Thursday 28th, March 2024
canara news

ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ

Published On : 22 Jul 2016   |  Reported By : Canaranews Network


ಮಂಗಳೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಉಚ್ಚಿಲ ಮತ್ತು ಉಳ್ಳಾಲದಲ್ಲಿ ಸಮುದ್ರ ಕೊರೆತ ಪ್ರಾರಂಭಗೊಂಡಿದ್ದು, ಉಚ್ಚಿಲದಲ್ಲಿ ಕೇರಳ ಮೂಲದವರಿಗೆ ಸೇರಿದ ಬೀಚ್‌ ಮನೆಯೊಂದು ಬುಧವಾರ ಭಾಗಶಃ ಕುಸಿದಿದೆ.ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಈಗಾಗಲೇ 10ಕ್ಕೂ ಹೆಚ್ಚು ಮನೆಗಳು ಮತ್ತು ಬೀಚ್‌ ಮನೆಗಳು ಸಮುದ್ರಪಾಲಾಗಿದ್ದು, ವಾಸದ ಮನೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಲ್ಲು ಹಾಕುವ ಕಾರ್ಯ ಮುಂದುವರಿದಿದೆ.

ಕೊರೆತ ಪ್ರಾರಂಭದಲ್ಲಿ ಅಪಾಯದಲ್ಲಿದ್ದ ಯಮುನಾ ಅವರ ಮನೆ ಸಂಪೂರ್ಣ ಕುಸಿದಿದ್ದು, ವಸಂತ ಅವರ ಮನೆ ಬಳಿ ಕಲ್ಲು ಹಾಕಿದ್ದರಿಂದ ಮನೆ ಸುತ್ತ ಹೊಗೆ ತುಂಬಿದೆ. ನ್ಯೂ ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕೇರಳ ಮೂಲದ ಖಾಸಗಿ ಬೀಚ್‌ ಹೌಸ್‌ ಬುಧವಾರ ಭಾಗಶಃ ಧರಾಶಾಯಿಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಕುಸಿಯುವ ಭೀತಿಯಲ್ಲಿದೆ. ಸಮುದ್ರ ಕೊರೆತ ಹೆಚ್ಚಾದರೆ ಸೋಮೇಶ್ವರ-ಉಚ್ಚಿಲ ಬೀಚ್‌ ರಸ್ತೆ ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಉಳ್ಳಾಲದಲ್ಲೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here