Thursday 25th, April 2024
canara news

ಮಂಗಳೂರಿನ ಮಹಿಳೆ ಐಸಿಸ್‌ಗೆ ಸೇರಿರುವ ಶಂಕೆ

Published On : 28 Jul 2016   |  Reported By : Canaranews Network


ಮಂಗಳೂರು: ಮಂಗಳೂರು ಮೂಲದ ಮಹಿಳೆಯೊಬ್ಬರು ಐಸಿಸ್‌ ಸೇರಿದ್ದಾರೆಂಬ ಮಾಹಿತಿ ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಉನ್ನತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ಈಗಾಗಲೇ ಕೇರಳ-ಕರ್ನಾಟಕದ ಗುಪ್ತಚರ ಇಲಾಖೆ ಹಾಗೂ ಅಪರಾಧ ಪತ್ತೆ ವಿಭಾಗದ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಆಕೆ ಮಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ಡಿಪ್ಲೊಮಾ ಕೋರ್ಸ್‌ ಮಾಡಿದ್ದಾಳೆ.

2015ರಲ್ಲಿ ಕೇರಳದ ಕೋಯಿಕ್ಕೋಡ್‌ನ‌ ವ್ಯಕ್ತಿಯ ಜತೆಗೆ ವಿವಾಹ ನಡೆದಿತ್ತು. ಬಳಿಕ ಆಕೆ ಪತಿಯೊಂದಿಗೆ ಶ್ರೀಲಂಕಾಕ್ಕೆ ತೆರಳಿದ್ದಳು. ಜತೆಗೆ ಕುಟುಂಬದ ಇತರ 6 ಮಂದಿಯೂ ಹೋಗಿದ್ದಾರೆ. ಈ ತಂಡ ಶ್ರೀಲಂಕಾದಿಂದ ಮಸ್ಕತ್‌ ಮತ್ತು ಕತಾರ್‌ಗೆ ಹೋಗಿದೆ. ಆ ಬಳಿಕ ಇವರು ಯಾರ ಸಂಪರ್ಕಕ್ಕೂ ಸಿಗಲಿಲ್ಲ.ಆದರೆ ಕೇರಳದಿಂದ 16 ಮಂದಿ ನಾಪತ್ತೆಯಾಗಿ ಐಸಿಸ್‌ ಸೇರ್ಪಡೆಯಾದವರ ಬಗ್ಗೆ ಬಹಿರಂಗವಾದ ಮಾಹಿತಿಯಲ್ಲಿ ಆಕೆಯ ಕುಟುಂಬವಿತ್ತು ಎಂಬುದಾಗಿ ತಿಳಿದುಬಂದಿದೆ.

ಇದಾದ ಕೆಲವೇ ದಿನಗಳ ಬಳಿಕ ಅಬ್ದುಲ್‌ ಸಲಾಂ ಎಂಬಾತ ಸಾಮಾಜಿಕ ಜಾಲತಾಣದಲ್ಲಿ "ಇಸ್ಲಾಂನ ಸ್ವರ್ಗದಲ್ಲಿ ಸುಖವಾಗಿದ್ದೇವೆ' ಎಂದು ಆತನ ಮನೆಯವರಿಗೆ ಸಂದೇಶ ಕಳುಹಿಸಿದ್ದ. ಈ ಸಂದೇಶ ಅಫ್ಘಾನಿಸ್ಥಾನ ಮತ್ತು ಸಿರಿಯಾದ ಗಡಿ ಪ್ರದೇಶ ತಾರಾಬೋಧಾ ಎಂಬಲ್ಲಿಂದ ರವಾನೆಯಾಗಿರುವುದಾಗಿ ಗೊತ್ತಾಗಿದೆ. ಇದರ ಜಾಡು ಹಿಡಿದು ತನಿಖೆ ನಡೆಸಿದ ಗುಪ್ತಚರ ಇಲಾಖೆ ಈ ಮಹಿಳೆಯ ಕುಟುಂಬ ಕೂಡ ಸಿರಿಯಾದಲ್ಲಿ ಇರುವ ಶಂಕೆ ವ್ಯಕ್ತಪಡಿಸಿದೆ. ಕೇರಳದ ಆಂತರಿಕ ಭದ್ರತೆಯ ಪೊಲೀಸರೂ ಮಂಗಳೂರಿಗೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here