Thursday 25th, April 2024
canara news

ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ-ಹದಿನಾರನೇ ವಾರ್ಷಿಕ ಮಹಾಸಭೆ

Published On : 26 Jul 2016   |  Reported By : Rons Bantwal


ತ್ವರಿತಗತಿಯ ಸೇವೆಯಿಂದ ಪರಿವರ್ತನೆ ಸಾಧ್ಯ : ಡಾ| ನಾರಾಯಣ ಆರ್.ಗೌಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.26: ಪಥಸಂಸ್ಥೆಗಳು ತ್ವರಿತಗತಿಯಲ್ಲಿ ಸಾಗಿದಾಗ ಜನರು ಅದರ ಹೆಚ್ಚುವರಿ ಲಾಭ ಪಡೆಯ ಬಲ್ಲರು. ಇಂತಹ ತ್ವರಿತ ಸೇವೆಯಿಂದ ಪರಿವರ್ತನೆ ಸಾಧ್ಯ. ಅವಿಷ್ಕಾರಿತ ಆಧುನಿಕ ತಂತ್ರಜ್ಞಾನದ ಹೊಂದಾಣಿಕೆಯಿಂದ ಶೀಘ್ರಗತದಲ್ಲಿ ಸೇವಾ ನಿರತ ಜಯಲಕ್ಷ್ಮೀ ಸೊಸೈಟಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಮುಂದಿನ ಯುವ ಜನಾಂಗವನ್ನು ಆಥಿರ್üಕವಾಗಿ ಬೆಂಬಲಿಸಿ ಸ್ವಯಂ ಉದ್ಯಮಿಗಳಾಗುವಂತೆ ಪೆÇ್ರೀತ್ಸಾಹಿಸುವ ಉದ್ದೇಶ ನಮ್ಮದಾಗಿದೆ. ಎಲ್ಲಾ ವರ್ಗದ ಗ್ರಾಹಕರಿಗೆ ಸಮಾನ ಸೇವೆಯನ್ನೀಡುತ್ತಿದ್ದು, ಅವಶ್ಯಕತೆಗೆ ತಕ್ಕಂತೆ ಸಾಲ ಯೋಜನೆ, ಠೇವಣಿದಾರರಿಗೆ ಆಕರ್ಷಕ ಬಡ್ಡಿದರದ ಹಣಕಾಸು ಸೇವೆ ನೀಡುತ್ತಾ ಜನಸಾಮಾನ್ಯರನ್ನು ಪೆÇ್ರೀತ್ಸಹಿಸಿತ್ತಿದೆ ಎಂದು ಕರ್ನಾಟಕ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಶಾಸಕ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಇದರ ಕಾರ್ಯಾಧ್ಯಕ್ಷ ಡಾ| ನಾರಾಯಣ ಆರ್.ಗೌಡ ತಿಳಿಸಿದರು.

ಬೃಹನ್ಮುಂಬಯಿಯಲ್ಲಿ ಕಾರ್ಯಚರಿಸುತ್ತಿರುವ ಜಯಲಕ್ಷ್ಮೀ ಪಥಸಂಸ್ಥೆಯ16ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ರವಿವಾರ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಗೋಯೆಂಕಾ ಭವನÀದÀಲ್ಲಿ ಜರುಗಿದ್ದು, ಡಾ| ನಾರಾಯಣ ಗೌಡ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನಿತ್ತು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾತನಾಡಿದರು.

ದೈವೈಕ್ಯ ಮಹಾಗುರು ಬಾಲಗಂಗಾಧರನಾಥ ಸ್ವಾಮೀಜಿ ಅನುಗ್ರಹ ಮತ್ತು ದೂರದೃಷ್ಠಿತ್ವದ ಮಾರ್ಗದರ್ಶನ, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ.ಸಿ.ಸುವರ್ಣರ ಸಹಯೋಗದಿಂದ ಈ ಸೊಸೈಟಿ ಮತ್ತು ನಮ್ಮ ಬಹುತೇಕ ಬಂಧುಗಳು ಇಷ್ಟೆತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.

