Friday 29th, March 2024
canara news

ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಉಪಾಧ್ಯಕ್ಷ ಸ್ಟೀವನ್ ಡಿ'ಸೋಜಾ

Published On : 08 Aug 2016   |  Reported By : Rons Bantwal


ಮುಂಬಯಿ, ಆ.08: ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಉಪಾಧ್ಯಕ್ಷರಾಗಿ ಸ್ಟೀವನ್ ಡಿ'ಸೋಜಾ ಆಯ್ಕೆ ಆಗಿದ್ದಾರೆ. ಬಂಟ್ವಾಳ ತಾಲೂಕು ಪಾಣೆಮಂಗಳೂರು ಅಲ್ಲಿನ ಮಂಚಿ ಗ್ರಾಮ ಕುಕ್ಕಾಜೆ ದೇರಡ್ಕ ನಿವಾಸಿ ದಿ| ಜೋನ್ ಫಾಡ್ರಿಕ್ ಡಿ'ಸೋಜಾ ಮತ್ತು ಕ್ರಿಸ್ತೀನ್ ಡಿ'ಸೋಜಾ ಅವರ ಸುಪುತ್ರರಾಗಿರುವ ಸ್ಟೀವನ್ ಡಿ'ಸೋಜಾ ಕಳೆದ ಕೆಲವು ವರ್ಷಗಳಿಂದ ಜಿಲ್ಲಾ ಇಂಟಕ್‍ನಲ್ಲಿ ಸಕ್ರೀಯರಾಗಿ ಶ್ರಮಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಇಂಟಕ್‍ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳೂರು ಪಣಂಬೂರು ಅಲ್ಲಿನ ಇಂಟಕ್ ಕಛೇರಿ ಸಭಾಗೃಹದಲ್ಲಿ ಇಂಡಿಯನ್ ನೇಶನಲ್ ಟ್ರೇಡ್ ಯೂನಿಯನ್ ಕಾಂಗ್ರೇಸ್ - ಐಎನ್‍ಟಿಯು (IಓಖಿUಅ-ಇಂಟಕ್) ರಾಜ್ಯ ಗೌರವ ಸಲಹೆಗಾರ ಎನ್.ಎಂ ಅಡ್ಯಂತಾಯ ಅವರ ಮಾರ್ಗದರ್ಶನ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ನಿರ್ದೇಶನ ಮತ್ತು ನೇತೃತ್ವದಲ್ಲಿ ಜರುಗಿದ್ದು ಸಭೆಯಲ್ಲಿ ಜಿಲ್ಲಾ ವಿವಿಧ ತಾಲೂಕು, ಬ್ಲಾಕ್‍ಗಳ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಜಿಲಾಧ್ಯಕ್ಷ ಮನೋಹರ್ ಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿ ಆಯ್ಕೆ ಪ್ರಕ್ರಿಯೆ ನಡೆಸಿದರು. ನೂತನ ಉಪಾಧ್ಯಕ್ಷ ಸ್ಟೀವನ್ ಡಿ'ಸೋಜಾ ಅವರಿಗೆ ರಾಕೇಶ್ ಮಲ್ಲಿ ಮತ್ತು ಮನೋಹರ್ ಶೆಟ್ಟಿ ಆಯ್ಕೆಯ ಪ್ರಮಾಣ ಪತ್ರ ಪ್ರದಾನಿಸಿ ಶುಭಾರೈಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here