Wednesday 24th, April 2024
canara news

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯಿದೆ 2012 ರ ಕುರಿತು ಮಾಹಿತಿ ಶಿಬಿರ

Published On : 28 Jul 2016   |  Reported By : Bernard J Costa


ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಒಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ತಡೆಗಟ್ಟಲು ಪೋಕ್ಸೊ ಕಾಯಿದೆ 2012ರಲ್ಲಿ ಅನುಷ್ಠಾನಗೊಂಡಿದೆ. ಮಗುವಿನೊಡನೆ ಲೈಂಗಿಕ ಉದ್ದೇಶದಿಂದ ಮಗುವಿನ ಗಮನ ಸೆಳೆದರೆ, ಅಸಭ್ಯವಾಗಿ ವರ್ತಿಸಿದರೆ ಅದನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುವುದು ಮತ್ತು ಲೈಂಗಿಕ ಶೋಷಣೆಯಿಂದ ನಮ್ಮ ಮಕ್ಕಳನ್ನು ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶ್ರೀ ಕೆ.ಆರ್. ನಾಯಕ್ ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಹಾಗೂ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಕುಂದಾಪುರ ಇವರು ಹೇಳಿದರು.

ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆ ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ “ಪೋಕ್ಸೊ ಕಾಯಿದೆ 2012” ರ ಕುರಿತು ಮಾಹಿತಿ ಶಿಬಿರ ಕಮಲಶಿಲೆ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಮಾತಾಡಿದರು. ನಮ್ಮ ದೇಶದ ಬಹುದೊಡ್ಡ ಸಂಪನ್ಮೂಲವೇ ಮಕ್ಕಳು. ಈ ಮಕ್ಕಳ ಮೇಲಿನ ಯಾವುದೇ ರೀತಿಯ ಶೋಷಣೆ, ನಿರ್ಲಕ್ಷ, ದುರುಪಯೋಗ ಪೋಕ್ಸೊ ಕಾಯಿದೆಯಿಂದ ರಕ್ಷಿಸಿಕೊಳ್ಳಲು ಸಾದ್ಯ ಎಂದು ಪ್ರತಿಪಾದಿಸಿ ಪ್ರತಿ ವಿದ್ಯಾರ್ಥಿಯೂ ಹಾಗೂ ಪೋಷಕರು ತಿಳಿದುಕೊಳ್ಳಬೇಕೆಂದರು. ಮತ್ತು ನಮ್ಮ ಮಕ್ಕಳಿಗೆ ಒಳ್ಳೆಯ ಆರೋಗ್ಯಕರ ಬಾಲ್ಯವನ್ನು ನೀಡಿ ಉತ್ತಮ ಸಮಾಜ ಮಾಡಿ ಅವರಲ್ಲಿ ರಾಷ್ಟ್ರಾಭಿಮಾನ, ರಾಷ್ಟ್ರೀಯತೆ ಹೆಚ್ಚಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.

ಸಭಾಧ್ಯಕ್ಷತೆಯನ್ನು ಶ್ರೀ ಸುರೇಂದ್ರ ಶೆಟ್ಟಿ, ಮುಖ್ಯ ಶಿಕ್ಷಕರು ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆ ಇವರು ನಿರ್ವಹಿಸಿ ಜಗತನ್ನು ಅರಿಯದ ಮಗು ಯಾರ ಮನೆಯಲ್ಲಿಯೇ ಆಗಲಿ ಯಾವುದೇ ಕ್ರೌರ್ಯದಿಂದ ಬಾಲ್ಯವನ್ನು ಕಳೆದುಕೊಳ್ಳಬಾರದು, ಅಲ್ಲದೆ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವುದು ಪ್ರತಿ ಪ್ರಜೆಯ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಶ್ರೀ ಎ. ಬಾಲಚಂದ್ರ ಭಟ್ಟ ಅಧ್ಯಕ್ಷರು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಮಾನಂಜೆ ಕಮಲಶಿಲೆ ಹಾಗೂ ಶ್ರೀಮತಿ ಭಾಗೀರಥಿ ಅಧ್ಯಕ್ಷರು ಹಳ್ಳಿಹೊಳೆ ಗ್ರಾಮ ಪಂಚಾಯತ್ ಹಾಗೂ ಕಮಲಶಿಲೆ ವಾರ್ಡ್ ಸದಸ್ಯೆ ಶ್ರೀಮತಿ ಗಿರಿಜಾ, ಶಂಕರನಾರಾಯಣ ಠಾಣೆಯ ದಿವಾಕರ ಶರ್ಮ, ಶ್ರೀ ಕೇಶವ ಗಾಣಿಗ ಉದ್ಯಮಿ ಆಜ್ರಿಹರ, ಕುಂದಾಪುರ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಇದರ ಕಾರ್ಯದರ್ಶಿ ಶ್ರೀ ರಮೇಶ್ ವಕ್ವಾಡಿ ಹಾಗೂ ಸಂಪನ್ಮೂಲ ವ್ಯಕ್ತಿ ಶ್ರೀ ವಿಜಯವಾಸು ಪೂಜಾರಿ ಉಡುಪಿ ಜಿಲ್ಲೆ ಸರಕಾರಿ ಅಭಿಯೋಜಕರು ( PಔಅSಔ) ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ಅನಿತಾ ಉಡುಪಿ ನಿರೂಪಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ದಿವ್ಯ ವಂದಿಸಿದರು, ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಶ್ರೀ ವಿಜಯವಾಸು ಪೂಜಾರಿ ಸಂವಾದ ನಡೆಸಿಕೊಟ್ಟರು. ಸುಮಾರು 139 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here