Wednesday 24th, April 2024
canara news

ತುಳು ಸಂಘ ಬರೋಡಾ ಇದರ ಸಾಂಸ್ಕೃತಿಕ ಸಂಕೀರ್ಣ `ತುಳು ಚಾವಡಿ'ಗೆ ಚಾಲನೆ

Published On : 19 Jul 2016   |  Reported By : Ronida Mumbai


ತುಳು ಮಣ್ಣು ಆಯುರ್ವೇದದ ಮೂಲ: ಡಾ| ಗಣೇಶ್ ಸಂಕಮಾರ್

ಬರೋಡಾ (ಗುಜರಾತ್), ಜು.15: ತುಳು ಭಾಷೆ ಎನ್ನುವುದು ಕೇವಲ ಭಾಷೆಯಲ್ಲ ಅದು ಬದುಕು. ಜಾತಿ ಮತ್ತು ಧರ್ಮದ ಗಡುಯಿಲ್ಲದ ಮನುಷ್ಯನ ಅಸ್ತಿತ್ವ. ತುಳುವಿಗೆ ರಾಜ ಮರ್ಯಾದೆ ದೊರಕಲು ಮುಖ್ಯ ಕಾರಣ ವಿಶ್ವ ತುಳು ಸಮ್ಮೇಳನ. ಡಾ| ವಿರೇಂದ್ರ ಹೆಗ್ಗಡೆಯವರ ಮುದ್ರೆಯಿಂದ ಅದಕ್ಕೆ ರಾಜ ಮರ್ಯಾದೆ ದೊರಕಿತು. ಇಂದು ತುಳು ಭಾಷೆಯನ್ನು ಉಳಿಸಿ ಬೆಳೆಸುವವರು ತುಳುನಾಡಿನ ತುಳುವರಲ್ಲ, ನಾಡು ಬಿಟ್ಟುಹೊರ ಹೋಗಿರುವ ತುಳುವರು.

ಎಂದು ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು ಇದರ ಉಪನ್ಯಾಸಕ, ನಾಡಿನ ಹೆಸರಾಂತ ಸಾಹಿತಿ, ವಾಗ್ಮಿ ಡಾ| ಗಣೇಶ್ ಅವಿೂನ್ ಸಂಕಮಾರ್ ನುಡಿದರು.

ಇಂದಿಲ್ಲಿ ಭಾನುವಾರ ಸಂಜೆ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಸಭಾಗೃಹದಲ್ಲಿ ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಬೆಳ್ತಂಗಡಿ) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಹೊರನಾಡ ಪ್ರಪ್ರಥಮ `ತುಳು ಚಾವಡಿ'ಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಡಾ| ಗಣೇಶ್ ಸಂಕಮಾರ್ ಮಾತನಾಡಿ ತುಳು ಮಣ್ಣಿನ ಜೀವಂತಿಕೆ ಕೃಷಿ ಸಂಸ್ಕೃತಿ ಯಾವಾಗ ಅವಿಭಕ್ತ ಕುಟುಂಬದ ಸಂಬಂಧಗಳು ಚಿಕ್ಕದಾಗಿದೆ. ಆವಾಗ ತುಳುವರ ಆಯುಷ್ಯವು ಕಡಿಮೆ ಆಯಿತು.ತುಳುನಾಡಿನಲ್ಲಿದ್ದ ಅರೋಗ್ಯ ಬೇರೆ ಯಾವ ಸಂಸ್ಕೃತಿಯಲ್ಲೂ ವಿರಳ. ಯಾಕೆಂದರೆ ತುಳುವರು ಸತ್ಯದ ಆರಾಧಕರು. ಮಣ್ಣಿನಲ್ಲಿ ಜಾತಿ ಧರ್ಮದ ಭೇದ ಇಲ್ಲ ತುಳು ಮಣ್ಣಿನ ಆರ್ಯುವೇದದ ಸತ್ಯ ಅದು ಆ ಮಣ್ಣಿನ ನೀರು ಕುಡಿದ ಎಲ್ಲರಲ್ಲೂ ರಕ್ತಗತವಾಗಿದೆ. ಆದ್ದರಿಂದ ವಿಶ್ವದಲ್ಲೇ ತುಳುವರು ಯಾವ ಕ್ಷೇತ್ರದಲ್ಲೂ ಬದುಕು ಕಟ್ಟಬಲ್ಲರು ಎಂದರು.


