Tuesday 23rd, April 2024
canara news

ಚಿಕ್ಕಮಗಳೂರು ಜಿಲ್ಲೆ ಸಂಗಮೇಶ್ವರ ಪೇಟೆಯಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮ

Published On : 08 Aug 2016   |  Reported By : Canaranews Network


ಚಿಕ್ಕಮಗಳೂರು ಜಿಲ್ಲೆಯ ಸಂಗಮೇಶ್ವರ ಪೇಟೆಯ ಉಡುಪಿ ಅದಮಾರು ಶಿಕ್ಷಣ ಟ್ರಸ್ಟ್ ನ ಪೂರ್ಣ ಪ್ರಜ್ಞ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರುಗಳಿಗೆ ಗ್ರಾಹಕ ಹಕ್ಕು, ಕರ್ತವ್ಯಗಳು, 1986 ರಗ್ರಾಹಕ ಹಿತರಕ್ಷಣಾ ಕಾಯಿದೆ, ಜಿಲ್ಲಾಗ್ರಾಹಕ ಪರಿಹಾರ ವೇದಿಕೆಯ ಕಾರ್ಯಗಳು, ಪರಿಹಾರ ಪಡೆಯುವ ವಿಧಾನ ಇತ್ಯಾದಿಗಳ ಸಮಗ್ರ ಪರಿಚಯವನ್ನು ದ.ಕ.ಜಿಲ್ಲಾಗ್ರಾಹಕ ಸಂಘಟನೆಗಳ ಒಕ್ಕೂಟದ ಜತೆ ಕಾರ್ಯದರ್ಶಿಯೂ, ಮಾರುಕಟ್ಟೆ ವ್ಯವಸ್ಥಾಪಕರೂ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಅಧ್ಯಾಪಕ ರಾಯೀ ರಾಜಕುಮಾರ, ಮೂಡುಬಿದಿರೆಯವರು ಮಾಡಿಕೊಟ್ಟರು.



ಗ್ರಾಹಕ ವಿಷಯಗಳಿಗೆ ಸಂಬಂಧಪಟ್ಟು ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶÉ್ನಗಳಿಗೆ ಉದಾಹರಣೆಯುಕ್ತ ಸಮಾಧಾನವನ್ನು ಸೂಚಿಸಿದರು.ಶಾಲಾ ಪ್ರಾಂಶುಪಾಲ ಶ್ರೀ ಮಹಾಲಿಂಗ ಭಟ್, ಕ್ಲಬ್ ನ ನಿರ್ದೇಶಕ ಶ್ರೀ ವಾಲ್ಟರ್ ಡಿ ಸೋಜ, ಹಿರಿಯ ಅಧ್ಯಾಪಕ ಶ್ರೀ ಕೇಶವ ಆಚಾರ್ಯ ವೇದಿಕೆಯಲ್ಲಿ ಹಾಜರಿದ್ದರು.ಕ್ಲಬ್ ನ ಕಾರ್ಯದರ್ಶಿ 10 ನೇ ತರಗತಿಯ ಮಾ| ಲಕ್ಷೀನಾರಾಯಣ ಸ್ವಾಗತಿಸಿದರು, 9 ನೇ ತರಗತಿಯ ಮಾ| ಅಚಿಂತ್ಯ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here