Wednesday 24th, April 2024
canara news

ಉಡುಪಿಯಲ್ಲಿ ಭಂಡಾರಿ ಕುಟುಂಭೋತ್ಸವ-ಆಟಿಡೊಂಜಿ ದಿನ ಸಮಾಪನ

Published On : 01 Aug 2016   |  Reported By : Rons Bantwal


ನವ ಪೀಳಿಗೆಗೆ ಸಂಸ್ಕೃತಿಯ ಆಸ್ತಿ ಬಗ್ಗೆ ತಿಳಿಸಿ : ಸಚಿವ ಮಧ್ವರಾಜ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.31: ಇತಿಹಾಸ, ಕಟ್ಟುಕಟ್ಟಳೆಗಳ ಉಳಿಸುವಿಕೆಗೆ ಭಂಡಾರಿ ಸಮಾಜದ ಶ್ರಮವು ಸಾಧನೀಯವಾಗಿ ದೆ. ಒಳಿತು-ಕೆಡುಕುಗಳನ್ನು ಸಮಾನವಾಗಿ ಸ್ವೀಕರಿಸಿದ ಈ ಸಮಾಜಕ್ಕೆ ದೇಶದ ಪ್ರಧಾನಿಯೂ ತಲೆಬಾಗಿಸ ಬೇಕಾಗುತ್ತದೆ. ಅದೇ ಭಂಡಾರಿ ಸಮಾಜದ ಶಕ್ತಿಯಾಗಿದೆ. ಕಾರಣ ಇವರದ್ದು ಕ್ಷೌರಿಕ ವೃತ್ತಿ. ಪ್ರಸ್ತುತ ಪೀಳಿಗೆಗೆ ಅಪ್ಪಮ್ಮ, ಅಜ್ಜಜ್ಜಿ, ಹಿರಿಯರು, ಪೂರ್ವಜರು ಮಾಡಿಟ್ಟ ಆಸ್ತಿ, ಒಡವೆ, ಹಣದ ಮೇಲಿನ ಮೋಹವೇ ಹೆಚ್ಚು ಆದರೆ ಇವರು ಸಂಸ್ಕೃತಿಯ ಆಸ್ತಿ ಬಗ್ಗೆ ತಿಳಿಯುವ ಪ್ರಯತ್ನ ಮಾಡುವವರಲ್ಲ. ಅವರಿಗೆ ಸಂಪ್ರದಾಯ, ನಂಬಿಕಸ್ಥ ಪರಂಪರೆ ಬೇಡ. ಹಿರಿಯರ ಪರಂಪರೆಯೇ ಭಾರತೀಯರ ಆಸ್ತಿಯಾಗಿದೆ. ಅದು ಉಳಿಸಿ ಬೆಳೆಸಲು ಇಂತಹ ಕುಟುಂಭೋತ್ಸವಗಳು ಆದರನೀಯ. ಆಟಿ ಆರೋಗ್ಯ ಸುಧಾರಣಾ ಕಾಲವಾಗಿದೆ ಎಂದು ಕರ್ನಾಟಕ ರಾಜ್ಯದ ಮೀನುಗಾರಿಕಾ, ಯುವಜನಸೇವೆ-ಕ್ರೀಡೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಜಾಗತಿಕ ಭಂಡಾರಿ ಸಮಾಜ ಸಂಸ್ಥೆಗಳ ಒಕ್ಕೂಟ ಭಂಡಾರಿ ಮಹಾ ಮಂಡಲ ಸಂಸ್ಥೆಯು ಇಂದಿಲ್ಲಿ ಭಾನುವಾರ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ದಿನವಿಡೀ ಆಯೋಜಿಸಿದ್ದ `ಆಟಿಡೊಂಜಿ ದಿನ ಮತ್ತು ಭಂಡಾರಿ ಕುಟುಂಭೋತ್ಸವ'ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿದ್ದು ಸಚಿವ ಮಧ್ವರಾಜ್ ಮಾತನಾಡಿದರು.

ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ರಘುಪತಿ ಭಟ್, ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಎನ್.ಟಿ ಪೂಜಾರಿ, ಬಂಟರ ಸಂಘ ಪಡುಬಿದ್ರಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಉಡುಪಿ ನಗರ ಸಭಾ ಅಧ್ಯಕ್ಷೆ ವಿೂನಾಕ್ಷಿ ಮಾಧವ ಬನ್ನಂಜೆ, ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ, ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ತುಳು ನಾಟಕ-ಚಲನಚಿತ್ರಗಳ ಸೂಪರ್‍ಸ್ಟಾರ್ ನವೀನ್ ಡಿ.ಪಡೀಲ್ ಅವರಿಗೆ `ತುಳುನಾಡ ತುಡರ್', ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ| ಶಿವರಾಮ ಕೆ.ಭಂಡಾರಿ ಅವರಿಗೆ `ಭಂಡಾರಿ ವಿಭೂಷಣ', ಉಡುಪಿ ನಗರಸಭಾ ಸದಸ್ಯ ಎನ್.ನವೀನ್ ಭಂಡಾರಿ ಅವರಿಗೆ `ಭಂಡಾರಿ ಕುಲರತ್ನ' ಬಿರುದು ಪ್ರದಾನಿಸಿ ಸಚಿವ ಮಧ್ವರಾಜ್ ಸನ್ಮಾನಿಸಿ ಗೌರವಿಸಿದರು. ಈಸಂದರ್ಭದಲ್ಲಿ ವಿನೋದಾ ನವೀನ್ ದಂಪತಿ ವೇದಿಕೆಯಲ್ಲಿ ಆಸೀನರಾಗಿದ್ದರು. ಹಾಗೂ ದಯಾನಂದ ಕತ್ತಲೆಸಾರ್, ಮಹೇಶ್ ರಾವ್ (ರಂಗೋಳಿ), ಅರ್ಪಿತಾ ಪಿ.ಶೆಟ್ಟಿ ಕಟಪಾಡಿ ಅವರನ್ನೂ, ತಿಂಡಿ ತಿನಿಸುಗಳ ಅಡುಗೆ ಸ್ಪರ್ಧಾ ವಿಜೇತರಾದ ಅನ್ನಪೂರ್ಣೇಶ್ವರಿ ಭಂಡಾರಿ ಮಹಿಳಾ ಬಳಗ ಬಾರ್ಕೂರು (ಪ್ರಥಮ ಸ್ಥಾನ), ಸ್ವಾಗತ ಭಂಡಾರಿ ಮಹಿಳಾ ಮಂಡಳಿ ಉಡುಪಿ (ದ್ವಿತೀಯ ಸ್ಥಾನ) ಹಾಗೂ ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗ (ತೃತೀಯ ಸ್ಥಾನ) ಸ್ಥಾನಗಳ ವಿಜೇತ ತಂಡಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ವಿತರಿಸಿ ಹಾಗೂ ಲಕ್ಕಿಡಿಪ್ ಡ್ರಾಗೈದು ವಿಜೇತರಿಗೆ ಬಹುಮಾನ ನೀಡಿ ಸಚಿವ ಮಧ್ವರಾಜ್ ಅಭಿನಂದಿಸಿದರು.

ಎನ್.ಟಿ ಪೂಜಾರಿ ಮಾತನಾಡಿ ಒಂದು ಹಿಂದುಳಿದ ಸಮಾಜವಾದರೂ ಸಂಪ್ರದಾಯಗಳ ಉಳಿವಿನಲ್ಲಿ ಮುನ್ನಡೆದ ಸಮಾಜವಾಗಿ ಶೋಭಿಸುತ್ತಿರುವುದು ಅಭಿನಂದನೀಯ. ಬಾಂಧವ್ಯತೆಯ ನಿಟ್ಟಿನಲ್ಲಿ ನಾನೂ ಇಲ್ಲಿಗಾಗಮಿಸಿದ್ದು ಇಂತಹ ಅತಾದ್ಭುತ ಸಂಘಟನಾಶೀಲತೆ ಕಂಡು ಸಂತೋಷಭರಿತನಾಗಿದ್ದೇನೆ ಎಂದರು.