ಸೂಪರ್‍ಕೇರ್ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ನಿರ್ದೇಶಕ ಬೊಳ್ನಾಡುಗುತ್ತು ಚಂದ್ರಹಾಸ ಎಂ.ರೈ ಅವರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದ್ದು, ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಕಾರ್ಯದರ್ಶಿ, ಪತ್ರಕರ್ತ ರೋನ್ಸ್ ಬಂಟ್ವಾಳ್ ಗೌರವ ಅತಿಥಿsಯಾಗಿ ಉಪಸ್ಥಿತರಿದ್ದರು.

ಚಾವಡಿ ಒಗ್ಗೂಡಿಸುವ ವ್ಯವಸ್ಥೆ ಇದು ಅಗತ್ಯದ ವಿಷಯ. ವೃತ್ತಿಯನ್ನರಿಸಿ ಹೊರನಾಡಿಗೆ ಬಂದರೂ ತುಳುವರೆನ್ನಲು ಹೆಮ್ಮೆ ಆಗುತ್ತದೆ. ಇದೇ ತುಳುವಿನ ಶ್ರೇಷ್ಠತೆ. ತುಳುನಾಡಿನ ಸಂಭ್ರಮಕ್ಕೆ ಹೊರನಾಡ ತುಳುವರಿಗೆ ಸ್ಥಾನಮಾನ ಸೀಗಬೇಕು ಕಾರಣ ಪೆÉೀಟೆಯಿಂದ ಶಹರಕ್ಕಾಗಿಮಿಸಿದವರಿಂದಲೇ ಸಂಸ್ಕೃತಿ ಉಳಿಯುವಂತಾಗಿದೆ. ತುಳುವರು ಒಂದೇ ಮನಸ್ಸಿಗರಾಗೋಣ ಎಂದು ಚಂದ್ರಹಾಸ ರೈ ಕರೆಯಿತ್ತರು.

ರೋನ್ಸ್ ಬಂಟ್ವಾಳ್ ವಾಟ್ಸ್‍ಆ್ಯಪ್ ನಿಧಿಸಂಗ್ರಹಣೆಗಾಗಿ ಹೊಸ ಪ್ರಯೋಗವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಕ್ತ ಮನಸ್ಸಿನಿಂದ ನಿಚ್ಚಲವಾಗಿ ಸ್ತುತಿಸುವ ತುಳುವರು ಸಾಮರಸ್ಯದ ಪ್ರತೀಕರು. ಸರ್ವರಲ್ಲೂ ಸಮಾನತೆ ಕಂಡು ಭಾವೈಕ್ಯತೆಗೆ ಪಾತ್ರವಾದ ತುಳುವರು ಸಂಸ್ಕೃತಿ ಪ್ರಿಯರೂ ಹೌದು. ತುಳುನಾಡ ನಂಬಿಕೆ, ಆಚರಣೆಗಳೂ ವಿಶಿಷ್ಟವಾದುದು. ಇದೇ ಡಿ.9 ರಿಂದ ಐದು ದಿನ ಬದಿಯಡ್ಕದಲ್ಲಿ ನಡೆಯುವ ತುಳುವೆರೆ ಆಯನೊ ಕೂಟ, ಆ.13 ರಿಂದ ಎರಡು ದಿನ ಮೂಲ್ಕಿ ಅಲ್ಲಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಆಯೋಜನೆ ಮಾಡಿರುವ ತುಳು ಸಮ್ಮೇಳನ ಭಾಷೆಯ ಬಲವರ್ಧನೆಗೆ ಪೂರಕವಾಗಲಿದೆ. ನಮ್ಮ ಆಧುನಿಕ ಮಾತೆಯಂದಿರ ಮರ್ಜಿಯ ಭಾಷೆಗೆ ಮಾತೃಭಾಷೆಗಳು ಅವನತಿಯಲ್ಲಿರುವುದೇ ನಮ್ಮ ದುರದೃಷ್ಟ ಎಂದು ಪಶ್ಚತ್ತಾಪ ವ್ಯಕ್ತ ಪಡಿಸಿದರು.

