Friday 29th, March 2024
canara news

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕ - ಘೋಷಣಾ ಸಮರ್ಪಣೆಯ ಮಹಾ ಸಂಭ್ರಮ

Published On : 01 Aug 2016   |  Reported By : Bernard J Costa


ಸಂತ ಲಾರೆನ್ಸರು ಕ್ರಿ, ಶ. 257 ಅಗೋಸ್ತ್ 10 ರಂದು ರೋಮ್ ಅಧಿಪತಿ ವಲೇರಿಯನ್ ಇವರಿಂದ ಬಹು ಕ್ರೂರವಾದ ಮರಣ ದಂಡನೆಗೆ ಗುರಿಯಾಗಿ, ಜೀವ ತೆತ್ತು ಎಸುವಿಗಾಗಿ ಪ್ರಾಣ ತೆತ್ತು ಧರ್ಮಬಲಿಯಾದರು.

ಸಂತ ಲಾರೆನ್ಸರ ಪುಣ್ಯ ಸ್ಮರಣೆಯ ಹಬ್ಬವನ್ನು ಆಚರಣೆಯ ಮೊದಲು 9 ದಿವಸಗಳ ನೊವೆನಾ (ಆರಾಧನ ಪ್ರಕ್ರಿಯೆ ನೆಡೆಯುತ್ತಿದೆ0 ಅದು ಅಗೋಸ್ತ ಒಂದರಂದು ಆರಂಭವಾಗುವುದು, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಯಾಜಕರ ಸಮಿತಿಯೊಂದಿಗೆ ಸಮಾಲೋಚನೆ ಮಾಡಿ ಈ ಸಾಂಭ್ರಾಮಿಕ ಘೋಷಣಾ ಮತ್ತು ಸಮರ್ಪಣಕ್ಕೆ ಇದೇ ದಿನ ಸೂಕ್ತವೆಂದು ಆರಿಸಿದರು.ಅದರಂತೆ ಸಂತ ಲಾರೆನ್ಸರ ನೊವೆನಾ ನಡೆಯಿತು.

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ಸಾಂಭ್ರಮಿಕ ಘೋಷಣಾ ಮತ್ತು ಸಮರ್ಪಣೆಯ ಅಂಗವಾಗಿ ಈಗ ಮಹಾಬಲಿದಾವನ್ನು ಅರ್ಪಿಸುವ ಕಾರ್ಯವು ನಡೆಯಿತು

ಈ ಮಾಹಾ ಬಲಿಪೂಜೆಯು ನೇತ್ರತ್ವವನ್ನು ಮುಂಬಯಿನ ಆರ್ಚ್ ಬಿಷಪ್, ಚಿ.ಸಿ.ಬಿ.ಐ. ಅಧ್ಯಕ್ಷ ಅ|ವ|ಕಾರ್ಡಿನಲ್ ಒಸ್ವಲ್ಡ್ ಗ್ರಾಸಿಯಸ್ ವಹಿಸಿಕೊಂಡಿದ್ದಾರೆ. ಜೊತೆಗೆ ತಿರುವನಂತಪುರಂನ ಸಿರೊ ಮಲಬಾರ್ ಕೆಥೊಲಿಕ್ ಸಭೆಯ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಬಸೇಲಿಯೊಸ್ ಕ್ಲಿಮಿಸ್, ಎರ್ನಾಕುಳಂ ನ ಸಿರೋ ಮಲಬಾರ್ ಕೆಥೋಲಿಕ್ ಸಭೆಯ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಮಾರ್ ಜಾರ್ಜ್ ಅಲಂಚೇರಿ, , ಬೆಂಗ್ಳೂರಿನ ಬಿಷಪ್ ಆರ್ಚ್ ಬಿಷಪ್ ರೆ|ಡಾ|ಬರ್ನಾಡ್ ಮೊರಾಸ್ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ರೆ|ಡಾ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಮಂಗ್ಳೂರಿನ ಬಿಷಪ್ ರೆ|ಡಾ|ಅಲೋಶಿಯಸ್ ಪಾವ್ಲ್ ಡಿಸೋಜಾ ಮತ್ತು ದೇಶದ ನಾನಾ ಕಡೆಗಳಿಂದ ಆರ್ಚ್ ಬಿಷಪ್,ಬಿಷಪ್ ಮತ್ತು 300 ಕ್ಕೂ ಅಧಿಕ ಧರ್ಮಗುರುಗಳು ಮಹಾಬಲಿದಾನಲ್ಲಿ ಪಾಲುಗೊಂಡಿದ್ದರು.

 

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ಸಾಂಭ್ರಮಿಕ ಘೋಷಣಾ ಮತ್ತು ಸಮರ್ಪಣೆಯ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಿತು.

ಮುಂಬಯಿನ ಆರ್ಚ್ ಬಿಷಪ್, ಚಿ.ಸಿ.ಬಿ.ಐ. ಅಧ್ಯಕ್ಷ ಅ|ವ|ಕಾರ್ಡಿನಲ್ ಒಸ್ವಲ್ಡ್ ಗ್ರಾಸಿಯಸ್, ತಿರುವನಂತಪುರಂ ನ ಸಿರೊ ಮಲಬಾರ್ ಕೆಥೊಲಿಕ್ ಸಭೆಯ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಬಸೇಲಿಯೊಸ್ ಕ್ಲಿಮಿಸ್, ಎರ್ನಾಕುಳಂ ನ ಸಿರೋ ಮಲಬಾರ್ ಕೆಥೋಲಿಕ್ ಸಭೆಯ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಮಾರ್ ಜಾರ್ಜ್ ಅಲಂಚೇರಿ, ರಾಂಚಿಯ ಆರ್ಚ್ ಬಿಷಪ್ ಕಾರ್ಡಿನಲ್ ಟೆಲೆಸ್ಪೋರ್ ಟೊಪೆÇ, ಬೆಂಗ್ಳೂರಿನ ಬಿಷಪ್ ಆರ್ಚ್ ಬಿಷಪ್ ರೆ|ಡಾ|ಬರ್ನಾಡ್ ಮೊರಾಸ್, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ರೆ|ಡಾ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಮಂಗ್ಳೂರಿನ ಬಿಷಪ್ ರೆ|ಡಾ|ಅಲೋಶಿಯಸ್ ಪಾವ್ಲ್ ಡಿಸೋಜಾ ಇವರುಗಳು ಇದ್ದರು.

 

ಅಲ್ಲದೆ ರಾಜ್ಯ ಸರಕಾರದ ಕ್ರೀಡಾ - ಯುವಜನ ಸಬಲೀಕರಣ ಮತ್ತು ಮೀನುಗಾರಿಕಾ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವರಾದ ಮಾನ್ಯ ಪ್ರಮೋದ್ ಮಧ್ವರಾಜ್,  ಕಾರ್ಕಳ ಶಾಸಕ ಸುನೀಲ್ ಕುಮಾರ್,   ಕಾರ್ಕಳದ ಮಾಜಿ ಶಾಸಕ ಗೋಪಾಲ್ ಭಂಡಾರಿ ಹಾಗೂ ಇನ್ನಿತರ ಗಣ್ಯರು ಪಾಲುಗೊಂಡಿದ್ದರು

ಅದರ ಜೊತೆ ದೇಶದ ವಿವಿದ ಕಡೆಗಳಿಂದ ಬಂದ ಹಲವಾರು ವಿವಿಧ ಧರ್ಮಾಧ್ಯಕ್ಷರು, ಧರ್ಮಗುರುಗಳು ಪಾಲುಗೊಂಡಿದ್ದರು

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here