Tuesday 23rd, April 2024
canara news

ಸಂತ ಲಾರೆನ್ಸ್ ಅತ್ತೂರು ಇಗರ್ಜಿಗೆ ಕಿರು ಮಹಾ ದೇವಾಲಯ (ಬಾಸಿಲಿಕಾ) ಎಂದು ಸಾರುವ ಬಗ್ಗೆ ಬಿಷಪ್ ಜೆರಾಲ್ಡರಿಂದ ಪತ್ರಿಕಾ ಗೋಷ್ಟಿ

Published On : 16 Jul 2016   |  Reported By : Bernard J Costa


ಉಡುಪಿ: ಜಗದ್ಗುರು ಪೋಪ್ ಫ್ರಾನ್ಸಿಸರು ಅತ್ತೂರು ಸಂತ ಲಾರೆನ್ಸ್ ಇಗರ್ಜಿಗೆ ಬಾಸಿಲಿಕಾದ ಮನ್ನಣೆ ನೀಡುವ ಬಗ್ಗೆ ಎಪ್ರಿಲ್‍ನಲ್ಲಿ ನಿರ್ಧರಿಸಿದ್ದರು. ಅಗಸ್ಟ್ ಒಂದರಂದು, ಸಂತ ಲಾರೆನ್ಸ್ ಇಗರ್ಜಿ ಇನ್ನು ಮುಂದೆ ಬಾಸಿಲಿಕಾ ಎಂದು ಸಾರುವ ಸಂಭ್ರಮದ ಘೋಷಣೆ ಮತ್ತು ಸಮರ್ಪಣಾ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಲು ಪತ್ರಿಕಾ ಗೋಷ್ಟಿಯನ್ನು ಬಿಷಪ್‍ರ ಕಾರ್ಯಲಯದ ಸಭಾಭವನದಲ್ಲಿ ಕರೆದಿದ್ದರು.

‘ಇದೊಂದು ಜೀವಮಾನದಲ್ಲೆ ಬಹು ಅಪರೂಪದ ಪವಿತ್ರ ಕಾರ್ಯಕ್ರಮವಾಗಿದ್ದು, ಇದೊಂದು ಚಾರಿತ್ರಿಕ ಘಟನೆಯಾಗಲಿದೆ, ಅತ್ತೂರು ಈಗ ಬಾಸಿಲಿಕಾದ ಮನ್ನಣೆ ದೊರಕುವುದರಿಂದ ಅತ್ತೂರಿನ ಪಾವಿತ್ರ್ಯತೆ ಮತ್ತು ಮಹತ್ವ ಹೆಚ್ಚುವುದು ಮಾತ್ರವಲ್ಲಾ ಭಕ್ತರಿಗೆ ಕ್ರಪಾ ಕಟಾಕ್ಷೆಗಳು ಹೆಚ್ಚಿನ ರೀತಿಯಲ್ಲಿ ದೊಕುವುದು, ಆದ್ದರಿಂದ ಸಂಭ್ರಮದ ಘೋಷಣೆ ಮತ್ತು ಸಮರ್ಪಣಾ ಕಾರ್ಯಕ್ರಮಕ್ಕೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಹಾಗೂ ಸಂತ ಲಾರೆನ್ಸರ ಕ್ರಪಾ ವರಗಳನ್ನು ಹಾಗೆ ಅಧ್ಯಾತ್ಮಿಕ ಲಾಭಗಳನ್ನು ¥ಪಡೆಯ ಬೇಕು’ ಎಂದು ಅ|ವ| ಬಿಷಪ್ ಡಾ|ಜೆರಾಲ್ಡ್ ಐಸಾಕ್ ಲೋಬೊ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.

