Thursday 25th, April 2024
canara news

ವಾಸುದೇವ ಶೆಟ್ಟಿ ಮಾರ್ನಾಡ್ ಅವರಿಗೆ `ಯಕ್ಷಗಾನ ಕಲಾ ಪ್ರಶಸ್ತಿ 2016'

Published On : 27 Jul 2016   |  Reported By : Rons Bantwal


ಮುಂಬಯಿ, ಜು.27: ರಾಷ್ಟ್ರೀಯ ಬಿಲ್ಲವರ ಮಹಾಮಂಡಳ, ಮುಲ್ಕಿ ಇದರ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರೂ ಆದ ಶ್ರೀಯುತ ಜಯ ಸಿ. ಸುವರ್ಣರ ಮಾತೃಶ್ರೀ ದಿ| ಅಚ್ಚು ಚಂದು ಸುವರ್ಣರವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಶಾಶ್ವತ ನಿಧಿಯಿಂದ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇವರು ನೀಡುವ 'ಯಕ್ಷಗಾನ ಕಲಾ ಪ್ರಶಸ್ತಿ-2016'ಗೆ ಖ್ಯಾತ ಯಕ್ಷಗಾನ ಕಲಾವಿದ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ವಾಸುದೇವ ಶೆಟ್ಟಿ ಮಾರ್ನಾಡ್ ಇವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25,000/- ರೂಪಾಯಿ ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನೊಳಗೊಂಡಿದೆ. ಇತ್ತೀಚೆಗೆ ಬಿಲ್ಲವ ಭವನದಲ್ಲಿ ಯಕ್ಷಗಾನದ ಹಿರಿಯ ಸಂಘಟಕ ಕಲಾವಿದ ಹೆಚ್.ಬಿ.ಎಲ್ ರಾವ್ ಅಧ್ಯಕ್ಷತೆಯಲ್ಲಿ ಜರಗಿದ ನಿರ್ಣಾಯಕ ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ. ವಾಸುದೇವ ಶೆಟ್ಟಿ ಮಾರ್ನಾಡು ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಮೂರುವರೆ ದಶಕಗಳ ಸೇವೆಯನ್ನು ಗಮನಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಮುಂಬಯಿ ಯಕ್ಷಗಾನ ಲೋಕ ಕಂಡ ತುಂಬು ಭರವಸೆಯ ಕಲಾವಿದ ವಾಸುದೇವ ಮಾರ್ನಾಡರು ತೆಂಕು-ಬಡಗು ಎರಡೂ ಶೈಲಿಗಳಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

