Thursday 28th, March 2024
canara news

ತುಳು ಸಂಸ್ಕøತಿಯ ಭವಿಷ್ಯ ಯುವಜನರಲ್ಲಿದೆ : ಸಂದೇಶ್‍ಕುಮಾರ್

Published On : 27 Jul 2016   |  Reported By : Rons Bantwal


ಮುಂಬಯಿ (ಮೂಲ್ಕಿ), ಜು.27: ತುಳು ಸಂಸ್ಕøತಿಯನ್ನು ಭವಿಷ್ಯದಲ್ಲಿ ಉಳಿಸುವ ಬಹುದೊಡ್ಡ ಜವಬ್ದಾರಿ ಯುವಜನರಲ್ಲಿದೆ, ಕೌಟುಂಬಿಕ ಸಂಬಂಧಗಳು ಆಂಟಿ-ಅಂಕಲ್‍ಗೆ ಸೀಮಿತವಾಗುತ್ತಿರುವುದು ವಿಪರ್ಯಾಸವಾಗಿದೆ. ಆಧುನಿಕ ಪರ್ವಕಾಲದಲ್ಲಿ ನಮ್ಮ ತುಳು ಮಾತೃಭಾಷೆ ಹಾಗೂ ಸಂಸ್ಕøತಿಯನ್ನು ಬೆಳೆಸಲು ಸಮ್ಮೇಳನದ ಮೂಲಕ ಪೂರಕವಾಗಿ ಯುವ ಸಮಾಜವನ್ನು ಸಂಘಟಿಸುವುದು ಆಸಕ್ತಿ ಬೆಳೆಸಲು ಸಹಕಾರಿ ಎಂದು ಉದ್ಯಮಿ ಸಂದೇಶ್ ಕುಮಾರ್ ಶೆಟ್ಟಿ ಹೇಳಿದರು.

ಟೈಮ್ಸ್ ಆಫ್ ಕುಡ್ಲದ ತುಳು ಪತ್ರಿಕೆದ ನಾಲ್ಕನೇ ವರ್ಷದ ನೆನಪಿಗಾಗಿ ಮೂಲ್ಕಿಯಲ್ಲಿ ಆಗಸ್ಟ್ 13 ಮತ್ತು 14ರಂದು ನಡೆಯುವ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ಶಾಲಾ ಕಾಲೇಜಿನ ವಿದ್ಯಾಥಿರ್üಗಳಿಗಾಗಿ ನಡೆದ ತುಳು ಸಾಂಸ್ಕøತಿಕ ಸ್ಪರ್ಧೆಯನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಸಂದೇಶ್ ಕುಮಾರ್ ಮಾತನಾಡಿದರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ| ವೈ.ಎನ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದು, ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಸುವರ್ಣ ಮಾತನಾಡಿ, ತುಳು ಭಾಷೆ ಸಂಸ್ಕøತಿಯನ್ನು ಬೆಳೆಸುವ ಹಿನ್ನಲೆಯಲ್ಲಿ ವಿವಿಧ ಯೋಜನೆ ಹಾಗೂ ಯೋಚನೆಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ತುಳು ಸಮ್ಮೇಳನವು ತುಳು ಭಾಷೆ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಉತ್ತಮ ವೇದಿಕೆಯಾಗಲಿದೆ ಎಂದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್, ಮೂಲ್ಕಿ ಲಯನ್ಸ್ ಅಧ್ಯಕ್ಷ ಸುಜಿತ್ ಎಸ್.ಸಾಲ್ಯಾನ್, ರೋಟರಿ ಅಧ್ಯಕ್ಷ ಜೋನ್ ವಿಲ್ಸನ್ ಡಿ'ಸೋಜಾ, ಕಾರ್ಯಕ್ರಮ ಸಂಯೋಜಕ ರವಿಚಂದ್ರ, ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶೋಧಾ ಕೇಶವ, ಕೋಶಾಧಿಕಾರಿ ರತ್ನಾ ರಂಜನ್, ಶಾಂಭವಿ ಶೆಟ್ಟಿ, ಭಾರತೀ ರೈ, ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾದ ಉಡುಪಿ ಪ್ರಾಚ್ಯ ಸಂಚಯ ಕೇಂದ್ರದ ನಿರ್ದೇಶಕ ಎಸ್.ಎ ಕೃಷ್ಣಯ್ಯ ಮತ್ತು ಗೋವಾ ಬಂಟರ ಸಂಘದ ಮಾಜಿ ಅಧ್ಯಕ್ಷ ಶಶಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಮಿತಿಯ ಪ್ರಧಾನ ಸಂಚಾಲಕ ಎಸ್.ಆರ್ ಬಂಡಿಮಾರ್ ಪ್ರಸ್ತಾವನೆಗೈದರು. ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಕೆರೆಕಾಡು ನಿರೂಪಿಸಿದರು. ರವಿಚಂದ್ರ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here