Thursday 25th, April 2024
canara news

ಹೊಸ ತಾಲೂಕು ರಚನೆ ಖಂಡಿತ.

Published On : 28 Jul 2016   |  Reported By : creative BVR


19-07-2016 ಬೆಂಗಳೂರು ಕಂದಾಯ ಕಾಗೋಡು ತಿಮ್ಮಪ್ಪ ಸಚಿವರ ಕಛೇರಿ,

ರಾಜ್ಯ ತಾಲೂಕು ಹೋರಾಟ ಸಮಿತಿ ಘೋಷಿತ 43 ತಾಲೂಕು ಸಮಿತಿಗಳ ಪದಾಧಿಕಾರಿಗಳನ್ನು ಸೇರಿಕೊಂಡು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪರನ್ನು ಭೇಟಿ ಮಾಡಿ, ಶೀಘ್ರ ಘೋಷಿತ ತಾಲೂಕುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ಈ ಸಂಧರ್ಭದಲ್ಲಿ ಮಾತನಾಡಿದ ಕಂದಾಯ ಸಚಿವರು ಹಲವಾರು ವರ್ಷದ ಈ ಬೇಡಿಕೆ ನನ್ನ ಗಮನದಲ್ಲಿದೆ.

ಮೂರು ವರ್ಷದ ಹಿಂದೆ ಘೋಷಣೆಯಾದ ತಾಲೂಕುಗಳ ಹೋರಾಟ, ಪ್ರತಿಭಟನೆಗಳ ಮಾಹಿತಿ ನನಗಿದೆ. ಎಲ್ಲಾ ದೃಷ್ಟಿ ಕೋನದಿಂದಲೂ ತಾಲೂಕು ರಚನೆ ಅತೀ ಅಗತ್ಯ . ಈ ಮೂಲಕ ಜನರ ಬಳಿಗೆ ಕಂದಾಯ ಇಲಾಖೆಯನ್ನು ತೆಗೆದುಕೊಂಡು ಹೋಗುವಚಿತೆ ಆಗುತ್ತದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲೂ ಅತೀ ಅಗತ್ಯ. ಹಿಂದೆ ಯಾವಾಗಲೋ ಆಗಬೇಕಿತ್ತು ಇನ್ನೂ ಹೆಚ್ಚಿನ ತಾಲೂಕುಗಳ ಬೇಡಿಕೆಯಿದೆ. ಆ ಬಗ್ಗೆ ಕೂಡಾ ಗಮನ ಹರಿಸಿ ಸದ್ಯದಲ್ಲಿಯೇ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೇನೆ.

ಹಣಕಾಸು ಮತ್ತು ಇತರ ಬಗ್ಗೆ ಮುಖ್ಯಮಂತ್ರಿಗಳೊಡನೆ ಚರ್ಚೆ ಮಾಡಿ ಮುಂದಿನ ಬಜೆಟ್‍ನಲ್ಲಿ ತಮಗೆ ನ್ಯಾಯ ನೀಡುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದು ಕಂದಾಯ ಸಚಿವರು ಭರವಸೆ ನೀಡಿದರು. ಸಮಿತಿಯಲ್ಲಿ ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಬಸವರಾಜ ಪಾಟೀಲ್, ಪ್ರ.ಕಾ. ಬಾರ್ಕೂರು ಸತೀಶ್ ಪ್ರಜಾರಿ, ಬಸವನ ಷಡ, ಪಾಟೀಲ್ ಈರಣ್ಣ, ದೇವರಾಜ್ ಶಿರವಾರ, ಮಲ್ಲೇಶಪ್ಪ, ವಿಶ್ವನಾಥ, ಪ್ರಹ್ಲಾದ್ ಜೋಶಿ, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here