ಮೂಡಬಿದಿರೆ ಸಮೀಪದ ಮಾರ್ನಾಡ್ ಗ್ರಾಮದಲ್ಲಿ ದಿ| ಪೆÇನ್ನಪ್ಪ ಶೆಟ್ಟಿ ಹಾಗೂ ಸರಸ್ವತಿ ಶೆಟ್ಟಿ ದಂಪತಿಗಳಿಗೆ ಜನಿಸಿರುವ (11.08.1968) ವಾಸುದೇವ ಶೆಟ್ಟಿ ಅವರು ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಉದರಂಭರಣಕ್ಕಾಗಿ 1980ರಲ್ಲಿ ಮುಂಬಯಿಗೆ ಬಂದರು. ಇಲ್ಲಿ ಹಗಲಿಗೆ ಹೋಟೆಲಿನಲ್ಲಿ ದುಡಿಯುತ್ತ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ ಹೈಸ್ಕೂಲು ಶಿಕ್ಷಣವನ್ನು ಮುಗಿಸಿ ಅನಂತರ ಕನ್ನಡ ಭವನ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಲ್ಲಿ ಕಾಲೇಜು ಶಿಕ್ಷಣವನ್ನು ಪಡೆದು ವಾಣಿಜ್ಯ ಪದವೀಧರರಾದರು. ಹೈಸ್ಕೂಲ್ ಶಿಕ್ಷಣ ಪಡೆಯುತ್ತಿರುವಾಗಲೇ ಏಕಪಾತ್ರಾಭಿನಯ, ಛದ್ಮವೇಷ, ಸಮೂಹಗಾನ, ಭಾವಗೀತೆಗಳಲ್ಲಿ ಭಾಗವಹಿಸಿ ಇವರು ಬಹುಮಾನ ಪಡೆದಿದ್ದಾರೆ. ನಾಟಕ, ಯಕ್ಷಗಾನ ಕಲೆಯ ಆಸಕ್ತರಾಗಿದ್ದ ಇವರು 1981ರಲ್ಲಿ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಕಟೀಲು ಮಾಲಿಂಗನಾಯ್ಕರಲ್ಲಿ ಎರಡು ವರ್ಷಗಳ ಕಾಲ ಯಕ್ಷ ನಾಟ್ಯದ ತರಬೇತಿ ಪಡೆದರು. ಗುರುನಾರಾಯಣ ಮಂಡಳಿಗೆ ಇವರನ್ನು ಸಹಪಾಠಿ ರತ್ನಾಕರ ಉಪ್ಪೂರು ಪರಿಚಯಿಸಿದರು. ಟೈಲರ್ ದಿ| ಸಂಜೀವ ಕರ್ಕೇರ ಅವರಿಂದ ಇವರ ಯಕ್ಷಗಾನದ ಆಸಕ್ತಿಗೆ ಹೆಚ್ಚಿನ ಪ್ರೇರಣೆ ದೊರಕಿತು. ಗುರುನಾರಾಯಣ ಮಂಡಳಿ ಕಲಾವಿದರು, ಮುಂಬಯಿಯ ಹಿರಿಯ, ಕಿರಿಯ ಕಲಾವಿದರು, ಅರ್ಥಧಾರಿಗಳು ಇವರನ್ನು ಉತ್ತೇಜಿಸಿದರು. ಗುರುನಾರಾಯಣ ಮಂಡಳಿಯಲ್ಲಿ ಪ್ರಥಮವಾಗಿ `ಕಾಂತಬಾರೆ ಬೂದಬಾರೆ', ಪ್ರಸಂಗದಲ್ಲಿ `ಆಚುಬಾರೆದಿ' ಪಾತ್ರವನ್ನು ನಿರ್ವಹಿಸಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಲಕ್ಷ ್ಮಣ, ಪರಶುರಾಮ, ಅಭಿಮನ್ಯು, ಬಬ್ರುವಾಹನ, ಸುಧನ್ವ, ಮಾರ್ತಾಂಡ ತೇಜ, ಶ್ರೀಕೃಷ್ಣ, ಶ್ರೀರಾಮ, ವಿಷ್ಣು, ಬ್ರಹ್ಮ, ರಕ್ತಬೀಜಾಸುರ, ಚಂಡಾಸುರ, ಮುಂಡಾಸುರ, ಮಣಿಕಂಠ, ಅಯ್ಯಪ್ಪ, ಹನುಮಂತ, ಹಿರಣ್ಯಾಕ್ಷ, ದೇವುಪೂಂಜ, ಕೋಟಿ, ಚೆನ್ನಯ, ಕಾಂತಾಬಾರೆ, ಬೂದಬಾರೆ, ಚಂದುಗಿಡಿ, ಕೋರ್ದಬ್ಬು, ಮುಂತಾದ ಪಾತ್ರಗಳ ಮೂಲಕ ಕಲಾರಸಿಕರ ಮೆಚ್ಚುಗೆ ಗಳಿಸಿದರು. ಗುರುನಾರಾಯಣ ಮಂಡಳಿಯೊಂದರಲ್ಲೇ ಸುಮಾರು 35 ವರ್ಷಗಳ ಕಾಲ ಸೇವೆ ಗೈದ ಕೀರ್ತಿ ಇವರಿಗೆ ಸಲ್ಲುತ್ತದೆ. ಯಕ್ಷಗಾನದ ನೃತ್ಯ, ಅಭಿನಯ, ಮಾತುಗಾರಿಕೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ವಾಸುದೇವ ಮಾರ್ನಾಡ್ ಬಹುಬೇಗನೆ ಮುಂಬಯಿಯ ಯಕ್ಷಗಾನ ಹಾಗೂ ತಾಳಮದ್ದಲೆ ವಲಯದಲ್ಲೂ ಗುರುತಿಸಲ್ಪಟ್ಟರು. ಆಗಾಗ್ಗೆ ನಾಟಕದಲ್ಲೂ ಅಭಿನಯಿಸುವ ವಾಸುದೇವ ಮಾರ್ನಾಡ್ ಅವರು ಮುಂಬಯಿಯ ಪ್ರಸಿದ್ಧ ನಿರ್ದೇಶಕ ಭರತ್ ಕುಮಾರ್ ಪೆÇಲಿಪು ನಿರ್ದೇಶನದ ಅಂಬೆ, ಮೃಗತೃಷ್ಣಾ, ಇನ್ನೊಬ್ಬ ದ್ರೋಣಾಚಾರ್ಯ ಮುಂತಾದ ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ವೃತ್ತಿಯಲ್ಲಿ 1991 ರಿಂದ ಕ್ಯಾಂಟೀನ್ ಉದ್ಯಮದಲ್ಲಿ 9 ವರ್ಷ ಅನುಭವ ಪಡೆದು ಅನಂತರ 2009ರಲ್ಲಿ ತನ್ನದೇ ಆದ `ಕ್ರಿಸ್ಟಲ್ ಹಾಸ್ಪಿಟಾಲಿಟಿ ಸರ್ವಿಸಸ್' ಸಂಸ್ಥೆ ಸ್ಥಾಪಿಸಿ ಇದರ ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲದೆ ಗೀತಾಂಬಿಕಾ, ದುರ್ಗಾಪರಮೇಶ್ವರಿ, ಪದವೀಧರ, ರಾಘವೇಂದ್ರ ಯಕ್ಷಗಾನ ಮಂಡಳಿಗಳಲ್ಲೂ ವೇಷ ಹಾಕಿದ ಶ್ರೇಯಸ್ಸು ಇವರದು. ಬಯಲಾಟ ಮಾತ್ರವಲ್ಲದೆ ತಾಳಮದ್ದಲೆ ಕ್ಷೇತ್ರದಲ್ಲೂ ಇವರು ಪ್ರಸಿದ್ಧರಾಗಿದ್ದಾರೆ. ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭವು ಬಿಲ್ಲವ ಭವನದಲ್ಲಿ 28.08.2016 ರಂದು ಸಂಜೆ ಗಂಟೆ 4.30ಕ್ಕೆ ಜರಗಲಿದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here