Friday 19th, April 2024
canara news

ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ.ಕೆ. ಸಾಲ್ಯಾನ್ ನಿಧನ

Published On : 21 Jul 2016   |  Reported By : Rons Bantwal


ಮುಂಬಯಿ, ಜೂ.21: ಮುಂಬಯಿ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲಿ ಒಂದಾದ ಕುಲಾಲ ಸಂಘದ ಗೌರವಾಧ್ಯಕ್ಷ ಹಾಗೂ ಆರತಿ ಪ್ರಿಂಟರ್ಸ್ ಮಾಲಕ ಪಿ.ಕೆ. ಸಾಲ್ಯಾನ್ ಅವರು (77.) ಅಲ್ಪಕಾದ ಅಸೌಖ್ಯದಿಂದ ವಡಾಲ ಪಶ್ಚಿಮ, ಬಿಇಎಸ್‍ಟಿ ಬಸ್ ಸ್ಟಾಪ್ ಸಮೀಪದಲ್ಲಿರುವ ಕವಿತಾ ಅಪಾರ್ಟ್‍ಮೆಂಟ್‍ನ ತಮ್ಮ ಸ್ವಗೃಹ ಬುಧವಾರ (20.07.2016) ನಿಧನರಾದರು.

ಮೃತರು ಪತ್ನಿ , ಮೂರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರವು ಇಂದಿಲ್ಲಿ ಗುರುವಾರ (21.07.2016) ನೇರವೇರಿತು.

ಸಾಲ್ಯಾನ್ ನಿಧನಕ್ಕೆ ಬಿಲ್ಲವ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಡಾ| ಸುನೀತಾ ಎಂ.ಶೆಟ್ಟಿ, ಬಿಲ್ಲವರ ಜಾಗ್ರತಿ ಬಳಗ ಮುಂಬಯಿ ಇದರ ಅಧ್ಯಕ್ಷ ಎನ್.ಟಿ.ಪೂಜಾರಿ, ಸಂಸ್ಥಾಪಕ ಅಧ್ಯಕ್ಷ ಸೂರು ಸಿ. ಕರ್ಕೇರ, ಮಾಜಿ ಉಪಾಧ್ಯಕ್ಷ ಕೆ. ಬೋಜರಾಜ್, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಶರ ಮತ್ತು ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ವಿಶ್ವನಾಥ ಯು.ಮಾಡ, ರವಿ ಆರ್.ಅಂಚನ್, ಸಂಜೀವ ಪೂಜಾರಿ, ಶಾಫಿ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನ್ಯಾ| ಬಿ.ಮೊಯಿದ್ದೀನ್ ಮುಂಡ್ಕೂರು, ಎಸ್.ಕೆ.ಸುಂದರ್ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here