Thursday 28th, March 2024
canara news

ಸಂತ ಲಾರೆನ್ಸ್ ಬಾಸಿಲಿಕಾದಿಂದ ಪ್ರಥಮ ಶ್ರಂದಾಜಲಿಯ ಭಾಗ್ಯ ಪಡೆದ ಸಿದ್ದು ಪುತ್ರ ರಾಕೇಶ್

Published On : 03 Aug 2016   |  Reported By : Bernard J Costa


ಕುಂದಾಪುರ,ಅ.3: ಪವಾಡ ಪುರುಷ ಸಂತ ಲಾರೆನ್ಸ್‍ಗೆ ಸಮರ್ಪಿಸಲ್ಪಟ್ಟ ಕಾರ್ಕಳ ಆತ್ತುರು ದೇವಾಲಯಕ್ಕೆ ವಿಶ್ವ ಮಾನ್ಯತೆಯ ಮೈನರ್ ಬಾಸಿಲಿಕಾದ ಪದವಿ ಸಿಕ್ಕಿದ, ಬಹು ವಿರಳ, ಅಪರೂಪದ ಆದರ ಘೋಷಣೆ ಮತ್ತು ಸಮರ್ಪಣದ ಮಹಾ ದೈವಿಕ ಕಾರ್ಯಕ್ರಮದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ಅವರ ನಿಧನಕ್ಕೆ, ಬಹು ಅಪರೂಪದ ಶ್ರಂದಾಜಲಿಯನ್ನು ಅರ್ಪಿಸಲಾಯಿತು.

 

ಸಿದ್ದು ಪುತ್ರ ರಾಕೇಶ ಅಕಾಲಿಕಾವಾಗಿ ಇಹ ಲೋಕವನ್ನು ತ್ಯಜಿಸಿದರು, ಅವರ ಅಂತ್ಯ ಕ್ರಿಯೆ ಕಾರ್ಕಳ ಅತ್ತೂರು ಇಗರ್ಜಿಯನ್ನು ಮೈನರ್ ಬಾಸಿಲಿಕಾ ಎಂದು ಘೋಷಿಸುವ ಮಹಾ ಸುದಿನವಾಗಿತ್ತು. ಮನುಷ್ಯ ಈ ಲೋಕದಲ್ಲಿ ಹುಟ್ಟಿದರೆ ಒಂದಲ್ಲ ಒಂದು ದಿವಸ ಸಾವು ನಿಶ್ಚಿತ, ಆದರೆ ಆ ಸಾವು ಪಡೆದ ಮೇಲೆ ಸಿಗುವ ಗೌರವ, ಕಾಳಜಿ, ಸಂತಾಪದ ಭಾಗ್ಯ ಯಾವ ರೀತಿ ಸಿಗುತ್ತದೆ ಎಂಬುದೊಂದು ಮಹತ್ವ ಆಗಿದೆಯಂತು ಹೇಳಬಹುದು.

ಅಂದು ಸುಮಾರು 16 ಸಾವಿರ ಜನ ಜಾತಿ ಮತ ಭೇದವಿಲ್ಲದೆ ನೆರೆದಿದ್ದರು, ಅದಲ್ಲದೆ, ಕೆಥೋಲಿಕ್ ಧರ್ಮದ ದೆಶಾದ್ಯಾಂತ ಅತ್ಯುನ್ನದ ಪದವಿಯ ಧರ್ಮ ಶ್ರೇಸ್ಠರು ಸೇರಿದ್ದರು, ಭಾರತ ದೇಶದ ಮೂರು ಕಾರ್ಡಿನಲ್‍ಗಳು, ಓಸ್ವಲ್ಡ್ ಗ್ರೇಶಿಯಸ್, ಮುಂಬಯಿ. ಬಸೆಲಿಯೋಸ್ ಕ್ಲೀಮಿಸ್, ತಿರುವನಂತಪುರಂ. ಜಾರ್ಜ್ ಅಲಂಚೇರಿ, ಎರ್ನಾಕುಳಮ್. ಅರ್ಚ್ ಬಿಷಪ್‍ಗಳಾದ ಬರ್ನಾಡ್ ಮೊರಾಸ್, ಬೆಂಗಳೂರು. ಅನಿಲ್ ಕೌಟೊ, ಡೆಲ್ಲಿ. ಫಿಲಿಪ್ ನೇರಿ, ಗೋವಾ. ಬಿಷಪ್ ಉಡುಪಿಯ ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರಿನ ಆಲೋಶಿಯಸ್ ಪಾವ್ಲ್ ಡಿಸೋಜಾ, ಮತ್ತು ಸುಮಾರು 25 ಬಿಶಪರು (ಧರ್ಮಾಧ್ಯಕ್ಷರು) ಸುಮಾರು 350 ಕ್ಕೂ ಅಧಿಕ ಧರ್ಮಗುರುಗಳು, ರಾಜ್ಯ ಸರಕಾರದ ಕ್ರೀಡಾ - ಯುವಜನ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವರಾದ ಮಾನ್ಯ ಪ್ರಮೋದ್ ಮಧ್ವರಾಜ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಗೋಪಾಲ್ ಭಂಡಾರಿ ನೂರಾರು ಧರ್ಮಭಗಿನಿಯರು, 16 ಸಾವಿರ ಜನರೊಡನೆ ಭಕ್ತಿ ಪೂರ್ವಕವಾಗಿ ರಾಕೇಶ್ ಸಿದ್ದರಾಮಯ್ಯ ಅವರ ಸದ್ಗತಿಗೆ ಮೌನ ಪ್ರಾಥನೆ ಸಲ್ಲಿಸಿ ಶ್ರದಾಂಜಲಿ ಅರ್ಪಿಸಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಹಬ್ಬದ ವೇಳೆ ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ, ಭಕ್ತಿಯಿಂದ ಮುಂಬತ್ತಿಯನ್ನು ಅರ್ಪಿಸಿ, ಉಡುಪಿ ಧರ್ಮಾಧ್ಯಕ್ಷ ಅ|ವ|ಡಾ|ಜೆರಾಲ್ಡ್ ಲೋಬೊ ಇವರಿಂದ ಗೌರವ, ಸನ್ಮಾನ ಸ್ವೀಕರಿಸಿದ್ದು ನೆನಪಿಗೆ ಬರುತ್ತದೆ, ಸಿದ್ದರಾಮಯ್ಯ ಪುತ್ರ ರಾಕೇಶ್‍ಗೆ ಇಂತಹ ಸಾವಿರಾರು ಜನರಿಂದ ಮತ್ತು ಮಹಾಸ್ವಾಮಿಗಳಿಂದ, ಪವಾಡಮಮಯಾವಾದ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ಪುಣ್ಯ ಕ್ಷೇತ್ರದಲ್ಲಿ ಈ ರೀತಿಯಲ್ಲಿ ಸಿಕ್ಕಿದ ಒಂದು ಶ್ರದಾಂಜಲಿ ಭಾಗ್ಯ ಇನ್ಯಾರಿಗೂ ಸಿಗದ ಭಾಗ್ಯವೆಂದೆ ಅಭಿಪ್ರಾಯವಾಗಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here