Friday 29th, March 2024
canara news

ಮುಲುಂಡ್‍ನಲ್ಲಿ ನಡೆದ ಭವಾನಿ ಫೌಂಡೇಶನ್ ಮುಂಬಯಿ ಪ್ರಥಮ ವಾರ್ಷಿಕ ಮಹಾಸಭೆ

Published On : 23 Jul 2016   |  Reported By : Rons Bantwal


ಋಣ ಸಂದಾಯಕ್ಕೆ ಸೇವೆಯೊಂದೇ ಅಸ್ತ್ರವಾಗಿದೆ : ಚೆಲ್ಲಡ್ಕ ಕೆ ಡಿ.ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.23: ನಾವು ಹುಟ್ಟಿ ಬೆಳೆದ ನಾಡಿನ ಋಣ ಸಂದಾಯಕ್ಕೆ ಸೇವೆಯೊಂದೇ ಅಸ್ತ್ರವಾಗಿದೆ. ದೀನ, ದಲಿತ, ಅನಾಥರಿಗೆ ಸದಾ ಕೊಡುಗೈ ದಾನಿಗಳಾದಲ್ಲಿ ಅದರ ನೆಮ್ಮದಿಯ ಬದುಕೇ ಜೀವನಕ್ಕೆ ಮೌಲ್ಯಯುತವಾಗಿರುತ್ತದೆ. ಕಾಯಾ ವಾಚಾ ಮನಸಾ ಸಮಾಜವನ್ನು ಗೌರವದಿಂದ ನೋಡಿಕೊಂಡರೆ ಅಖಂಡ ಸಮಾಜವು ಸಮಾನವಾಗಿ ಮುನ್ನಡೆಯಲು ಸಾಧ್ಯ. ಇದನ್ನೇ ಭವಾನಿ ಫೌಂಡೇಶನ್ ಉದ್ದೇಶವಾಗಿಸಿದೆ ಎಂದು ಭವಾನಿ ಫೌಂಡೇಶನ್ ಮುಂಬ ಯಿ ಇದರ ಸಂಸ್ಥಾಪ ಮತ್ತು ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ನುಡಿದರು.

ಕಳೆದ ಶುಕ್ರವಾರ ಸಂಜೆ ಮುಲುಂಡ್ ಪಶ್ಚಿಮದಲ್ಲಿನ ಹೊಟೇಲ್ ಅಥಿüತಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಭವಾನಿ ಫೌಂಡೇಶನ್ ಮುಂಬಯಿ ಇದರ ಪ್ರಥಮ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಕುಸುಮೋಧರ ಶೆಟ್ಟಿ ಮಾತನಾಡಿ ತನ್ನ ಜನನಿದಾತೆ ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಷಷ್ಠ ್ಯಬ್ದ ಸ್ಮರಣಾರ್ಥ ಕಳೆದ ಆಗಸ್ಟ್‍ನಲ್ಲಿ ತವರೂರ ಅಡ್ಯನಡ್ಕದಲ್ಲಿ ಆಯೋಜಿಸಿದ್ದ ಧರ್ಮಾರ್ಥ ಆರೋಗ್ಯ ತಪಾಸಣಾ ಶಿಬಿರ, ಟಾಟಾ ಮೆಮೋರಿಯಲ್ ಆಸ್ಪತ್ರೆ ಸಹಯೋಗ ದೊಂದಿಗೆ ನವಿಮುಂಬಯಿಯಲ್ಲಿ ಏರ್ಪಾಡಿಸಲ್ಪಟ್ಟ ಬೃಹತ್ ರಕ್ತದಾನ ಶಿಬಿರ, ನಡುಮೊಗರು ಅಲ್ಲಿನ ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ಧರ್ಮಾರ್ಥ ಶಾಲಾಬಸ್ ಸೇವೆ, ಉಚಿತ ಅಂಬ್ಯುಲೆನ್ಸ್ ಸೇವೆ, ಶೈಕ್ಷಣಿಕ ಮತ್ತು ಆರೋಗ್ಯನಿಧಿಗಳಂತ ಸೇವೆಗಳು ಫಲಪ್ರದವಾಗಿವೆ ಎನ್ನುವ ತೃಪ್ತಿ ನಮಗಿದೆ ಎಂದರು.