ಇದೊಂದು ಅರ್ಥಪೂರ್ಣ, ಮಹತ್ವಪೂರ್ಣ ಹಾಗೂ ರಚನಾತ್ಮಕ ಕಾರ್ಯಕ್ರಮ. ನನಗೂ 30-40ರ ವರ್ಷಗಳ ಹಳೆ ನೆನಪು ಮರುಕಳಿಸಿತು. ಹಳೆ ಕಾಲದ ಗತವೈಭವ, ತಿಂದಿತಿನಿಸುಗಳ ರುಚಿ ಅದರೊಳಗಿನ ಆರೋಗ್ಯಕರ ಬದುಕು ನಿಜಕ್ಕೂ ಅವಿಸ್ಮರಣೀಯ. ಇಂತಹ ಕಾರ್ಯಕ್ರಮಗಳಿಂದ ಸಂಬಂಧಗಳು ಮತ್ತಷ್ಟು ಬೆಸೆಯುತ್ತವೆ ಎಂದÀು ನವೀನ್‍ಚಂದ್ರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಆಟಿ ಎಂದರೆ ಆಹಾರ ಪದ್ಧತಿ. ಅವನತಿಯಿಂದ ಆರೋಗ್ಯದತ್ತ ಸಾಗುವ ಕಾಲ. ಇಂದು ಹಳೆಬೇರು ಹೊಸ ಚಿಗುರುಗೊಂಡು ಆಯೋಜಿಸಿದ ಈ ಭವ್ಯ ಸಂಭ್ರಮ ಹೊಸ ಜನಾಂಗಕ್ಕೆ ಮಾದರಿಯಾಗಿದೆ. ನಾವು ಮೂಲಸ್ಥಾನ ಮರೆಯಬಾರದು. ಧಾರ್ಮಿಕ ಕೇಂದ್ರಿತ ಸಮಾಜ ಸದಾ ಒಳಿತನ್ನೇ ಸಾಧಿಸುತ್ತದೆ ಎಂದÀು ರಘುಪತಿ ಭಟ್ ನುಡಿದರು.

ಏನೊಂದೂ ಅಪೇಕ್ಷೆವಿಲ್ಲದೆ ಕಲಾಕಾರರನ್ನು ಸಾಕುವ ಸುರೇಶ್ ಭಂಡಾರಿ ದೇವಮಾನವರೇ ಸರಿ. ಅವರಿಂದ ಸಮಾಜ ಹತ್ತಿರವಾಗಿ ಸಮೋಜೋದ್ಧಾರ ಆಗಿದೆ. ಹಣ ಎಲ್ಲರಲ್ಲೂ ಇದೆ. ಆದರೆ ಕೊಡುವ ಮನಸ್ಸುಗಳು ಬರೇ ಒಂದೆರಡು. ಅದಕ್ಕೂ ಯೋಗ್ಯತೆ, ಭಾಗ್ಯ, ಯೋಗಬೇಕು. ಇಂತಹ ಮನ, ಜನಗಳಿಂದ ಸಂಸ್ಕೃತಿಗಳು ಪುನರ್ ನಿರ್ಮಾಣವಾಗಲಿ ಎಂದÀು ನವೀನ್ ಪಡೀಲ್ ಸನ್ಮಾನಕ್ಕೆ ಉತ್ತರಿಸಿದರು.

ಶಾಲಿನಿ ಗಂಗಾಧರ್ ಭಂಡಾರಿ ಮತ್ತು ಸಂಗಡಿಗರು ಪ್ರಾರ್ಥನೆಯನ್ನಾಡಿದರು. ಸುರೇಶ್ ಎಸ್.ಭಂಡಾರಿ ಕಡಂದಲೆ ಸ್ವಾಗತಿಸಿದರು. ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಗೌರವ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಳನ್ನೊಂ. ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಸನ್ಮಾನಿತರನ್ನು ಪರಿಚಯಿಸಿ ಪ್ರಶಸ್ತಿಪತ್ರ ವಾಚಿಸಿದರು. ಜ್ಯೋತಿ ಬಿ.ಭಂಡಾರಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಕುಮಿ ತಂಡ ಮಂಗಳೂರು `ಸಯ್ಯರೆಗಾದ್ ಬದ್ಕುನಿ, ಬದ್ಕಕೆರೆಗಾದ್ ಸಯ್ಯುನಿ' ನಾಟಕ ಪ್ರದರ್ಶಿಸಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here