Thursday 25th, April 2024
canara news

ಗೋಕುಲವಾಣಿ ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ

Published On : 10 Aug 2016   |  Reported By : Rons Bantwal


ಮುಂಬಯಿ, ಆ.10: ಮಹಾನಗರ ಮುಂಬಯಿಯಿಂದ ಬಿ.ಎಸ್.ಕೆ.ಬಿ ಎಸೋಸಿಯೇಶನ್ ಮುಂಬಯಿ ಪ್ರಕಟಿಸುತ್ತಿರುವ `ಗೋಕುಲವಾಣಿ' ಮಾಸಿಕವು ಡಿಸೆಂಬರ್ 2016ರ ಸಂಚಿಕೆಯನ್ನು ವಾರ್ಷಿಕ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ. ಈ ನಿಮಿತ್ತ ಅಖಿಲ ಭಾರತ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು ಪ್ರಥಮ (ರೂ.7,000/-), ದ್ವಿತೀಯ (ರೂ.5000/-) ಹಾಗೂ ತೃತೀಯ (ರೂ.3,000/-) ಬಹುಮಾನಗಳನ್ನು ಅರ್ಹ ಕತೆಗಳಿಗೆ ನೀಡಲಾಗುತ್ತದೆ. ನಿರ್ಣಾಯಕರು ನಿಶ್ಚಯಿಸಿದಲ್ಲಿ ರೂ.1,000/- ಮೊತ್ತದ ಎರಡು ಪೆÇ್ರೀತ್ಸಾಹಕ ಬಹುಮಾನಗಳನ್ನು ಕೊಡಲಾಗುವುದು.

ಸ್ಪರ್ಧೆಯ ನಿಯಮಗಳು ಹೀಗಿವೆ :
*ಅಪ್ರಕಟಿತ ಸ್ವತಂತ್ರ ಕತೆಗೆ ಮಾತ್ರ ಅವಕಾಶ. ಅನುವಾದಿತ ಕತೆಗಳನ್ನು ಪರಿಗಣಿಸಲಾಗುವುದಿಲ್ಲ. *ಒಬ್ಬರು ಒಂದೇ ಕತೆ ಕಳಿಸಬಹುದು. * ಕತೆಯು ಟೈಪ್ ಮಾಡಿದ 8ರಿಂದ 10 ಪುಟಗಳ ಮಿತಿಯಲ್ಲಿ ಹಾಗೂ ಸ್ಪಷ್ಟ ಕೈಬರಹದಲ್ಲಿಯಾದರೆ 10 ರಿಂದ 15 ಪುಟಗಳ ಮಿತಿಯಲ್ಲಿ ಇರಬೇಕು.* ಲೇಖಕ / ಲೇಖಕಿಯರ ಹೆಸರು ಕತೆಯಲ್ಲಿ ಇರಕೂಡದು. ಪ್ರತ್ಯೇಕವಾಗಿ ಕೃತಿಕಾರರ ಹೆಸರು ನಮೂದಿಸಲ್ಪಟ್ಟಿರಬೇಕು. *ಸ್ಪರ್ಧೆಗೆ ಪ್ರವೇಶ ಧನವಿಲ್ಲ. * ಗೋಕುಲವಾಣಿಯ ಸಂಪಾದಕರು ಹಾಗೂ ಬಿ.ಎಸ್.ಕೆ.ಬಿ ಅಸೋಸಿಯೇಶನ್‍ನ ಪದಾಧಿಕಾರಿ ಗಳೊಂದಿಗೆ ಕಥೆಯ ಕುರಿತು ಸಂಪರ್ಕ ಮಾಡಿದಲ್ಲಿ ಕತೆ ಅಸಿಂಧುವಾಗುತ್ತದೆ. ನಿರ್ಣಾಯಕರ ತೀರ್ಪು ಅಂತಿಮ. ಕತೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 15.10.2016. ಕತೆಯನ್ನು ದಯವಿಟ್ಟು ಕೆಳಗಿನ ವಿಳಾಸಕ್ಕೆ (ವಿಳಾಸ ಇಂಗ್ಲಿಷ್‍ನಲ್ಲಿರಲಿ) ಕಳುಹಿಸಿ: Editor: Gokulavani, Kannada Monthly, BSKB Association, Plot No.273, Gokul Marg, Sion (East), Mumbai-400022 •Email: secretary@bskba.com ವಿಜೇತರಿಗೆ ಪತ್ರ ಮುಖೇನ ತಿಳಿಸುವುದಲ್ಲದೆ `ಗೋಕುಲವಾಣಿ' ಹಾಗೂ ಇತರ ಪತ್ರಿಕೆಗಳಲ್ಲಿ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು. ಫಲಿತಾಂಶದ ಕುರಿತು ಯಾವುದೇ ಪತ್ರವ್ಯವಹಾರಕ್ಕೆ ಆಸ್ಪದವಿಲ್ಲ ಎಂದು ಗೋಕುಲವಾಣಿ ಗೌರವ ಸಂಪಾದಕ ಡಾ| ವ್ಯಾಸರಾವ್ ನಿಂಜೂರ್ ಈ ಮೂಲಕ ತಿಳಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here