ವಿಶೇಷ ಆಮಂತ್ರಿತರಾಗಿ ಉಪಸ್ಥಿತ `ಮುಲುಂಡ್ ಬಂಟ್ಸ್'ನ ಅಧ್ಯಕ್ಷ ಎಸ್.ಬಿ ಶೆಟ್ಟಿ ಮಾತನಾಡಿ ಕೆ.ಡಿ ಶೆಟ್ಟಿ ಪರಿವಾರದೊಂದಿಗೆ ನನ್ನದು ಸುಮಾರು ಎರಡು ದಶಕಗಳ ಸಂಬಂಧ. ಅವರ ಸಂಸ್ಥಾಪಣಾ ಭವಾನಿ ಫೌಂಡೇಶನ್‍ನ ತೆರೆಮರೆಯ ಇಷ್ಟೊಂದು ಸಾಮಾಜಿಕ ಕಳಕಳಿ ನಿಜಕ್ಕೂ ಪ್ರಶಂಸನೀಯ. ಇಂತಹ ಸೇವೆಯಿಂದ ಮರೆಯಾದ ಮಾತೆಯನ್ನು ಸೇವೆಯ ಮೂಲಕ ಭಗವಂತನನ್ನು ಕಾಣಬಹುದು. ನಮ್ಮಲ್ಲಿನ ಎಲ್ಲರೂ ಇಂತಹ ಸೇವೆಯನ್ನು ಅರಿತು ತಮ್ಮಲ್ಲಿ ಮಾದರಿಯಾಗಿಸಬೇಕು ಎಂದರು.

ಫೌಂಡೇಶನ್‍ನ ಟ್ರಸ್ಟಿ ಮೊಯಿದ್ಧೀನ್ ಮುಂಡ್ಕೂರು ಮಾತನಾಡಿ ತಾಯಿಯೇ ದೇವರು. ತಾಯಿಕ್ಕಿಂತ ಮಿಗಿಲಾದ ದೇವರಿಲ್ಲ. ಅವರ ಸ್ಮರಣಾರ್ಥ ಸಂಸ್ಥೆಯನ್ನು ರೂಪಿಸಿ ಸದ್ದಿಲ್ಲದೆ ನೆರವೇರಿಸಿದ ಸರ್ವ ಕೆಲಸಗಳು ಸ್ಮರಣೀಯವಾ ಗÀಲಿ. ಮಷ್ಹಾ ಅಲ್ಲಾ..! (ದೇವರಿಗೆ ವಂದನೆಗಳು) ಭವಿಷ್ಯತ್ತಿಗೂ ರಹ್ಮಾತ್ ಬರ್ಕತ್ ಇಕ್ಕಟ್ಟ್ (ದೇವರ ಅನುಗ್ರಹ ಸದಾವಿರಲಿ) ಎಂದರು.

ಕೆಡಿಎಸ್ ಅವರೋರ್ವ ತೆರೆಮರೆಯ ಮಹಾದಾನಿ. ಪ್ರಚಾರಕ್ಕಿಂತ ಆಚಾರವನ್ನೇ ಧರ್ಮವಾಗಿಸಿದ ಸಹೃದಯಿ. ಅವರಲ್ಲಿನ ಮಾತಾಭಕ್ತಿ ಅನನ್ಯವಾದದ್ದು. ಆ ಮೂಲಕ ಸಮಾಜಪರ ಸೇವೆ ಊಹಿಸಲಸಾಧ್ಯ. ಅವರೊಂದಿಗೆ ನಮಗೂ ಸೇವಾ ಭಾಗಿತ್ವದ ಅನುವು ಮಾಡಿ ನಮಗೂ ಪುಣ್ಯ ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಎಲ್ಲರ ಒಳಿತಾಗಲಿ ಎಂದು ಫೌಂಡೇಶನ್‍ನ ಟ್ರಸ್ಟಿ ಧರ್ಮಪಾಲ ದೇವಾಡಿಗ ಆಶಿಸಿದರು.