ಹೊಟ್ಟೆಬಟ್ಟೆಗಾಗಿ ಮುಂಬಯಿ ಸೇರಿದ ನಾವುಗಳು ತಟ್ಟೆಯೂಟಕ್ಕಾಗಿ ಹಪಹಪಿಸಿದ ದಿನಗಳನ್ನು ನೆನಪಿಸಿ ನಮ್ಮ ಬದುಕನ್ನು ಕಟ್ಟುತ್ತಾ ಭವಿಷ್ಯತ್ತಿನ ಪೀಳಿಗೆಯನ್ನು ಉಜ್ವಲವಾಗಿ ಬೆಳೆಸಬೇಕು. ತಾಕತ್ತು ರಟ್ಟೆಬಲದ ಪ್ರದರ್ಶನಕ್ಕಿಂತ ಒಗ್ಗಟ್ಟಿನ ಬಾಳಿಗಾಗಿ ಚಿಂತಿಸಬೇಕು ಎಂದೂ ಡಾ| ನಾರಾಯಣ ಗೌಡ ತಿಳಿಸಿದರು ಹಾಗೂ ಓರ್ವ ಅಂಗವಿಕಲ ಬಾಲಕನಿಗೆ ಸಿಹಿತಿಂಡಿ ಉಣ್ಣಿಸಿ, ಧನಸಹಾಯವನ್ನು ವಿತರಿಸಿ ಶುಭಾರೈಸಿದರು.

ಅತಿಥಿüಗಳಾಗಿ ಕಾಂಗ್ರೇಸ್ ನೇತಾರ ಚಂದ್ರ ಶೆಟ್ಟಿ, ಉದ್ಯಮಿಗಳಾದ ಸುಭಾಶ್ ಅಗರ್ವಾಲ್, ಅಶೋಕ್ ಕಾಳಪ್ಪ ಗೌಡ, ಸುಭಾಶ್ ಗೌಡ, ಸಮಾಜಸೇವಕ ಪುಟ್ಟುಸ್ವಾಮೀ ಗೌಡ, ಧಾರ್ಮಿಕ ಮುಂದಾಳು ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‍ಮಾರ್ಗ್ ಹಾಗೂ ಸೊಸೈಟಿಯ ಉಪಾಧ್ಯಕ್ಷ ಕೆ.ರಾಜೇ ಗೌಡ, ಕಾರ್ಯದರ್ಶಿ ರಂಗಪ್ಪ ಸಿ.ಗೌಡ, ನಿರ್ದೇಶಕರುಗಳಾದ ಚಂದನ್ ಸಿ.ಚಾರಿ, ಮುತ್ತೇ ಎಸ್.ಗೌಡ, ಎ.ಕೆಂಪೇಗೌಡ (ರಾಮಣ್ಣ) ಗೊಂಡೇನಹಳ್ಳಿ, ದೇವಕಿ ಎನ್.ಗೌಡ, ಅನುಸೂಯ ಆರ್.ಗೌಡ, ಸುನಂದ ಆರ್.ಗೌಡ ಮತ್ತು ಆರ್.ಯು ಲಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಒಕ್ಕಲಿಗರ ಧೀಶಕ್ತಿ ದೈವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾಗುರು ಮತ್ತು ಧನಲಕ್ಷ್ಮೀ ಮಾತೆಯ ಪ್ರತಿಮೆಗೆ ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‍ಮಾರ್ಗ್ ಪೂಜೆ ನೆರವೇರಿಸಿ ಮಹಾಸಭೆಗೆ ವಿಧಿವತ್ತಾಗಿ ಚಾಲನೆಯನ್ನಿತ್ತು ಅನುಗ್ರಹಿಸಿದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ನೆರವೇರಿಸಿ ಮಹಾಸಭೆಗೆ ಚಾಲನೆಯನ್ನಿತ್ತರು.

ಸೊಸೈಟಿಯ ಗ್ರಾಹಕರು, ಹಿಶೆದಾರರು, ಹಿತೈಷಿ ಗಣ್ಯರು ಸಭೆಯಲ್ಲಿ ಹಾಜರಿದ್ದು ಸೊಸೈಟಿಯ ಸೇವೆ ಪ್ರಶಂಸಿಸಿ ಭವಿಷ್ಯದ ಸರ್ವೋನ್ನತಿಗಾಗಿ ಸಲಹೆ ಸೂಚನೆಗಳನ್ನಿತ್ತು ಶುಭಾರೈಸಿದರು.


