Thursday 25th, April 2024
canara news

ಜು.31: ಉಡುಪಿಯ ಅಮ್ಮಣ್ಣಿ ರಾಮಣ್ಣಶೆಟ್ಟಿ ಸಭಾಭವನದಲ್ಲಿ ಭಂಡಾರಿ ಮಹಾ ಮಂಡಲದಿಂದ ಆಟಿಡೊಂಜಿ ದಿನ ಭಂಡಾರಿ ಕುಟುಂಭೋತ್ಸವ

Published On : 26 Jul 2016   |  Reported By : Rons Bantwal


ಮುಂಬಯಿ, ಜು.26: ಜಾಗತಿಕ ಭಂಡಾರಿ ಸಮಾಜ ಸಂಸ್ಥೆಗಳ ಒಕ್ಕೂಟ ಭಂಡಾರಿ ಮಹಾ ಮಂಡಲ ಸಂಸ್ಥೆಯು ಬರುವ ಆದಿತ್ಯವಾರ (ಜು.31) ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.30 ಗಂಟೆ ವರೆಗೆ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನ ಉಡುಪಿ ಇಲ್ಲಿ `ಆಟಿಡೊಂಜಿ ದಿನ ಮತ್ತು ಭಂಡಾರಿ ಕುಟುಂಭೋತ್ಸವ' ಸಂಭ್ರಮಿಸಲಿದ್ದು, ಮೂಡಬಿದ್ರೆ ಕೇಮಾರು ಸಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದು, ಬಡಗುಬೆಟ್ಟು ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಇದರ ಕಾರ್ಯಾಧ್ಯಕ್ಷ ಲ| ಇಂದ್ರಾಳಿ ಜಯಕರ ಶೆಟ್ಟಿ ಸಮಾರಂಭ ಉದ್ಘಾಟಿಸಲಿದ್ದಾರೆ.

     

Kemaru Swamiji                     Pramod Madhwaraj                     Suresh Bhandary

      

Sadashiva Bhandary Sakaleshpur     Navin D.Padil                          -Dr. Shivaram K.Bhandary.

Naveen Bhandary Udupi

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ ಅಧ್ಯಕ್ಷತೆಯಲ್ಲಿ ನೇರವೇರಲಿರುವ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್‍ಕುಮಾ ರ್ ರೈ ಮಾಲಾಡಿ, ಗೌರವ ಅತಿಥಿsಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ರಘುಪತಿ ಭಟ್, ಉಜ್ವಲ್ ಡೆವಲಪರ್ಸ್ ಉಡುಪಿ ಇದರ ಕಾರ್ಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಲಾ ಜಗತ್ತು ಮುಂಬಯಿ ಇದರ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ, ಕ್ರೆಡೈ ಉಡುಪಿ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಾಯಾಸ್, ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಫೀಶರ್ ಫೇಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಆಗಮಿಸಲಿದ್ದಾರೆ.

