾರಿ ಹೆಜ್ಮಾಡಿ, ವ್‍ಪ್ರಕಾಶ್ ಕೆ.ಪೂಜಾರಿ, ಶ್ರವನ್‍ಕುಮಾರ್ ಹೆಗ್ಡೆ, ಮಾರುತಿ ಶಿಂಧೆ ಉಪಸ್ಥಿತರಿದ್ದು ಶುಭಾರೈಸಿದರು.

ಮೇರಾ ಭಾರತ್ ಮಹಾನ್ ಎಂಬಂತೆ ಭಾರತ್ ಬ್ಯಾಂಕ್ ಕೂಡಾಸಹಕಾರಿರಂಗದಲ್ಲಿ ಅಸಾಧಾರಣ ಸೇವೆಗೈದು ಮಹಾನ್‍ವೆಣಿಸಿದೆ. ಭಾರತ್ ಬ್ಯಾಂಕ್ ಬಾಂಧವ್ಯತೆಯ ಪ್ರತೀಕವಾಗಿದೆ. ಭಾರತಕ್ಕೆ ಈವ್ಯಾಖ್ಯಾನ ಶಕ್ತಿಯಾಗಿದರೆ ವ್ಯಾಪರಸ್ಥರ ಪಾಲಿನಲ್ಲಿ ಬಿಸಿಬಿ ಶಕ್ತಿ ಅಡಗಿದೆ. ಮುಂಬಯಿಯಲ್ಲಿ ಹುಟ್ಟಿಬಂದು ಹುಬ್ಬಳ್ಳಿಯಲ್ಲಿ ಸೇವೆಗೆ ಅಣಿಗೊಂಡ ಈ ಬ್ಯಾಂಕ್ ನಮ್ಮೆಲ್ಲರ ಪಾಲಿಗೆ ಶಕ್ತಿ ತುಂಬಿದೆ. ಜಾತಿಕ್ಕಿಂತ ನೀತಿಯೇ ಮೇಲಾಗಿಸಿ ಸಹಕಾರಿರಂಗದಲ್ಲಿ ತನ್ನದೇ ಆದ ಪ್ರತಿಷ್ಠೆ ರೂಪಿಸಿದ ಈ ಬ್ಯಾಂಕ್ ಜನತೆಯ ಪಾಲಿಗೆ ಕಲ್ಪವೃಕ್ಷವಾಗಲಿ. ಎಲ್ಲಿ ಗೌರವವಿದೆಯೋ ಅಲ್ಲಿ ಸಮಾನತೆ ಇದೆ ಅದರಂತೆ ಭಾರತ್ ಬ್ಯಾಂಕ್ ಬಾಂಧವ್ಯತೆಯ ಪ್ರತೀಕವಾಗಿ ಜನಪ್ರಿಯತೆ ಪಡೆದಿದೆ ಎಂದು ಗೌತಮ್ ಬೇಕಳ್ ತಿಳಿಸಿದರು.

ಭಾರತ್ ಬ್ಯಾಂಕ್‍ನ ಸೇವೆ ವರ್ಣಿಸಲು ಶಬ್ದಗಳಿಲ್ಲ. ಆಥಿರ್üಕ ಸೇವೆಯಲ್ಲಿ ನೂರು ಶತ ಫಲಿತಾಂಶ ನೀಡುತ್ತಿರುವ ಈ ಬ್ಯಾಂಕ್ ಸಹಕಾರಿ ರಂಗದ ಗಣತೆಯನ್ನು ಹೆಚ್ಚಿಸಿದೆ. ಭಾರತ್ ಬ್ಯಾಂಕ್ ಗ್ರಾಹಕರ ಸೇವೆಯನ್ನು ಅತ್ಯುನ್ನತವಾಗಿ ಪರಿಗಣಿಸುತ್ತಿದೆ. ಗ್ರಾಹಾಕರಿಗೆ ಅವಶ್ಯ ಖಾತೆಗಳನ್ನು ಪ್ರವರ್ತಿಸಿ ಬ್ಯಾಂಕು ಅವರ ನೆರವಿಗೆ ಧಾವಿಸಿ ಸಂತೃಪ್ತಿ ಪಡೆದಿದೆ ಎಂದು ರವಿ.ಎಸ್.ಶೆಟ್ಟಿ ನುಡಿದರು.

ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಮಾತನಾಡಿ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದ ಬ್ಯಾಂಕ್ ಇದಾಗಿದೆ. ಕರ್ಮಚಾರಿಗಳ ದಕ್ಷತೆ, ಸರಳತೆ, ವಿನಯಶೀಲತೆ, ಪ್ರಾಮಾಣಿಕತೆ ಬ್ಯಾಂಕ್‍ನ ಗಣನೀಯ ಪ್ರಮಾಣದಲ್ಲಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತವಾಗಿದೆ. ಭಾರತ್ ಬ್ಯಾಂಕ್ ಹೊರನಾಡಿನ ಹೆಮ್ಮೆಯಾಗಿದೆ. ಜಯ ಸುವರ್ಣರ ಪ್ರೀತಿಯಿಂದ ಬ್ಯಾಂಕ್ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಸೇವಾ ಪ್ರತೀಕವಾಗಿ ಮುನ್ನಡೆಯುತ್ತಿರುವ ಬ್ಯಾಂಕ್ ಹಣಕಾಸು ರಂಗದ ಆಸ್ತಿಯಾಗಿದೆ ಎಂದರು.

ಅಮೀತ್ ಬೇತಾಳ್, ಶಂಕರ್ ಕೆ.ಸುವರ್ಣ ಖಾರ್ ಸಂದರ್ಬೋಚಿತವಾಗಿ ಮಾತನಾಡಿ ಶುಭಶಂಸನೆಗೈದರು.

ಕಾರ್ಯಕ್ರಮದಲ್ಲಿ ಜಯ ಸುವರ್ಣ, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕ ನಿತ್ಯಾನಂದ ಡಿ. ಕೋಟ್ಯಾನ್, ಶೋಭಾ ದಯಾನಂದ್ (ನಿವೃತ್ತ ಜಿಎಂ) ಉಪಸ್ಥಿತರಿದ್ದು, ಹುಬ್ಬಳ್ಳಿ ಶಾಖೆಯ ಮುಖ್ಯಸ್ಥ ಗಣೇಶ್ ಎನ್.ಅಮೀನ್, ಸಹಾಯಕ ಪ್ರಬಂಧಕ ಸುರೇಶ್ ಕುಂದರ್, ಇತರೇ ಉದ್ಯೋಗಿಗಳಾದ ನಿರಂಜನ್ ಕೊಟ್ಟಾರಿ, ಕೆ.ಅಭಿಜಿತ್, ನಿಖಿತಾ ಅಮೀನ್, ಸಚಿನ್ ಪೂಜಾರಿ ಮತ್ತು ಮಾರ್ಕೆಟಿಂಗ್ ತಂಡಕ್ಕೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಲೀಲಾವತಿ ಜಯ ಸುವರ್ಣ, ಸುನಂದ ಮೋಹನ್ ಪೂಜಾರಿ, ಜಗನ್ನಾಥ್ ಎಂ.ಅಮೀನ್, ಸಹಾಯಕ ಮಹಾ ಪ್ರಬಂಧಕ ಬಾಲಕೃಷ್ಣ ಎಸ್.ಕರ್ಕೇರ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್ ಉಪಸ್ಥಿತರಿದ್ದರು.

ಉಳ್ಳೂರು ಶೇಖರ್ ಶಾಂತಿ ಅವರು ವಾಸ್ತುಪೂಜೆ, ವಾಸ್ತುಪೂಜೆ, ವಾಸ್ತು ಬಲಿ, ವಾಸ್ತುಹೋಮ, ದ್ವಾರಪ್ರವೇಶ ಉಳ್ಳೂರು ಧನಂಜಯ ಶಾಂತಿ ಮತ್ತು ಉಳ್ಳೂರು ದಿನೇಶ್ ಶಾಂತಿ ಅವರು ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಭಾಸ್ಕರ್ ಟಿ.ಸಾಲ್ಯಾನ್, ಶ್ವೇತಾ ವಿನೋದ್ ಕೋಟ್ಯಾನ್ ಟಿ.ಸಾಲ್ಯಾನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಉಪ ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿ, ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಎನ್.ಅಮೀನ್ ಕೃತಜ್ಞತೆ ಸಲ್ಲಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here