ಕಾರ್ಯದರ್ಶಿ ರಂಗಪ್ಪ ಸಿ.ಗೌಡ ಮಾತನಾಡಿ ಸಮಗ್ರ ಸಮಾಜದ ಬಲಾಢ್ಯತೆಗಾಗಿ ಈ ಸೊಸೈಟಿ ಶ್ರಮಿಸುತ್ತಿದೆ. ಸಹಕಾರಿ ಸಂಸ್ಥೆಗಳಿಗೆ ಜನಸಾಮಾನ್ಯರ ಕಾಳಜಿ ಮುಖ್ಯವಾಗಿ ಇರಬೇಕು. ಬಡವರಿಗೆ ಆಥಿರ್üಕ ಬಲ ತುಂಬುವ ಶಕ್ತಿ ಕೇವಲ ಸೊಸೈಟಿಗಳಿಗಿದೆ. ಗ್ರಾಹಕರ ಅಸಾಯಕತೆ ತೋರಿದ್ದಲ್ಲಿ ಮಾತ್ರ ಸಹಕಾರಿ ಸಂಸ್ಥೆಗಳು ಹಾದಿ ತಪ್ಪಲು ಸಾಧ್ಯ. ಆದರೆ ಪ್ರಜ್ಞಾಪೂರ್ವಕ ಪ್ರಯತ್ನ ಮತ್ತು ಕ್ರೀಯಾಶಿಲತೆಯ ಆಡಳಿತ ವೈಖರಿಯಿಂದ ಹಣಕಾಸು ಸೊಸೈಟಿಗಳನ್ನು ಸುಗಮವಾಗಿ ಮುನ್ನಡೆಸ ಬಹುದು ಎನ್ನುವುದಕ್ಕೆ ಜಯಲಕ್ಷ್ಮೀ ಸೊಸೈಟಿ ನಿದರ್ಶನ. ಅಂತೆಯೇ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ `ಎ' ದರ್ಜೆಯ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ. ಒಂದೆಡೆ ಆರ್‍ಬಿಐ ಮತ್ತು ಸರಕಾರಗಳ ಪಾಲಿಸಿಗಳು ಸಹಕಾರಿ ಕ್ಷೇತ್ರಗಳನ್ನು ಮುನ್ನಡೆಸಲು ಕಟ್ಟುನಿಟ್ಟಿನ ಕ್ರಮಕೈಗೊಂಡÀರೂ ಇನ್ನೊಂದೆಡೆ ಭಾರೀ ಮೊತ್ತದ ಆಥಿರ್üಕ ಕೊಡುಗೆಗಳನ್ನು ನೀಡುತ್ತಾ ಜನರನ್ನು ಪೆÇ್ರೀತ್ಸಾಹಿಸುತ್ತಿದೆ. ಇದರಿಂದ ಜನಸಾಮಾನ್ಯರು ಆಥಿರ್üಕ ವಲಯದ ಲಾಭ ಪಡೆದು ಅತ್ಯಾಧುನಿಕ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆಯಿತ್ತರು.

ಉಪಾಧ್ಯಕ್ಷ ಕೆ.ರಾಜೇ ಗೌಡ ಮಾತನಾಡಿ ಯುವ ಜನತೆಯಲ್ಲಿನ ಪ್ರತಿಭೆಗೆ ಹೆಚ್ಚಿನ ಪ್ರಾಶಸ್ತ್ಯವನ್ನೀಡಲು ನಮ್ಮ ಸೊಸೈಟಿ ವಿಶೇಷ ಆಥಿರ್üಕ ಸಹಾಯದ ಯೋಜನೆಗಳನ್ನು ರೂಪಿಸಿದೆ. ಇದರ ಫಲಾನುಭವ ಯುವ ಜನತೆ ಮತ್ತು ಪಾಲಕರು ಪಡೆಯಬೇಕು. ಸೊಸೈಟಿ ಹಣಕಾಸು ನಿಗಮಗಳ ಪರಿವರ್ತನೆಗೆ ತಕ್ಕಂತೆ ಸಕಾಲಿಕವಾಗಿ ಕಾರ್ಯ ನಿರ್ವಾಹಿಸುತ್ತಿದ್ದು, ಸ್ವಯಂ ಉದ್ಯಮಿಗಳಾಗಿ ತಮ್ಮ ಸಾಮರ್ಥ್ಯದ ಸಾಧನೆಯ ಗುರಿ ತಲುಪಲು ಶ್ರಮಿಸಿದೆ. ಭವಿಷ್ಯದ ಅದೃಷ್ಟ ತೆರೆಯುವ ಅವಕಾಶಕ್ಕೆ ನಮ್ಮ ಸೊಸೈಟಿ ಸಹಾಯಹಸ್ತ ನೀಡಿದೆ ಎಂದರು.

ಸಭಿಕರ ಪರವಾಗಿ ಗ್ರಾಹಕ ಸದಸ್ಯರು, ಹಾಗೂ ಅತಿಥಿüಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಲಹೆ, ಸೂಚನೆಗಳ ನ್ನೀಡಿ ಸೊಸೈಟಿಯ ಉನ್ನತಿಗಾಗಿ ಶುಭಾರೈಸಿದರು.

