Thursday 25th, April 2024
canara news

ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಗೌರವಾಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ ಅಹ್ಮದಾಬಾದ್ ನಿಧನ

Published On : 11 Aug 2016   |  Reported By : Rons Bantwal


ಮುಂಬಯಿ, ಆ.11: ಗುಜರಾತ್ ಬಿಲ್ಲವ ಸಂಘ (ರಿ.) ಇದರ ಸ್ಥಾಪಕ ಗೌರವಾಧ್ಯಕ್ಷ, ಅಹ್ಮದಾಬಾದ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ (78.) ಅನಾರೋಗ್ಯದಿಂದ ತನ್ನ ಸ್ವನಿವಾಸದಲ್ಲೇ ಇಂದಿಲ್ಲಿ ಪೂರ್ವಾಹ್ನ ನಿಧನರಾದರು. ಮೂಲತಃ ಕಾರ್ಕಳ ಕೈರೊಟ್ಟು, ಕಲ್ಯ ಬೋಂಟ್ರಾ ಮನೆತನದವರಾಗಿದ್ದ ಭಕ್ತವತ್ಸಲಾ ಅವರು ಪ್ರಸ್ತುತ ಅಹ್ಮದಾಬಾದ್‍ನ ಹಿರಿಯ ಕೈಗಾರಿಕೋದ್ಯಮಿ ಆಗಿದ್ದು ಸದ್ಯ ಮನೆ ಸಂಖ್ಯೆ-7, ಮಾಣಿಕ್‍ಲಾಲ್ ಸೊಸೈಟಿ, ಪಾರ್ಟ್-3, ಸುರ್ಧಾರಾ ಸರ್ಕಲ್ ಸಮೀಪ, ಫಲ್‍ಟೇಜ್, ಅಹ್ಮದಾಬಾದ್ ಗುಜರಾತ್ ಇಲ್ಲಿ ಕುಟುಂಬ ಸಹಿತ ವಾಸವಾಗಿದ್ದರು.

ಮೃತರು ಪತ್ನಿ ಮಾಯಾ ಭಕ್ತವತ್ಸಲಾ, ಪುತ್ರ ವೇಣುಗೋಪಾಲ್ ಬಿ.ಬೋಂಟ್ರಾ, ಸುಪುತ್ರಿ ಡಾ| ಮೀರಾ ಸುಮನ್‍ಲಾಲ್, ಅಳಿಯ ಸುಮನ್‍ಲಾಲ್ ಕೋಡಿಯಾಳ್‍ಬೈಲ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರಾ, ಸ್ಥಾಪಕ ಸಂಚಾಲಕ ಎಸ್.ಕೆ ಹಳೆಯಂಗಡಿ, ಸ್ಥಾಪಕ ಉಪಾಧ್ಯಕ್ಷ ಮೋಹನ್ ಸಿ.ಪೂಜಾರಿ ಮತ್ತು ಪದಾಧಿಕಾರಿಗಳು, ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ಕರ್ನಾಟಕ ರಾಜ್ಯದ ಮಾಜಿ ಸಚಿವ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಹಾಗೂ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವ ಜಾಗೃತಿ ಬಳಗದ ಸ್ಥಾಪಕಾಧ್ಯಕ್ಷ ಸೂರು ಸಿ.ಕರ್ಕೇರ, ಮಾಜಿ ಉಪಾಧ್ಯಕ್ಷ ಕೆ.ಭೋಜರಾಜ್, ಕೃಪಾ ಭೋಜರಾಜ್, ಬಿಲ್ಲವರ ಸಂಘ ನಾಸಿಕ್ ಅಧ್ಯಕ್ಷ ಗಂಗಾಧರ್ ಅಮೀನ್, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಿ.ಆರ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕ ಮಂಡಳಿ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಸುರತ್ಕಲ್ ಜಯರಾಮ ಶೆಟ್ಟಿ, ವಾಸು ಪಿ.ಪೂಜಾರಿ, ಮಧನ್ ಕುಮಾರ್ ಗೌಡ, ಎಂ.ಎಸ್ ರಾವ್ ಅಹ್ಮದಾಬಾದ್, ಸಾಹಿತಿ ಡಾ| ಗಣೇಶ್ ಅವಿೂನ್ ಸಂಕಮಾರ್, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ತೀಯಾ ಸಮಾಜ, ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಚಲನಚಿತ್ರ ನಿರ್ಮಾಪಕ ರಾಜಶೇಖರ್ ಆರ್.ಕೋಟ್ಯಾನ್, ಉದ್ಯಮಿಗಳಾದ ಹರೀಶ್ ಜಿ.ಅವಿೂನ್, ಸುರೇಂದ್ರ ಎ.ಪೂಜಾರಿ, ಬೆಂಗಳೂರು ಬಿಲ್ಲವರ ಸಂಘದ ಅಧ್ಯಕ್ಷ ಎಂ.ವೇದಕುಮಾರ್ ಶೋಭಾ ದಯಾನಂದ್ ಬೋಂಟ್ರಾ, ಹರೀಶ್ ಎಂ.ಪೂಜಾರಿ, ಮನೋಜ್ ಎಂ.ಪೂಜಾರಿ ಅಹ್ಮದಾಬಾದ್, ಮನೋಜ್ ಸಿ.ಪೂಜಾರಿ ಸೂರತ್, ಸೇರಿದಂತೆ ಗುಜರಾತ್ ರಾಜ್ಯದಾದ್ಯಂತ, ದಕ್ಷಿಣ ಕನ್ನಡ, ಉಡುಪಿ ಹಾಗೂ ದೇಶದಾದ್ಯಂತದ ಹಲವಾರು ಬಿಲ್ಲವ ತುಳು ಕನ್ನಡಿಗ ಸಂಸ್ಥೆಗಳ ಮುಖ್ಯಸ್ಥರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಬರುವ ಆದಿತ್ಯವಾರ (ಆ.28) ಗುಜರಾತ್‍ನ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಬೈದಶ್ರೀ ಸಾಂಸ್ಕೃತಿಕ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಗುರು ಜಯಂತಿ ಸಮಾರಂಭದಲ್ಲಿ ಗಣ್ಯಾಧಿಗಣ್ಯರ ಹಸ್ತದಿಂದ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಭಕ್ತವತ್ಸಲಾರ ಆರೋಗ್ಯ ಸ್ಥಿತಿ ಚಿಂತಾಜನಕ ಆಗುತ್ತಿರುವಂತೆಯೇ ಕಾರ್ಯಕ್ರಮ ಗುರು ಜಯಂತಿ ಮುಂದುವರಿಸಲಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ಅಹ್ಮದಾಬಾದ್‍ನ ಫಲ್‍ಟೇಜ್ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಸಂಪರ್ಕ ಸಂಖ್ಯೆ ವೇಣುಗೋಪಾಲ್-09714978899, ಸುಮನ್‍ಲಾಲ್-9601114448)




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here