Thursday 28th, March 2024
canara news

ಡೊಂಬಿವಿಲಿ ಪೂರ್ವದಲ್ಲಿ 19ನೇ ಶಾಖೆ ತೆರೆದ ಮೊಡೇಲ್ ಬ್ಯಾಂಕ್

Published On : 16 Jul 2016   |  Reported By : Rons Bantwal


ಶತಮಾನದ ಸೇವೆ ಸಹಕಾರಿ ಕ್ಷೇತ್ರಕ್ಕೆ ಮಾದರಿ: ಡಾ| ಕಲ್ಯಾಣ್ಕರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.16: ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ 19ನೇ ನೂತನ ಶಾಖೆಯು ಇಂದಿಲ್ಲಿ ಶನಿವಾರ ಪೂರ್ವಾಹ್ನ ಡೊಂಬಿವಿಲಿ ಪೂರ್ವದ ಮನಪಾಡ ರಸ್ತೆಯಲ್ಲಿನ ಶಿವಾಜಿ ಉದ್ಯೋಗ್ ನಗರದ ಶ್ರೀ ಕಾಂಪ್ಲೆಕ್ಸ್‍ನಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಥಾಣೆ ಜಿಲ್ಲಾ ಕಲೆಕ್ಟರ್ ಮತ್ತು ನ್ಯಾಯಧಿಕಾರಿ (ಮ್ಯಾಜಿಸ್ಟ್ರೇಟ್) ಡಾ| ಮಹೇಂದ್ರ ಕಲ್ಯಾಣ್ಕರ್ (ಐಎಎಸ್) ರಿಬ್ಬನ್ ಕತ್ತರಿಸಿ ಸೇವಾರ್ಪಣೆಗೈದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ'ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಡೊಂಬಿವಿಲಿ ಪಶ್ಚಿಮದಲ್ಲಿನ ಬಾಲಯೇಸು ಸಮರ್ಪಿತ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ವಿಕ್ಟರ್ ದಲ್ಮೇತ್ ಧಾರ್ಮಿಕ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ತಸೀಲ್ದಾರ್ ಕಿರಣ್ ಸುರವಸೆ, ಕಲ್ಯಾಣ್‍ನ ಎಸ್‍ಡಿಒ ಪ್ರಸಾದ್ ಉಕರ್ಡೆ ಅತಿಥಿüಗಳಾಗಿ ಹಾಗೂ ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ ವೇದಿಕೆಯಲ್ಲಿ ಆಸೀನರಾಗಿದ್ದರು.

ಡಾ| ಕಲ್ಯಾಣ್ಕರ್ ಮಾತನಾಡಿ `ಸಹಕಾರಿ ಕ್ಷೇತ್ರದಲ್ಲಿ ಮೋಡೆಲ್ ಬ್ಯಾಂಕ್‍ನ ಸೇವೆ ಅದ್ಭುತವಾದದ್ದು. ಈ ಸಾಧನೆ ಅಭಿನಂದನೀಯ. ಮಾಹಿಮ್‍ನಲ್ಲಿ ಬ್ಯಾಂಕ್‍ನ 8ನೇ ಶಾಖೆಯನ್ನು ನಾನೇ ಉದ್ಘಾಟಿಸಿದ್ದು ನಾನೋರ್ವ ಈ ಬ್ಯಾಂಕ್‍ನ ಹಿತೈಷಿ ಆಗಿದ್ದೇನೆ. ಕರ್ಮಚಾರಿಗಳ ದಕ್ಷತೆ, ಸರಳತೆ, ವಿನಯಶೀಲತೆ, ಮತ್ತು ಆಡಳಿತ ಮಂಡಳಿಯ ಪ್ರಾಮಾಣಿಕತಾ ಸೇವೆ ಬ್ಯಾಂಕ್‍ನ ಗಣನೀಯ ಪ್ರಮಾಣದಲ್ಲಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತವಾಗಿದೆ. ಆದುದರಿಂದಲೇ ಮೋಡೆಲ್ ಬ್ಯಾಂಕ್ ಹೊರನಾಡಿನ ಹೆಮ್ಮೆಯಾಗಿದೆ. ಹಣಕಾಸಿನಿಂದ ಹಿಂದುಳಿದ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಆಥಿರ್üಕವಾಗಿ ಬಲ ಪಡಿಸಿದ ಬ್ಯಾಂಕ್ ಇದಾಗಿದೆ. ಬ್ಯಾಂಕ್ ತನ್ನ ವ್ಯವಹಾರ ಎಷ್ಟರ ಮಟ್ಟಿಗೆ ಬೆಳೆಸಿದೆ ಅನ್ನುವುದಕ್ಕಿಂತ ಯಾವ್ ರೀತಿಯ ಸೇವೆಯನ್ನಿತ್ತು ಗ್ರಾಹಕರನ್ನು ಸಮೃದ್ಧಿ ಗೊಳಿಸಿದೆ ಎನ್ನುವುದು ಮುಖ್ಯ. ಇಂತಹ ಗುರುತರ ಸೇವೆ ಮೈಲಿಗಲ್ಲು ಆಗುತ್ತದೆ' ಎಂದರು.