ಈ ಅಪರೂಪದ ಕಾರ್ಯಕ್ರಮಕ್ಕೆ ಭಾರತದ ಎಲ್ಲಾ ನಾಲ್ಕೂ ಕಾರ್ಡಿನಲ್‍ಗಳು ಭಾಗವಹಿಸುವರು, ಹಲವು ಆರ್ಚ್ ಬಿಷಪ್‍ಗಳು, ಸುಮಾರು 30 ಬಿಷಪ್‍ಗಳು, 300 ಕ್ಕೂ ಹೆಚ್ಚು ಧರ್ಮಗುರುಗಳು ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ಭಾಗವಹಿಸುರೆಂದು ತಿಳಿಸಿದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ್ ಸಂಪರ್ಕ ಅಧಿಕಾರಿ ಧರ್ಮಗುರು ವ|ಡೆನಿಸ್ ಡೆಸಾ ಪ್ರಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಮೊನ್ಸಿಂಜೆರ್ ವ|ಬಾಪ್ಟಿಸ್ಟ್ ಮಿನೇಜಸ್ ಪತ್ರಕರ್ತರ ಸಂದೇಹಗಳಿಗೆ ಉತ್ತರವನ್ನು ನೀಡಿದರು. ಬಾಸಿಲಿಕಾ ಘೋಷಣಾ ಕಾರ್ಯಕ್ರಮದ ಸಂಚಾಲಕ ವ|ಲಾರೆನ್ಸ್ ಡಿಸೋಜಾ ‘ಅತ್ತೂರು ಪುಣ್ಯ ಕ್ಷೇತ್ರ ಎಲ್ಲಾ ಧರ್ಮಿಯರ ಸದ್ಭಾವನೆ ಉಳ್ಳ ಕ್ಷೇತ್ರವಾಗಿದ್ದು, ನಾವೆಲ್ಲರೂ ಸೇರಿ ಈ ಮಹತ್ತರವಾದ ಬಾಸಿಲಿಕಾ ಘೋಷಣಾ ಕಾರ್ಯಕ್ರಮವನ್ನು, ಯಶಸಿನ್ನಾಗಿ ಮಾಡೋಣ’ ಎಂದು ಧನ್ಯವಾದ ನೀಡಿದರು. ಕಾರ್ಕಳ ಆತ್ತೂರಿನ ರೆಕ್ಟರ್ ಧರ್ಮಗುರು ವ|ಜಾರ್ಜ್ ಡಿಸೋಜಾ, ಕ್ರಿಶ್ಚಿಯನ್ ಪತ್ರಕರ್ತರ ಸಂಚಾಲಕ ಮೈಕಲ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಲಾರೆನ್ಸ್ ಅಗೋಸ್ತ್ 10 ರಂದು ಧರ್ಮಬಲಿಯಾಗಿದ್ದು, ಅಗೋಸ್ತ್ ಒಂದರಂದು ಅವರ ಧರ್ಮಬಲಿಯ ಹಬ್ಬದ ಆಚರಣೆಗಾಗಿ ಅಂದು 9.30ಕ್ಕೆ ನೊವೆನಾ ಆರಂಭ ಮಾಡಿ, 10 ಗಂಟೆಗೆ ಸಂಭ್ರಮದ ಘೋಷಣ ಧಾರ್ಮಿಕ ಕಾರ್ಯಕ್ರಮ ಆರಂಭವಾಗುವುದು. ಅದ ನಂತರ ಸಾರ್ವಜನಿಕ ಸಭಾಕಾರ್ಯ ಕ್ರಮ ನೆಡೆಯುವುದು, ಇದರಲ್ಲಿ ರಾಜಕೀಯ ಧುರಿಣರು, ಗಣ್ಯರು ಅಪಾರ ಸಂಖ್ಯೆಯಲ್ಲಿ ಜನತೆ ಪಾಲ್ಗೊಳುತ್ತಾರೆ. ಮಧ್ಯಾನ್ನ ಒಂದು ಗಂಟೆಗೆ ಎಲ್ಲರಿಗೂ ಸಸ್ಯಹಾರಿ ಭೋಜನ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಲಾಗಿದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here