Friday 19th, April 2024
canara news

ಜವಾಬ್ದಾರಿ ಅರಿವಿನಿಂದ ದುಷ್ಕøತ್ಯಗಳ ತಡೆಸಾಧ್ಯ : ಡಿವೈಎಸ್‍ಪಿ ರವೀಶ್

Published On : 03 Aug 2016   |  Reported By : Rons Bantwal


ಬಂಟ್ವಾಳ, ಆ.03: ನಮ್ಮ ನಡೆ ನುಡಿಯ ಜೊತೆ ಸಾರ್ವಜನಿಕ ಜೀವನದಲ್ಲಿ ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕøತ್ಯಗಳು ನಡೆಯುವುದಿಲ್ಲ ಎಂದು ಬಂಟ್ವಾಳ ಡಿವೈಎಸ್‍ಪಿ ರವೀಶ್ ಹೇಳಿದರು.

ಬಂಟ್ವಾಳ ನಗರ ಠಾಣೆಯ ವತಿಯಿಂದ ಮೊಡಂಕಾಪು ಇನ್‍ಫೆಂಟ್ ಜೀಸಸ್ ಚರ್ಚ್ ಹಾಲ್‍ನಲ್ಲಿ ನಡೆದ ಮಕ್ಕಳ ಶೋಷಣೆ, ಲೈಂಗಿಕ ಶೋಷಣೆ ಮತ್ತು ಪೋಕ್ಸೊ ಕಾರ್ಯಗಾರ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ರವೀಶ್ ಮಾತನಾಡಿದರು.

ಮನುಷ್ಯರಿಗೆ ಆಸೆ ಅತಿಯಾದಂತೆ ಕೆಟ್ಟ ಚmಗಳಿಗೆ ದಾಸರಾಗುವುದು ಹೆಚ್ಚಾಗುತ್ತದೆ. ಹಾಗಾಗಿ ಮನುಷ್ಯ ಆಸೆಗಳನ್ನು ಇತಿಮಿತಿಯೊಳಗೆ ಇಟ್ಟುಕೊಂಡು ಬದುಕಬೇಕು. ಎಲ್ಲಾ ಮಕ್ಕಳನ್ನು ನಮ್ಮ ಮಕ್ಕಳಂತೆ ಭಾವಿಸಿ , ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಜೊತೆ ನಮ್ಮೆಲ್ಲರ ಪಾತ್ರ ಹೆಚ್ಚಿದೆ ಅದನ್ನು ಅರಿತುಕೊಂಡು ಮುನ್ನಡೆಯಿರಿ ಎಂದು ಹೇಳಿದರು.

ವೇದಿಕೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ , ಮೊಡಂಕಾಪು ಚರ್ಚ್‍ನ ಸಹಾಯಕ ಗುರು ಫಾ| ಕಿರಣ್ ಪಿಂಟೋ, ವೆಲೆರೋಡ್ ನಿರ್ದೇಶಕ ಸಂಪನ್ಮೂಲ ವ್ಯಕ್ತಿ ರೆನ್ನಿ ಡಿ'ಸೋಜ, ಬಂಟ್ವಾಳ ನಗರ ಠಾಣಾ ಎಸ್‍ಐ ನಂದಕುಮಾರ್, ಗ್ರಾಮಾಂತರ ಠಾಣಾ ಎಸ್‍ಐ ರಕ್ಷಿತ್ ಗೌಡ ಉಪಸ್ಥಿತರಿದ್ದರು.

ಡಿಸಿಐಬಿ ಇನ್ಸ್‍ಪೆಕ್ಟರ್ ಅಮಾನುಲ್ಲಾ ಖಾನ್ ಸ್ವಾಗತಿಸಿದರು. ಗುಪ್ತಚರ ಇಲಾಖೆಯ ಸಿಬ್ಬಂದಿ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಟ್ರಾಫಿಕ್ ಎಸ್‍ಐ ಚಂದ್ರಶೇಖರ್ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here