Thursday 25th, April 2024
canara news

ದೋಣಿ ಮಗುಚಿ ಓರ್ವ ಸಾವು

Published On : 07 Aug 2016   |  Reported By : Canaranews Network


ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಕೋಟೆಪುರ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ದೋಣಿ ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದು, ಓರ್ವ ಮೃತಪಟ್ಟಿದ್ದು, ಇನ್ನೋರ್ವ ಸಮುದ್ರಪಾಲಾದರೆ, ಇಬ್ಬರನ್ನು ರಕ್ಷಿಸಲಾಗಿದೆ.ಉಳ್ಳಾಲ ಕೋಟೆಪುರ ನಿವಾಸಿ ಫಯಾಝ್ (39) ಮೃತಪಟ್ಟವರು. ತಮಿಳುನಾಡು ಮೂಲದ ಚಂದ್ರನ್‌ ಸಮುದ್ರದಲ್ಲಿ ನಾಪತ್ತೆಯಾವರು.

ತಮಿಳುನಾಡು ಮೂಲದ ಇನ್ನಿಬ್ಬರು ಮೀನುಗಾರರಾದ ಮೆನೆಕ್ಸ್‌ ಮತ್ತು ಕುಮಾರನ್‌ ಅವರನ್ನು ರಕ್ಷಿಸಲಾಗಿದೆ. ಚಂದನ್‌ಗಾಗಿ ಹುಡುಕಾಟ ಮುಂದುವರಿದಿದೆ.ಮಂಗಳೂರಿನ ಹೊಗೆ ಬಝಾರ್‌ ನಿವಾಸಿ ಅನ್ನು ಅವರಿಗೆ ಸೇರಿದ "ಸೀತು ಸಾವಿತ್ರಿ' ಮೀನುಗಾರಿಗಾ ದೋಣಿಯಲ್ಲಿ ನತದೃಷ್ಟ ಚಂದ್ರನ್‌ ಸೇರಿದಂತೆ ಮೂವರು ಮಲ್ಪೆಯಿಂದ ಮೂರು ದಿನಗಳ ಹಿಂದೆ ಗಿಲೆ°ಟ್‌ ದೋಣಿ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ವಾಪಾಸ್ಸಾಗುತ್ತಿದ್ದಾಗ ಕೋಟೆಪುರ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿದ್ದು,

ಈ ಸಂದರ್ಭದಲ್ಲಿ ಸ್ಥಳೀಯರುಮೀನುಗಾರರನ್ನು ರಕ್ಷಿಸಲು ಯತ್ನಿಸಿದರೆನ್ನಲಾಗಿದೆ.ನೆರವಿಗೆ ಬಂದ ಸಂಘಟನೆ ಸದಸ್ಯರು: ದೋಣಿ ಮಗುಚಿದ ಸುದ್ಧಿ ಕೇಳುತ್ತಿದ್ದಂತೆ ಕೋಟೆಪುರ ಸೇವಾದಳ ಈಜುಗಾರರ ಸಂಘದ 30ಕ್ಕೂ ಹೆಚ್ಚು ಸದಸ್ಯರು ಸಮುದ್ರ ತಟಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದರು. ಹಗ್ಗ, ಟಯರ್‌ ಟ್ಯೂಬ್‌, ಜಾಕೆಟ್‌ ಸೇರಿದಂತೆ ರಕ್ಷಣಾ ಕಾರ್ಯಕ್ಕೆ ಮುಂದಾದರು.ಜೀವರಕ್ಷಕನ ದುರಂತ ಅಂತ್ಯ: ದುರಂತ ಸಂಭವಿಸುತ್ತಿದ್ದಂತೆ ಜೀವ ರಕ್ಷಕ ಫಯಾಝ್ ಸಮುದ್ರಕ್ಕೆ ಇಳಿದು ಮೂವರನ್ನು ರಕ್ಷಿಸಲು ಮುಂದಾಗಿದ್ದು, ದುರಂತ ನಡೆದ ಸ್ಥಳಕ್ಕೆ ಈಜುಕೊಂಡು ತೆರಳಿದರು. ಈ ಸಂದರ್ಭದಲ್ಲಿ ಮೆನೆಕ್ಸ್‌ನನ್ನು ರಕ್ಷಿಸಿ ಸಮುದ್ರ ತಟಕ್ಕೆ ಮುಟ್ಟಿಸಿ ಇನ್ನೋರ್ವ ಮೀನುಗಾರ ಚಂದನ್‌ರನ್ನು ರಕ್ಷಿಸಲು ಮುಂದಾಗಿದ್ದು ಈ ಸಂದರ್ಭದಲ್ಲಿ ಚಂದ್ರನ್‌ ಮುಳುಗಿ ಹೋಗಿದ್ದರು ಎನ್ನಲಾಗಿದೆ.

ಸುಮಾರು ಅರ್ಧ ಗಂಟೆ ಸಮುದ್ರ ದಲ್ಲಿ ಈಜಾಡಿದ ಫಯಾಝ್ ಅವರು ಸಮುದ್ರ ತಟ ತಲುಪುತ್ತಿದ್ದಂತೆ ಬಲವಾದ ಅಲೆಗೆ ಸಿಲುಕಿ ತಲೆ ಬಂಡೆ ಕಲ್ಲಿಗೆ ಬಡಿದು ಗಂಭೀರ ಗಾಯಗೊಂಡರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತ ಪಟ್ಟರು ಎನ್ನಲಾಗಿದೆ.ಸುಮಾರು ಎರಡು ಗಂಟೆಗಳ ಕಾಲ ಸಮುದ್ರದಲ್ಲಿ ವೈಮಾನಿಕ ಕಾರ್ಯಾಚರಣೆ ನಡೆಸಿತು. ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಇನ್ಸ್‌ ಪೆಕ್ಟರ್‌ ಗಂಗೀ ರೆಡ್ಡಿ ಅವರು ಭೇಟಿ ನೀಡಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here