Thursday 25th, April 2024
canara news

ಆ.27: ಉಡುಪಿಯಲ್ಲಿ ಕಥಾಬಿಂದು ಪ್ರಕಾಶನದ 9ನೇ ವಾರ್ಷಿಕೋತ್ಸವ ಕಾದಂಬರಿ ಬಿಡುಗಡೆ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ,ಗೌರವ ಸನ್ಮಾನ ಕಾರ್ಯಕ್ರಮ

Published On : 09 Aug 2016   |  Reported By : Rons Bantwal



ಶಿಮಂತೂರು ಚಂದ್ರಹಾಸ ಸುವರ್ಣ ಅಧ್ಯಕ್ಷತೆ-ಸತೀಶ್ ಬಂಗೇರಾ, ಶಾರದಾ ಅಂಚನ್‍ಗೆ ಚೈತನ್ಯಶ್ರೀ ಪ್ರಶಸ್ತಿ
ಕಡಂದಲೆ ಸುರೇಶ್ ಎಸ್.ಭಂಡಾರಿ ಪಿ.ಕೆ ಶೆಟ್ಟಿ ಅವರಿಗೆ ಸನ್ಮಾನ

ಉಡುಪಿ, ಆ.09: ಮಂಗಳೂರು ಕುಂಜತ್ತಬೈಲ್‍ನ ಕಥಾಬಿಂದು ಪ್ರಕಾಶನದ 9ನೇ ವಾರ್ಷಿಕೋತ್ಸವವು ಬರುವ ಆ.27ನೇ ಶನಿವಾರ ಉಡುಪಿಯ ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಪರ್ಯಾಯ ಶ್ರೀ ಪೇಜಾವರ ಶ್ರೀ ಕೃಷ್ಣ ಮಠದ ರಾಜಾಂಗಣ ಸಭಾಗೃಹದಲ್ಲಿ ಸಂಜೆ 3:00 ಗಂಟೆಗೆ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

   

Chandrahasa Suvarna                   Suresh Bhandary

  

Dr. P.K Shetty                   Satish N. Bangera

Sharada A.Anchana

ಮುಂಬಯಿ ಅಲ್ಲಿನ ಕವಿ, ಸಾಹಿತಿ, ನಾಟಕಗಾರ ಶಿಮಂತೂರು ಚಂದ್ರಹಾಸ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮದ ನಡೆಯಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಪೇಜಾವರ ಕಿರಿಯ ಯತಿಗಳಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿüಯಾಗಿ ಪ್ರದೀಪ್‍ಕುಮಾರ್ ಕಲ್ಕೂರ, ಗೌರವ ಅತಿಥಿüಗಳಾಗಿ ಜಯಶಂಕರ ಬಾಸ್ರೀತ್ತಾಯ, ತಲ್ಲೂರು ಶಿವರಾಮ ಶೆಟ್ಟಿ, ಭುವನಾಭಿರಾಮ, ಸದಾನಂದ ಕಾಮತ್, ನಾಗೇಶ್ ಹೆಗ್ಡೆ, ಕೆ.ಶ್ರೀಪತಿ ಭಟ್, ಎಂ.ಎಲ್ ಸಾಮಗ, ಎಂ.ಜಿ ರಾವ್ ಆಗಮಿಸಲಿದ್ದು, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸನ್ಮಾನಿಸಲಿದ್ದಾರೆ. ಶ್ರೀಗಳು ಪಿ.ವಿ ಪ್ರದೀಪ್ ಕುಮಾರ್ ಅವರ 50ನೇ ಕಾದಂಬರಿ `ಬದುಕುಳಿದವರು' ಬಿಡುಗಡೆ ಗೊಳಿಸಲಿದ್ದಾರೆ.


ಸಮಾರಂಭದಲ್ಲಿ ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಪನ್‍ಬಾಯ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಪಿ.ಕೆ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.

ಅಕ್ಷಯ ಮಾಸಿಕದ ಸತೀಶ್ ಎನ್.ಬಂಗೇರಾ ಮುಂಬಯಿ, ತುಳು-ಕನ್ನಡ ಸಾರಸ್ವತ ಲೋಕದ ಲೇಖಕಿ, ಕವಿ ಶಾರದಾ ಎ.ಅಂಚನ್ ಕಲಂಬೋಲಿ ಸೇರಿದಂತೆ ವಿವಿಧ ಕ್ಷೇತ್ರದ ಒಟ್ಟು ಹದಿನಾಲ್ಕು ಸಾಧಕರಿಗೆ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ, ಒಂಭತ್ತು ಬಾಲ ಪ್ರತಿಭೆಗಳಿಗೆ ಚೈತನ್ಯಶ್ರೀ ಪ್ರತಿಭಾ ಪುರಸ್ಕಾರ, ಐದು ಯುವ ಪ್ರತಿಭೆಗಳಿಗೆ ಚೈತನ್ಯಶ್ರೀ ಯುವ ಪ್ರಶಸ್ತಿ, ಸ್ಮರಣ ಸಂಚಿಕೆ ಬಿಡುಗಡೆ, ಕಾರ್ಯಕ್ರಮ ನಡೆಯಲಿದೆ.

ದಿವಾನರುಗಳಾದ ಕೆ.ವಿ ಕೃಷ್ಣದಾಸ್, ಮುರಳೀಧರ ಭಟ್, ವಸಂತ್‍ಕುಮಾರ್ ಕೊಂಪದವು ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರ ಪುತ್ತೂರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here