Saturday 20th, April 2024
canara news

ವಾರ್ಷಿಕ ಮಹಾಸಭೆ ಹಾಗೂ ಆಟಿದಕೂಟದ ಸಂಭ್ರಮ

Published On : 24 Jul 2016   |  Reported By : Rayee Rajkumar


ಮೂಡುಬಿದಿರೆ: ಸ್ಥಳೀಯ ಶ್ರೀ ಆದಿ ಶಂಕರ ಸ್ಥಾನಿಕ ಬ್ರಾಹ್ಮಣ ಪರಿಷತ್ತಿನ 26 ನೇ ವರ್ಷದ ವಾರ್ಷಿಕ ಮಹಾಸಭೆ ಜುಲೈ 24 ರಂದು ಅಲಂಗಾರಿನ-ಕಡಲೆಗೆರೆ ಶಾಲೆಯಲ್ಲಿ ನಡೆಯಿತು.

ಬೆಳಿಗ್ಗೆ ಪರಿಷತ್ತಿನ ಮಹಿಳಾ ವಿಭಾಗದ ಸದಸ್ಯೆಯರಿಂದ ಶಶಿಪ್ರಭಾ ಪರಿಣಯ ಎಂಬ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಿಳೆಯರು ಮನೆಯಲ್ಲಿ ತಯಾರಿಸಿದ ಆಟಿದ ವಿಶೇಷ ತಿನಿಸುಗಳ ಸವಿಭೋಜನ ನಡೆಯಿತು.

ಮಧ್ಯ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಪ್ರಧಾನಅಭ್ಯಾಗತರಾದ ಕಾರ್ಕಳ ಶಂಕರ ಪ್ರತಿಷ್ಠಾ ಅಧ್ಯಕ್ಷ ಮುರಳೀಧರ ಶರ್ಮ ಹಾಗೂ ಇನ್ನ ಸಲ್ದಾನ ಎ.ಬಿಸಿಡಿಇ ಟ್ರಸ್ಟ್ ನ ಐ ಚಂದ್ರಕಾಂತ ರಾವ್‍ರವರು ಮಾತನಾಡಿ ದುಡಿಮೆಯ ಸ್ವಲ್ಪಾಂಶವನ್ನು ಸಮಾಜದ ಅಭಿವೃದ್ಧಿಗೆ ನೀಡಿದರೆಅದರ ಪ್ರತಿಫಲ ಭರಪೂರ ರೀತಿಯಲ್ಲಿ ನಮಗೆ ಹಿಂದೆದೊರಕಲಿದೆ ಎಂದು ತಮ್ಮ ಸ್ವಾನುಭವವನ್ನು ಹೇಳಿಕೊಂಡರು.

ಸಮಾಜದ ಹಿರಿಯರಲ್ಲೊಬ್ಬರಾದ ಬೊಕ್ಕಸ ಮೋಹನ ರಾಯರನ್ನು ಸನ್ಮಾನಿಸಲಾಯಿತು. ಕರ್ನಾಟಕಯುವರತ್ನ ಪ್ರಶಸ್ತಿ ಪುರಸ್ಕøತ ಬೆಳುವಾಯಿದೇವಾನಂದ ಭಟ್‍ರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪರಿಷತ್ತಿನಕಾರ್ಯಾಧ್ಯಕ್ಷ ಬೊಕ್ಕಸ ಚಂದ್ರಶೇಖರ ರಾವ್‍ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಗದೀಶರಾವ್ ವರದಿ ವಾಚಿಸಿದರು. ಖಜಾಂಚಿ ವರದರಾಜ ರಾವ್‍ ಆಯವ್ಯಯ ಮಂಡಿಸಿದರು. ಜತೆ ಕಾರ್ಯದರ್ಶಿ ಗಣೇಶ ರಾವ್ ಉಪ ನಿಬಂಧನ ಮಂಡಿಸಿದರು. ಅಧ್ಯಾಪಕ ಜಯರಾಮ ರಾವ್‍ರವರು ಆಟೋಟದಲ್ಲಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರಾಯೀ ರಂಜಿತ್‍ ಕುಮಾರ್‍ ಕಾರ್ಯಕ್ರಮ ನಿರ್ವಹಿಸಿದರು. ವಸಂತರಾಜ್ ವಂದಿಸಿದರು..




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here