Thursday 25th, April 2024
canara news

ಹಾರಾಡಿ ಶಾಲೆ ವಿದ್ಯಾರ್ಥಿಯಿಂದ ಗೃಹ ಮಂತ್ರಿಗೆ ಸಂದೇಶ ರವಾನೆ; ಸಮಸ್ಯೆ ಬಗೆಹರಿಸುವ ಭರವಸೆ

Published On : 22 Jul 2016


ಮಂಗಳೂರು: ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಹಾರಾಡಿ ಶಾಲೆಯಲ್ಲಿನ ಶಿಕ್ಷಕರ ಸಮಸ್ಯೆಯ ಕುರಿತಾದ ವಿವರವನ್ನು ಶಾಲೆಯ ಗೃಹ ಮುಂತ್ರಿಯಾದ ವಿದ್ಯಾರ್ಥಿಯೊಬ್ಬ ಮಂಗಳವಾರ ರಾತ್ರಿ ರಾಜ್ಯದ ಗೃಹ ಸಚಿವ ಡಾ, ಪರಮೇಶ್ವರ್ ಅವರಿಗೆ ಮೊಬೈಲ್ ಸಂದೇಶದ ಮೂಲಕ ರವಾನಿಸಿದ್ದು, ಇದಕ್ಕೆ ಸಚಿವರು ಕರೆ ಮಾಡಿ ಸ್ಪಂದನೆ ನೀಡಿದ್ದಾರೆ.ಹಾರಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವಾಗಲೇ 4 ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿ ಶಿಕ್ಷಣ ಇಲಾಖೆ ಮಂಗಳವಾರ ಸಂಜೆ ವರ್ಗಾವಣೆಗೆ ಕೌನ್ಸಿಲಿಂಗ್ ನಡೆಸಿತ್ತು.

ಈ ಕುರಿತು ಶಾಲೆಯ ವಿದ್ಯಾರ್ಥಿಯಾದ ದಿವಿತ್ ಶೆಟ್ಟಿ ‘ನಾನು ಹಾರಾಡಿ ಶಾಲೆಯ ಗೃಹ ಮಂತ್ರಿ ದಿವಿತ್ ರೈ, ನನಗೆ ನಿಮ್ಮಲ್ಲಿ 5 ನಿಮಿಷ ಮಾತಾಡಲಿದೆ ಎಂದು ಗೃಹ ಸಚಿವ ಡಾ, ಪರಮೇಶ್ವರ್ ಅವರ ಮೊಬೈಲ್‍ಗೆ ಸಂದೇಶ ರವಾನಿಸಿದ್ದ. 10 ನಿಮಿಷದ ಬಳಿಕ ಗೃಹ ಸಚಿವರು ಆತನ ಮೊಬೈಲ್ ನಂಬರಿಗೆ ಕರೆ ಮಾಡಿ ವಿಚಾರಿಸಿ ಸಮಸ್ಯೆಯ ಕುರಿತು ಮಾಹಿತಿ ಪಡೆದುಕೊಂಡದ್ದಲ್ಲದೆ ನಾಳೆ ಶಿಕ್ಷಣ ಸಚಿವರಲ್ಲಿ ಮಾತಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.

ಬುಧವಾರ ಮಧ್ಯಾಹ್ನ ಮತ್ತೆ ದಿವಿತ್ ರೈಯ ಮೊಬೈಗೆ ಸಂದೇಶ ರವಾನಿಸಿರುವ ರಾಜ್ಯದ ಗೃಹ ಸಚಿವರು `ನಿನ್ನೆಯೇ ಶಾಲೆಯ ಸಮಸ್ಯೆಯ ಕುರಿತು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಲ್ಲಿ ಮಾತನಾಡಿದ್ದೇನೆ. ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ‘ ಎಂದು ಸಂದೇಶದ ಮೂಲಕ ತಿಳಿಸಿರುವುದಾಗಿ ತಿಳಿದು ಬಂದಿದೆ.

ಗೃಹ ಸಚಿವರಿಗೆ ಸಂದೇಶ ಮೊಬೈಲ್ ಸಂದೇಶ ರವಾನಿಸಿರುವ ವಿದ್ಯಾರ್ಥಿ ದಿವಿತ್ ರೈ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ ರವಿಪ್ರಸಾದ್ ಶೆಟ್ಟಿ ಬನ್ನೂರು ಅವರ ಸಹೋದರಿ ಪ್ರತಿಮಾ ರೈ ಅವರ ಪುತ್ರ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here