ನೌಕರವೃಂದದ ಪ್ರಕಾಶ್ ನಾಮ್‍ದೇವ್ ವಾಡ್ಕರ್, ಪ್ರದೀಪ್ ಕುಮಾರ್ ರಾಮೇ ಗೌಡ, ಶಿವಕುಮಾರ್ ಹಿರಣ್ಯ ಗೌಡ, ರವಿ ಸುಭಾಶ್ ಗೌಡ, ಗಣೇಶ್ ಚಿಕ್ಕೇ ಗೌಡ, ದೈನಂದಿನ ಹಣಸಂಗ್ರಹಾ ಪ್ರತಿನಿಧಿಗಳಾದ ಮಿನಲ್ ಪಿ.ದೌಂಡ್, ಮಂಜೇ ದೊಡ್ಡೇ ಗೌಡ, ರವಿಕುಮಾರ್ ನಂಜಪ್ಪ ಗೌಡ, ರಾಮಕೃಷ್ಣ ನಂಜುಂಡೇ ಗೌಡ, ಬಸುರಾಜ್ ಚಿಕ್ಕೇ ಗೌಡ, ಪ್ರವೀಣ್ ಗಣೇಶ್ ಧಣವಡೆ, ದೇವರಾಜ್ ದೇಣೆ ಗೌಡ, ಶಂಕರ್ ರಂಗೇ ಗೌಡ, ಸದಾಶಿವ ಎಸ್. ಸಫಲಿಗ, ಅನಂತ ಸಿ.ನಾಯ್ಕ್, ಶೋಭಾನ್ ಎಸ್.ಸಾಲ್ಯಾನ್, ಸತೀಶ್ ಸಿ.ಗೌಡ, ಸಂತೋಷ್ ಮಾಂಡವ್ಕಾರ್ ಮತ್ತು ಗೀತಾ ಕಿಶೋರ್ ಕರ್ಕೇರ ಉಪಸ್ಥಿತರಿದ್ದು ಕಾರ್ಯಾಧ್ಯಕ್ಷರು ಸರ್ವರ ಅನುಪಮ ಸೇವೆ ಮನವರಿಸಿ ಅಭಿವಂದಿಸಿದರು.

ಸೊಸೈಟಿಯ ಪ್ರಬಂಧಕ ಪರ್ಶುರಾಮ್ ದೌಂಡ್ ಅವರು ಗತ ಸಾಲಿನ ವಾರ್ಷಿಕ ವ್ಯವಹಾರದ ಮಾಹಿತಿಯನ್ನಿತ್ತು ಸೊಸೈಟಿಯ ಪಾಲುದಾರಿಕ ಬಂಡವಾಳ ರೂಪಾಯಿ 2.01 ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ ರೂಪಾಯಿ 2.22 ಕೋಟಿ, ಠೇವಣಾತಿ ರೂಪಾಯಿ 24.96 ಕೋಟಿ, ಮುಂಗಡ ರೂಪಾಯಿ 19.32 ಕೋಟಿ, ಲಾಭಾರ್ಥ ಧನ ವಿನಿಯೋಗ ರೂಪಾಯಿ 8.01 ಕೋಟಿ, ನಿವ್ವಳ ಲಾಭ ರೂಪಾಯಿ 30.7 ಕೋಟಿ, ಕಾರ್ಯಮಾನ ಬಂಡವಾಳ ರೂಪಾಯಿ 3.01 ಕೋಟಿ ವ್ಯವಹಾರಿಸಿದೆ ಎನ್ನುತ್ತಾ ಸಭಾಕಲಾಪ ನಿರ್ವಹಿಸಿದರು.

ಮಧ್ಯಾಂತರದಲ್ಲಿ ಸೊಸೈಟಿಯ ಪರವಾಗಿ ಡಾ| ನಾರಾಯಣ ಗೌಡ ಅವರ ಜನ್ಮೋತ್ಸವವನ್ನು ಆಚರಿಸಲಾಗಿ ಅಭಿವಂದನಾ ಗೌರವವನ್ನೀಡಿ ಶುಭಾರೈಸಲಾಯಿತು. ಶಿಲ್ಪಾ ಸಂತೋಷ್ ಮಾಂಡವ್ಕಾರ್ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಆಶಾರಾಣಿ ಬಾಬು ಗೌಡ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಶೆÉೀರುದಾರರಿಗೆ ಈ ಬಾರಿಯೂ ಸೊಸೈಟಿಯು ಬ್ಯಾಂಕ್ 9% ಡಿವಿಡೆಂಟ್ ನೀಡಲಿದೆ ಎಂದÀು ಘೋಷಿಸಿದರು. ಕೆ.ರಾಜೇ ಗೌಡ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ, ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here