ಸಮಾಜ ಕಲ್ಯಾಣಕ್ಕೆ ಪಣತೊಟ್ಟ ಕೆ.ಡಿ ಶೆಟ್ಟಿ ಅವರದ್ದು ನಿಷ್ಕಾಮ ಸೇವೆ. ಇವರ ಈ ನಿಷ್ಕಾಮ ಸೇವೆ ವಿವರಿಸುವುದು ಅಪ್ರಸ್ತುತ. ಬರೇ ಒಬ್ಬಂಟಿಗನಾಗಿ ಶ್ರಮಿಸದೆ ಇಡೀ ಪರಿವಾರವನ್ನು ಒಗ್ಗೂಡಿಸಿ ಶ್ರಮಿಸುವ ಮನೋಧರ್ಮ ಅಭಿನಂದನೀಯ ಎಂದು ಫೌಂಡೇಶನ್‍ನ ಟ್ರಸ್ಟಿ ಪಂ| ನವೀನ್‍ಚಂದ್ರ ಸನೀಲ್ ತಿಳಿಸಿದರು.

ಲೆಕ್ಕಪರಿಶೋಧಕ ಗಿರೀಶ್ ಪ್ರಭು, ಉದ್ಯಮಿ ಆನಂದ್ ಜಿ.ಶೆಟ್ಟಿ, ಪತ್ರಕರ್ತ ನವೀನ್ ಕೆ.ಇನ್ನಾ, ಫೌಂಡೇಶನ್‍ನ ವಿಶ್ವಸ್ಥ ಸದಸ್ಯರುಗಳಾದ ಸರಿತಾ ಕುಸುಮೋಧರ್ ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ, ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು, ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಫೌಂಡೇಶನ್‍ನ ಅಲ್ಪಾವಧಿಯ ಸೇವೆ ಪ್ರಶಂಸಿಸಿ ಭವಿಷ್ಯದ ಸರ್ವೋನ್ನತಿಗಾಗಿ ಸಲಹೆ ಸೂಚನೆಗಳನ್ನಿತ್ತು ಶುಭಾರೈಸಿದರು.

ಫೌಂಡೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಗತ ವಾರ್ಷಿಕ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು ಹಾಗೂ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕರ್ಮಚಾರಿಗಳೇ ಮಾಸಿಕ ಸುಮಾರು ಎರಡು ಲಕ್ಷ ರೂಪಾಯಿಗೂ ಮಿಕ್ಕಿದ ವಂತಿಗೆ ನೀಡಿ ಫೌಂಡೇಶನ್‍ನ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಸಮಾಜದ ಸ್ವಸ್ಥಕ್ಕಾಗಿನ ಅವರ ಕಾಳಜಿಯಿಂದ ಕರ್ಮಭೂಮಿ ಮಹಾರಾಷ್ಟ್ರದ ಕುಗ್ರಾಮದಲ್ಲಿ ಎರಡನೇ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲು ನಿರ್ಧಾರಿಸಲಾಗಿದೆ ಎಂದರು.

ಉಪಾಧ್ಯಕ್ಷ ಜೀಕ್ಷಿತ್ ಕುಸುಮೋಧರ್ ಶೆಟ್ಟಿ ಸ್ವಾಗತಿಸಿ ಭವಾನಿ ಫೌಂಡೇಶನ್‍ನನ್ನು ವಿಶ್ವವ್ಯಾಪಿ ವಿಸ್ತರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದರು. ಕೋಶಾಧಿಕಾರಿ ಕು| ಮೀಥಾ ಶೆಟ್ಟಿ ಲೆಕ್ಕಪತ್ರಗಳ ಮಾಹಿತಿಯನ್ನಿತ್ತು ನೆರೆದ ಸರ್ವರಿಗೂ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಜೊತೆ ಕೋಶಾಧಿಕಾರಿ ಕು| ಶಿಖಾ ಕುಸುಮೋಧರ್ ಶೆಟ್ಟಿ ಅಭಾರ ಮನ್ನಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here