Thursday 25th, April 2024
canara news

ಕುಂದಾಪುರ ವಲಯ ಮಟ್ಟದಲ್ಲಿ ಪ್ರಾಥಮಿಕ ಮತ್ತು ಫ್ರೌಡಶಾಲಾ ಚೆಸ್ ಪಂದ್ಯಾಟ

Published On : 17 Jul 2016   |  Reported By : Bernard J Costa


ಕುಂದಾಪುರ, ಜು.16: ಕುಂದಾಪುರ ವಲಯ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ, ಸಂತ ಮೇರಿಸ್ ಫ್ರೌಡ ಶಾಲೆಯ ಆಶ್ರಯದಲ್ಲಿ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಫ್ರೌಡ ಶಾಲಾ ವಿಧ್ಯಾರ್ಥಿಗಳ ಚೇಸ್ ಪಂದ್ಯಾಟವು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ನೆಡೆಯಿತು.

‘ಬೆರೆಲ್ಲಾ ರೀತಿಯ ಆಟಗಳಲ್ಲಿ ಭಾಗವಹಿಸಲು, ಥರ ಥರದ ದೈಹಿಕ ಸಾಮರ್ಥ್ಯ ಅಗತ್ಯ ಇರುತ್ತದೆ, ಆದರೆ ಚೆಸ್ ಆಡಲು, ಗಟ್ಟಿ ಮುಟ್ಟಾದ ದೈಹಿಕ ಸಾಮರ್ಥ್ಯದ ಅಗತ್ಯವಿಲ್ಲಾ, ಇದನ್ನು ಯಾರೂ ಆಡಬಹುದು, ಚದುರಂಗ ಆಟವನ್ನು ಮೈಗೂಡಿಸಿಕೊಂಡರೆ, ಹೆಚ್ಚಿನ ಜ್ಞಾನ ಪಡೆದುಕೊಳ್ಳ ಬಹುದು, ರಾಜಕೀಯ, ಗಣಿತ ವಿಜ್ಞಾನದಲ್ಲಿ ಪ್ರಾವಿಣ್ಯತೆ ಪಡೆದುಕೊಳ್ಳ ಬಹುದು’ ಎಂದು ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ ಈ ಪಂದ್ಯಾಟದ ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ಧರ್ಮಗುರು ವ|ಅನಿಲ್ ಡಿಸೋಜಾ ಪಂದ್ಯಾಟಾಕ್ಕೆ ಶುಭ ಕೋರಿದರು. ಸಂತ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಯಿನಿ ಡೊರೊತಿ ಸುವಾರಿಸ್ ಸ್ವಾಗತಿಸಿದರು. ವಲಯ ಶಿಕ್ಷಣ ಪರಿವೀಕ್ಷಕ ದತ್ತಾತ್ರೇಯ ನಾಯಕ್ ಪ್ರಸ್ತಾವನ ಭಾಷಣ ಮಾಡಿದರು.

ಆಟದ ನಿಯಾಮವಳಿಗ ಬಗ್ಗೆ ತೀರ್ಪುದಾರ ಬಾಬು ಪೂಜಾರಿ ನಿಯಾಮವಳಿಗಳನ್ನು ತಿಳಿಸಿದರು. ವಲಯ ಪ್ರಾರ್ಥಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ಸದಾರಾಮ ಶೆಟ್ಟಿ, ವಲಯ ಅನುದಾನಿತ ಸಂಘದ ಅಧ್ಯಕ್ಷ ಕೆ.ಎಸ್.ಮಂಜುನಾಥ್, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಂತ ಮೇರಿಸ್ ಫ್ರೌಡಶಾಲೆಯ ಮುಖ್ಯಾಧ್ಯಾಯಿನಿ ಸಿಸ್ಟರ ಚೇತನ್, ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಾಧ್ಯಾಯಿನಿ ಸಿಸ್ಟರ್ ಜೊಯ್‍ಸ್ಲಿನ್, ದಾನಿಗಳಾದ ಅಜಿತ್, ರೇಶ್ಮಾ ಡಿಕೋಸ್ತಾ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧೈಹಿಕ ಶಿಕ್ಷಕರಾದ ಚಂದ್ರಶೇಖರ್ ಬಿಜಾಡಿ, ರತ್ನಾಕರ ಶೆಟ್ಟಿ ಪಂದ್ಯಾಟದ ಮೇಲ್ವಿಚಾರಕಾಗಿ ಸಹಕರಿಸಿದರು. ದೈಹಿಕ ಶಿಕ್ಷಕಿ ಶಾಂತಿ ರಾಣಿ ಬಾರೆಟ್ಟೊ ವಂದಿಸಿದರು. ಶಿಕ್ಷಕಿ ಜ್ಯೋತಿ ಡಿಸಿಲ್ವಾ ಕಾರ್ಯಕ್ರಮವನು ನಿರ್ವಹಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here