ಶಶಿಧರ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಯೋಗ, ಭಾಗ್ಯ ಬೇಕು. ಇಂದು ಇದು ಕೂಡಿ ಬೆಳಗಿದೆ. ತುಳುವರಿಗೆ ಈ ಸಂಘ ರಾಷ್ಟ್ರಕ್ಕೆ ಮಾದರಿ ಎನ್ನಲು ಅಭಿಮಾನ ಅಣಿಸುತ್ತದೆ. ಈ ಸಂಸ್ಥೆಗೆ ತುಳು ಚಾವಡಿ ಎನ್ನುವ ಮನೆ ಮಾಡುವ ಯೋಗ್ಯತೆ ನನ್ನ ಪಾಲಿಗೆ ಒದಗಿದ್ದೇ ನನ್ನ ಭಾಗ್ಯ ಎಂದರು.

ಸ್ಥಾಪಕ ಸಂಚಾಲಕ ಎಸ್.ಕೆ ಹಳೆಯಂಗಡಿ ಮಾತನಾಡಿ ಬರೋಡಾವಾಸಿ ತುಳುವರಿಗೆ ಇದೊಂದು ಇತಿಹಾಸ ನಿರ್ಮಿತ ದಿನ. ಇಲ್ಲಿನ ಜನತೆಯ ತುಳು ಪ್ರೇಮ ಅನುಪಮ. ಚಾವಡಿ ತುಳು ಕೇಂದ್ರವಾಗಿ ಮುಂದಿನ ಪೀಳಿಗೆಗೆ ಶಕ್ತಿ ತುಂಬುವಂತಾಗಲಿ. ಅವರಿಂದ ತುಳಿವಿನ ಅಸ್ತಿತ್ವ ಬೆಳಗಲಿ ಎಂದು ಶುಭೈರಿಸಿದರು.

ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಮಾತನಾಡಿ ನಾವೆಲ್ಲರೂ ತುಳು ಮಾತೆಯ ಮಕ್ಕಳು. ಇಲ್ಲಿನ ನಿಷ್ಕಲಂಕ ಮನೋಭಾವಿ ತುಳುವರ ಸೇವೆಯಿಂದ ಈ ಚಾವಡಿಯ ಸೃಷ್ಟಿಯಾಗುತ್ತಿದೆ. ನಮ್ಮ ಮೂರು ದಶಕಗಳ ಸ್ವಪ್ನ ಸಾರ್ಥಕತೆ ರೂಪ ಪಡೆಯುತ್ತಿದೆ ಎಂದರು.

ಮಾಜಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ 28 ವರ್ಷಗಳ ಹಿಂದೆ ಯೋಚಿಸಿದ ಈ ಯೋಜನೆ ನನಸಾಗುತ್ತಿರುವುದು ಸಂತೋಷ. ಈ ಚಾವಡಿ ಸರ್ವರ ನೆಮ್ಮದಿಯ ತಾಣವಾಗಲಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ತುಳು ಸಂಘ ಬರೋಡಾ ಇದರ ಉಪಾಧ್ಯಕ್ಷರುಗಳಾದ ಮಹಾವೀರ ಬಿ.ಜೈನ್ ಮತ್ತು ಕೆ.ಮಾಧವ ಶೆಟ್ಟಿ, ಕೋಶಾಧಿಕಾರಿ ವಾಸು ಪಿ.ಪೂಜಾರಿ, ಜತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ರೈ ಮತ್ತು ಪ್ರಶಾಂತ್ ಹೆಗ್ಡೆ, ಕಾರ್ಯದಶಿ ಸರಳಾ ಶೆಟ್ಟಿ, ಸಂಘದ ಪ್ರಮುಖರಾದ ಇಂದುದಾಸ್ ಎ.ಶೆಟ್ಟಿ, ಮಧನ್ ಕುಮಾರ್ ಗೌಡ, ಸುಧಾಕರ ಶೆಟ್ಟಿ, ಧನಂಜಯ ಅಮೀನ್, ಕೃಷ್ಣ ಎ.ಶೆಟ್ಟಿ, ಶೋಭಾ ಬೋಂಟ್ರಾ, ಶರ್ಮಿಳಾ ಎಂ.ಜೈನ್, ಮೋಹನ್ ಸಿ.ಪೂಜಾರಿ, ಸುಮನ್‍ಲಾಲ್ ಕೋಡಿಯಾಳ್‍ಬೈಲ್, ಮನೋಜ್ ಮೋಹನ್ ಪೂಜಾರಿ, ಎಂ.ಎಸ್ ರಾವ್ ಅಹ್ಮದಾಬಾದ್, ಅಶೋಕ್ ಸಸಿಹಿತ್ಲು ಮತ್ತಿತರ ಪದಾಧಿಕಾರಿಗಳು ಹಾಜರಿದ್ದು, ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ನಮಿಸಿ ಪೂಜೆ ನೆರವೇರಿಸಿದ ಬಳಿಕ ಸಮಾರಂಭ ಆರಂಭಿಸಲ್ಪಟ್ಟಿತು.

ದಯಾನಂದ ಸಾಲ್ಯಾನ್ ಮತ್ತು ಬಳಗ ಪ್ರಾರ್ಥನೆಯನ್ನಾಡಿದರು. ಇದೇ ಸಂದರ್ಭದಲ್ಲಿ ರೋನ್ಸ್ ಬಂಟ್ವಾಳ್ ಅವರು ತುಳು ಸಂಘದ ಮೋಬಾಯ್ಲ್ ವಟ್ಸ್‍ಫ್ ಲೋಕಾರ್ಪಣೆಗೈದರು. ಗೌ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಮುಖ್ಯಸ್ಥೆ ಶಾರದಾ ಶೆಟ್ಟಿ ವಂದನಾರ್ಪಣೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿ ಬಿಲ್ಲವರ ಅಸೋಶಿಯೇಶನ್ ಮುಂಬಯಿ ಸಂಚಾಲಕತ್ವದ ಗುರುನಾರಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರು `ದೇವು ಪೂಂಜಾ ಪ್ರತಾಪ' ಯಕ್ಷಗಾನ ಪ್ರದರ್ಶಿಸಿದರು.

ಗುಜರಾತ್, ಬರೋಡಾ ವಾಸಿ ತುಳುವರ ಬಹುನಿರೀಕ್ಷಿತ ಈ ತುಳು ಚಾವಡಿಯನ್ನು ಇದೇ 2016ರ ಅಕ್ತೋಬರ್ 10ರಂದು ದಸರೋತ್ಸವದ ಪರ್ವದಿನ ತುಳು ಸಂಘ ಬರೋಡಾ ಇದರ ಸಾಂಸ್ಕೃತಿಕ ಸಂಕೀರ್ಣ, ವಿಶ್ವದ ಮೊತ್ತಮೊದಲ `ತುಳು ಚಾವಡಿ'ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಧರ್ಮಯೋಗಿ ಡಾ| ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೈಯಲಿದ್ದಾರೆ ಎಂದು ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ತಿಳಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here