`ಹಣಕಾಸು ವ್ಯವಹಾರದಲ್ಲಿ ಗಂಡಾಂತರ (ರಿಸ್ಕ್) ತಪ್ಪಿಸುವುದು ಅತೀ ಪ್ರಾಮುಖ್ಯವಾಗಿರುತ್ತದೆ. ಏಕೆಂದರೆ ಗ್ರಾಹಕರು ತಮ್ಮ ಗಳಿಕೆಯ ಪ್ರತೀಯೊಂದು ಪೈಸೆಯಲ್ಲೂ ಬ್ಯಾಂಕ್‍ನಲ್ಲಿ ವಿಶ್ವಾಸವಿರುತ್ತದೆ. ಈ ಭರವಸೆ ಪೂರೈಸಲು ಮೋಡೆಲ್ ಬ್ಯಾಂಕ್ ಬದ್ಧವಾಗಿದೆ' ಎಂದÀು ಜೋನ್ ಡಿ'ಸಿಲ್ವಾ ಹಾರೈಸಿದರು.

ಆಲ್ಬರ್ಟ್ ಡಿ'ಸೋಜಾ ಅಧ್ಯಕ್ಷೀಯ ನುಡಿಗಳನ್ನಾಡಿ `ಶತಮಾನದ ಸೇವೆಯಲ್ಲಿರುವ ಈ ಬ್ಯಾಂಕ್ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದೆ. ಆದಿಯಿಂದಲೂ ವ್ಯವಹಾರ ದೃಢತೆಯೊಂದಿಗೆ ಕ್ಷೇಮಾಭಿವೃದ್ಧಿಯ ಮುನ್ನಡೆದ ಬ್ಯಾಂಕ್ ಇದಾಗಿದೆ. ಎಲ್ಲಾ ಬ್ಯಾಂಕ್‍ಗಳಿಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತಿರುವುದೇ ಈ ಬ್ಯಾಂಕ್‍ನ ವಿಶಿಷ್ಟ ್ಯತೆ. ಗ್ರಾಮೀಣ ಜನತೆಯ ಸೇವೆಗೆ ಒತ್ತು ನೀಡುತ್ತಾ ಬಡ, ಜನಸಾಮಾನ್ಯರಲ್ಲೂ ಸೇವೆಯನ್ನು ವ್ಯಾಪಿಸಿದ್ದು ಶೀಘ್ರವೇ ಭಯಂದರ್ ಹಾಗೂ ವಿರಾರ್‍ನಲ್ಲೂ ಸೇವಾರಂಭಿಸಲು ಆರ್‍ಬಿಐನಿಂದ ಅನುಮತಿ ಪಡೆದಿದೆ. ಗ್ರಾಹಾಕರಿಗೆ ಅವಶ್ಯ ಖಾತೆಗಳನ್ನು ಪ್ರವರ್ತಿಸಿ ಬ್ಯಾಂಕು ಅವರ ನೆರವಿಗೆ ಧಾವಿಸಲಿದ್ದು ಗ್ರಾಹಕರು ಬ್ಯಾಂಕ್ ಸೇವೆಯ ಫಲಾನುಭವ ಪಡೆಯುವಂತೆ' ಕೋರಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಅಬ್ರಹಾಂ ಕ್ಲೇಮೆಂಟ್ ಲೊಬೋ, ಪೌಲ್ ನಝರೆತ್, ಸಂಜಯ್ ಶಿಂಧೆ, ಮಾರಿಟಾ ಡಿ'ಮೆಲ್ಲೋ, ಬೆನೆಡಿಕ್ಟಾ ರೆಬೆಲ್ಲೋ, ಲಾರೇನ್ಸ್ ಡಿ'ಸೋಜಾ ಮುಲುಂಡ್, ಆ್ಯನ್ಸಿ ಡಿ'ಸೋಜಾ, ಕಟ್ಟಡ ಮಾಲೀಕ ಅನೀಲ್ ಪಾಟೀಲ್, ಉದ್ಯಮಿಗಳಾದ ಎನ್.