Friday 29th, March 2024
canara news

ದಬಕ್ ದಬಾ ಐಸಾ-ಆಗಸ್ಟ್ 5ಕ್ಕೆ ಕರಾವಳಿಯಾದ್ಯಂತ ತೆರೆಗೆ

Published On : 02 Aug 2016   |  Reported By : Rons Bantwal


ಮಂಗಳೂರು,ಆ.5: ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ, ನಿರ್ದೇಶನದಲ್ಲಿ ತಯಾರಾದÀ `ದಬಕ್ ದಬಾ ಐಸಾ' ತುಳು ಚಲನ ಚಿತ್ರ ಆಗಸ್ಟ್ 5ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ ತೆರೆಕಾಣಲಿದೆ. ಮಂಗಳೂರಿನಲ್ಲಿ ಸುಚಿತ್ರ, ಬಿಗ್‍ಸಿನೆಮಾಸ್,ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಬಿ.ಸಿ.ರೋಡ್‍ನಲ್ಲಿ ನಕ್ಷತ್ರ ಮೂಡಬಿದ್ರೆಯಲ್ಲಿ ಅಮರಶ್ರೀ ಚಿತ್ರಮಂದಿರದಲ್ಲಿ `ದಬಕ್ ದಬಾ ಐಸಾ' ತೆರೆಕಾಣಲಿದೆ.

ಶಶಿರಾಜ್ ಕಾವೂರು ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ: ಉತ್ಪಲ್ ನಯನಾರ್, ಸಂಗೀತ: ರಾಜೇಶ್ ಎಂ.ಮಂಗಳೂರು, ಕಲೆ: ತಮ್ಮ ಲಕ್ಷ್ಮಣ್, ಚಿತ್ರದಲ್ಲಿ ಒಟ್ಟು 4 ಹಾಡು ಇದ್ದು ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ ಕಾವೂರು, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ. ಜಯಕಿರಣ ಫಿಲಂಸ್‍ನಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವು ತನ್ನ ಹಿರಿಯ ಸೋದರ ಚಾಲಿಪೆÇೀಲಿಲು ಅನ್ನು ಹಿಂದಿಕ್ಕುವ ರೀತಿಯಲ್ಲಿ ಮೂಡಿ ಬಂದಿದೆ. ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ದೇಶನವಿರುವ `ದಬಕ್ ದಬಾ ಐಸಾ'ವು ಸಂಪೂರ್ಣ ಹಾಸ್ಯಮಯ ಹಾಗೂ ಉತ್ತಮ ಸಾಮಾಜಿಕ ಸಂದೇಶವಿರುವ ಚಿತ್ರವಾಗಿದ್ದು, ಕುಟುಂಬ ಸಮೇತ ವೀಕ್ಷಿಸುವಂಥ ಸಿನಿಮಾ ಆಗಿದೆ.

ತುಳು ಚಿತ್ರರಂಗದಲ್ಲೇ 511 ದಿನಗಳ ಪ್ರದರ್ಶನ ಕಾಣುವ ಮೂಲಕ ಒಂದು ಅದ್ಭುತ ದಾಖಲೆ ಬರೆದಿರುವ `ಚಾಲಿಪೆÇೀಲಿಲು' ತಂಡದ ಹೆಚ್ಚಿನೆಲ್ಲ ಕಲಾವಿದರು ಈ ಚಿತ್ರದಲ್ಲೂ ಇದ್ದಾರೆ. ಉತ್ಪಲ್ ನಾಯನಾರ್ ಅವರ ಕೆಮರಾ ಕೈಚಳಕ `ದಬಕ್ ದಬಾ ಐಸಾ'ದಲ್ಲೂ ಮುಂದುವರಿದಿದೆ. ಆದ್ದರಿಂದ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ. ಈ ಚಿತ್ರದ ಹಾಡುಗಳ ದೃಶ್ಯಗಳನ್ನು ಆಕರ್ಷಕವಾಗಿ ಸೆರೆಹಿಡಿಯಲಾಗಿದೆ. ಈ ಪೈಕಿ ಹಾರ್ಟ್‍ದ ಬಸ್ ಮೋಕೆಡ್ ರಶ್, ಕ್ಷಣ ಕ್ಷಣ ಮತ್ತು ದಬಕ್ ದಬಾ ಹಾಡುಗಳು ಈಗಾಗÀಲೇ ಎಲ್ಲರ ಬಾಯಲ್ಲೂ ಗುನುಗುಟ್ಟಿತ್ತಿವೆ.

