Wednesday 24th, April 2024
canara news

ಜೆರಿಮೆರಿಯ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನಾಗರಪಂಚಮಿ

Published On : 07 Aug 2016   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.07: ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಿಸುತ್ತಿದ್ದು, ಇಂದಿಲ್ಲಿ ರವಿವಾರ ಬೆಳಿಗ್ಗೆ ಉಮಾಮಹೇಶ್ವರಿ ಸಾಮೂಹಿಕ ಅಶ್ಲೇಷ ಬಲಿ, ನಾಗತಂಬಿಲ, ನಾಗತನು, ಸೀಯಾಳ, ಪಂಚಾಮೃತ ಹಾಗೂ ಕ್ಷೀರಾಭಿಷೇಕ, ಮಹಾಪೂಜೆ ನೆರವೇರಿಸ ಲಾಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಕೆ ಶೀನ ಪೂಜಾರಿ ಮತ್ತು ಲಲಿತಾ ಶೀನ ದಂಪತಿ ಮುಂದಾಳುತ್ವದ ಲ್ಲಿ ದೇವಸ್ಥಾನದ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನೆರವೇರಿಸಲಾದ ನಾಗರ ಪಂಚಮಿಯಲ್ಲಿ ನಗರದಾದ್ಯಂತ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿನ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಉಮಾ ಮಹೇಶ್ವರೀ ದೇವಿಗೆ ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ಅವರು ಪೂಜಾಧಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ದೇವಸ್ಥಾನದ ಆರ್ಚಕ ರಾಜೇಶ್ ಭಟ್ ಆರತಿಗೈದÀು ತೀರ್ಥಪ್ರಸಾದ ವಿತರಿಸಿ ಭಕ್ತಾಭಿಮಾನಿಗಳನ್ನು ಹರಸಿದರು. ನಾಗರಾಜ ಐತಾಳ್, ಎಸ್.ಎನ್ ಭಟ್, ರಂಗಣ್ಣ ಭಟ್ ಮತ್ತಿತರ ಪುರೋಹಿತರು ಪೂಜೆಗಳಲ್ಲಿ ಸಹಕರಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಮತಿ ಸರೀತಾ ಶ್ರೀಮತಿ ಸೋನಿಯಾ, ತರುಣ್, ತೋನ್ಸೆ ಸಂಜೀವ ಪೂಜಾರಿ, ರವೀಂದ್ರ ಎ.ಅವಿೂನ್, ಗೀತಾ ಶೆಟ್ಟಿ, ಸರೋಜಿನಿ ಪೂಜಾರಿ, ಶುಭಾ ದೇವಾಡಿಗರಿ, ಪ್ರಕಾಶ್ ರಾವ್, ಸತೀಶ್ ಪೂಜಾರಿ ಸೇರಿದಂತೆ ಹಲವಾರು ಅನೇಕ ಭಕ್ತರು ಸೇವಾಥಿರ್üಗಳಾಗಿ ಸಹಕರಿಸಿದರು. ಮಧ್ಯಾಹ್ನ ಮಹಾಪೂಜೆ, ಮಹಾರತಿ ನೆರವೇರಿಸಿ ಮಹಾ ಅನ್ನಸಂತಾರ್ಪಣೆ, ತೀರ್ಥಪ್ರಸಾದ ನಡೆಸಲ್ಪಟ್ಟಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here