ಅಪರಾಹ್ನ 2.00 ಗಂಟೆಯಿಂದ ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಇವರ ಅಧ್ಯಕ್ಷತೆಯಲ್ಲಿ ನೆರವೇರಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಕಾರ್ನಾಟಕ ರಾಜ್ಯದ ಮೀನುಗಾರಿಕಾ, ಯುವಜನಸೇವೆ-ಕ್ರೀಡೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಗೌರವ ಅತಿಥಿsಗಳಾಗಿ ಆಳ್ವಾ'ಸ್ ಎಜುಕೇಶನ್ ಫೌಂಡೇಶನ್ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಬೆಂಗಳೂರು ಎಂಆರ್‍ಜಿ ಸಮೂಹದ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಎಸ್.ಎಂಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಪೆÇವಾಯಿ ಕಾರ್ಯಾಧ್ಯಕ್ಷ ಜಯರಾಮ ಎನ್.ಶೆಟ್ಟಿ, ಮುಂಬಯಿಯ ಪೆÇೀಲಿಸ್ ಅಧಿಕಾರಿ ದಯಾ ನಾಯಕ್, ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಎನ್.ಟಿ ಪೂಜಾರಿ, ಬಂಟರ ಸಂಘ ಪಡುಬಿದ್ರಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಆಗಮಿಸಲಿದ್ದಾರೆ. ಅತಿಥಿüಗಳು ತುಳು ರಂಗ ಭೂಮಿಯ ಸಾರ್ವಭೌಮ, ತುಳುವ ತೆನಾಲಿ, ತುಳು ನಾಟಕ-ಚಲನಚಿತ್ರಗಳ ಸೂಪರ್‍ಸ್ಟಾರ್ ನವೀನ್ ಡಿ. ಪಡೀಲ್, ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ, ಭಾರತ ಸರ್ಕಾರದ ಸರ್ವೋತ್ಕಷ್ಟ ಸಮಾಜ ಸೇವಾ ಪುರಸ್ಕಾರ ವಿಜೇತ ಡಾ| ಶಿವರಾಮ ಕೆ.ಭಂಡಾರಿ, ಉಡುಪಿ ನಗರಸಭಾ ಸದಸ್ಯ, ಲೀಡ್ಸ್ ಬ್ಯೂಟಿ ಪಾರ್ಲರ್ಸ್‍ನ ಮಾಲೀಕ ಎನ್.ನವೀನ್ ಭಂಡಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11.00 ಗಂಟೆಗೆ `ಪೆÇರ್ಲು ತುಳುನಾಡ್' ವಿಶೇಷ ಕಾರ್ಯಕ್ರಮ, ಅಪರಾಹ್ನ 1.00 ಗಂಟೆಯಿಂದ ತುಳುವಿನ ಮಾತಿನಮಲ್ಲ ದಯಾನಂದ ಕತ್ತಲೆಸಾರ್ ಅವರು `ಆಟಿಯ ನುಡಿ, ಕುಣಿತದ ಜೊತೆ ವಿವರಣೆ', 3.00 ಗಂಟೆಗೆ ಲಕುಮಿ ತಂಡ ಮಂಗಳೂರು `ಕುಸಲ್' ನಾಟಕ ಪ್ರದರ್ಶಿಸಲಿದೆ. ವಿಶೇಷ ಆಕರ್ಷಣೆಯಾಗಿ ಭಂಡಾರಿ ಸಮಾಜದ ಸರ್ವ ಕುಟುಂಬಸ್ಥರಿಗಾಗಿ ತುಳುನಾಡ ಪರಿಮಾಳದ ತಿಂಡಿ ತಿನಿಸುಗಳ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ತುಳುನಾಡಿನ ಸೌಂದರ್ಯ ತೋರ್ಪಡಿಸುವಂತಹ ವಸ್ತು ಪ್ರದರ್ಶನ ಮತ್ತು ಕಂಬಳದ ಜಾನಪದ ನೋಟ ಇತ್ಯಾದಿಗಳೂ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದು, ಮಧ್ಯಾಹ್ನದ ಭೀಗರೂಟಕ್ಕೆ ತುಳುನಾಡಿನ ಪ್ರಸಿದ್ಧ ಕಟ್ಟದ ಕೋರಿ, ಕಪ್ಪದ ರೊಟ್ಟಿ, ಸುಕ್ಕಮಾಸ, ಪೆÇಡಿಎಟ್ಟಿದ ಚಟ್ನಿ, ಉರ್ಪೆಲರಿತ್ತ ಗಂಜಿ, ಸಾರ್ಣೆ ಆಡ್ಡೆದ ಪಾಯಾಸ ಇತ್ಯಾದಿ ತಿನಸುಗಳು ಸಾಥ್ ನೀಡಲಿವೆ ಎಂದು ಸುರೇಶ್ ಭಂಡಾರಿ ಕಡಂದಲೆ ತಿಳಿಸಿದ್ದಾರೆ. ವಿಶ್ವದಾದ್ಯಂತ ನೆಲೆಯಾಗಿರುವ ಸರ್ವ ಭಂಡಾರಿ ಬಾಂಧವರು, ಸಂಘಟನೆಗಳ ಪದಾಧಿಕಾರಿ, ಸದಸ್ಯರು ಅತ್ಯಾಧಿಕ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಸದಾಶಿವ ಭಂಡಾರಿ ವಿನಂತಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here