`ಚಾಲಿಪೆÇೀಲಿಲು' ತಂಡದಿಂದ ಹೊರ ಬರುತ್ತಿರುವ `ದಬಕ್ ದಬಾ ಐಸಾ'ವು ಅದನ್ನು ಮೀರಿಸುವಂಥ ಸಿನಿಮಾ ಆಗಿರಲಿದೆ ಎಂಬ ವಿಶ್ವಾಸವೂ ಪ್ರೇಕ್ಷಕರಲ್ಲಿದೆ. ಅದನ್ನು ಚಿತ್ರತಂಡವೂ ಅರಿತಿದ್ದು, ಅವೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ಸಿನಿಮಾ ತಯಾರಿಸಲಾಗಿದೆ. ಸುಮಾರು 2.10 ತಾಸು ಪ್ರೇಕ್ಷಕರಿಗೆ ಸಖತ್ ಮನರಂಜ ನೆಯನ್ನು ದಬಕ್ ದಬಾ ಐಸಾ ನೀಡಲಿದೆ. `ಚಾಲಿಪೆÇೀಲಿಲು' ತುಳು ಚಲನ ಚಿತ್ರದ ಬಳಿಕ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ ಜತೆಯಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಶೀತಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಡಾ| ಹಂಸರಾಜ್ ಆಳ್ವ, ಮತ್ತು ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿü ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನುಳಿದಂತೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಸುರೇಂದ್ರ ಬಂಟ್ವಾಳ, ಗಿರೀಶ್ ಶೆಟ್ಟಿ ಕಟೀಲು, ಸುಧೀರ್ ರಾಜ್ ಉರ್ವಾ, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಪ್ರದೀಪ್ ಆಳ್ವ ಕದ್ರಿ, ರವಿಸುರತ್ಕಲ್, ಶೋಭಾ ಶಕ್ತಿನಗರ, ಸುಜಾತ ಶಕ್ತಿನಗರ, ಪ್ರಶಾಂತ್ ಕೊಂಚಾಡಿ, ಸದಾಶಿವದಾಸ್, ಮೋಹನ್ ಕೊಪ್ಪಲ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮನೋಹರ್ ಶೆಟ್ಟಿ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಚೇತಕ್ ಪೂಜಾರಿ, ವಿನೋದ್ ಎಕ್ಕೂರು, ಸೋಮು ಜೋಗಟ್ಟೆ, ಚಂದ್ರಹಾಸ ಕದ್ರಿ, ಪಿ.ಬಿ ಹರೀಶ್ ರೈ, ನರೇಶ್ ಕುಮಾರ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಸುನೀಲ್ ಕೃಷ್ಣಾಪುರ, ಪ್ರವೀಣ್ ನೀರ್‍ಮಾರ್ಗ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ದಿತೇಶ್ ಪೂಜಾರಿ ಕುಂಜತ್ತ್ ಬೈಲ್, ವಿನಯ ಕೃಷ್ಣ, ಬೃಜೇಶ್ ಗರೋಡಿ, ರಾಜೇಶ್ ಶೆಟ್ಟಿ ಗಿರೀಶ್ ಮಳಲಿ ಮೊದಲಾದವರು ಚಿತ್ರದಲ್ಲಿದ್ದಾರೆ. ಮಧು ಸುರತ್ಕಲ್ ತಾಂತ್ರಿಕ ನಿರ್ದೇಶಕರಾಗಿ, ಶಶಿರಾಜ್ ಕಾವೂರು ಕ್ರಿಯೇಟಿವ್ ನಿರ್ದೇಶಕರಾಗಿ, ರಾಮ್‍ದಾಸ್ ಸಸಿಹಿತ್ಲು, ಕಿಶೋರ್ ಮೂಡಬಿದ್ರೆ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.

ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ತಯಾರಾದ `ದಬಕ್ ದಬಾ ಐಸಾ' ಚಿತ್ರ 21 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಶಕ್ತಿನಗರದಲ್ಲಿ ಚಿತ್ರೀಕರಣ ನಡೆದಿದೆ. ದಬಕ್ ದಬಾ ಐಸಾ ಚಿತ್ರ ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here