ಎಸ್ ಕಾಮತ್, ಶಶಿ ಶೆಟ್ಟಿ ಕಾಟಿಪಳ್ಳ, ಸ್ಟೇನಿ ಎಸ್. ಮಿನೇಜಸ್, ಕೊಂಕಣಿ ಕಲ್ಚರಲ್ ಎಂಡ್ ಚಾರೀಟೇಬಲ್ ಅಸೋಸಿಯೇಶನ್ ಡೊಂಬಿವಿಲಿ ಇದರ ಸೆಲಿನ್ ಅಲ್ವಾರೆಸ್, ಜಾನೇಟ್ ಡಿ'ಮೆಲ್ಲೋ, ಪ್ರೇಮಾ ಸಿಕ್ವೇರಾ, ಜಾನೇಟ್ ಕೋರ್ಡಾ ಸೇರಿದಂತೆ ಬ್ಯಾಂಕ್‍ನ ಷೇರುದಾರರು, ಸ್ಥಳೀಯ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಅಭಿನಂದಿಸಿದರು.

ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಜೆ.ಸಿಕ್ವೇರಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ'ಸೋಜಾ ಹಾಗೂ ಹೆಚ್ಚುವರಿ ಪ್ರಧಾನ ಪ್ರಬಂಧÀಕ ಹರೋಲ್ಡ್ ಎಂ.ಸೆರಾವೋ ಅತಿಥಿüಗಳಿಗೆ ಪುಷ್ಫಗುಪ್ಚವನ್ನೀಡಿ ಅಭಿವಂದಿಸಿದರು. ಕು| ಜೋತಾತ್ಸಾ ್ನ ಫೆರ್ನಾಂಡಿಸ್ ಬೈಬಲ್ ವಾಚಿಸಿದರು. ಶಾಖೆಅಯ ಸಿಬ್ಬಂದಿಗಲಾದ ಮೇರಿ ಎಲ್ಗೆಯೋ, ಮಾರ್ಲಿನ್ ಮಾಥ್ಯು, ರೋಹನ್ ಡಿ'ಸೋಜಾ ಹಾಜರಿದ್ದು, ಎಡ್ವರ್ಡ್ ರಸ್ಕೀನ್ಹಾ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಡೊಂಬಿವಿಲಿ ಶಾಖಾ ಪ್ರಬಂಧಕ ಸಾಮ್ಯುಲ್ ಬಂಗೇರ ಧನ್ಯವದಿಸಿದರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here