Friday 19th, April 2024
canara news

ಭಾರತ್ ಬ್ಯಾಂಕ್‍ನ 98ನೇ ಶಾಖೆ ಆ.17ರಂದು ಬೋರಿವಲಿ ಐಸಿ ಕಾಲೋನಿಯಲ್ಲಿ. 99ನೇ ಶಾಖೆ ಆ.18 ರಂದು ಮಾಟುಂಗಾದಲ್ಲಿ ಸೇವಾರಂಭ

Published On : 11 Aug 2016   |  Reported By : Rons Bantwal


ಮುಂಬಯಿ, ಆ.11: ಭಾರತ ರಾಷ್ಟ್ರದ ಸಹಕಾರಿ ರಂಗದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ ಪುರಸ್ಕಾರ ಪಡೆದ ಭಾರತ್ ಕೋ.ಆಪರೇಟಿ ವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 98ನೇ ಶಾಖೆಯು ಇದೇ ಆ.17 ಬುಧವಾರ ಬೆಳಿಗ್ಗೆ ಬೋರಿವಲಿ ಪಶ್ಚಿಮದ ಐಸಿ ಕಾಲೋನಿ ಅಲ್ಲಿನ ಅಮಿ ಜ್ಹರೋಖಾ ಕಟ್ಟಡದ ನೆಲ ಮಹಡಿಯಲ್ಲಿ ಹಾಗೂ 99ನೇ ಶಾಖೆಯನ್ನು ಇದೇ ಆ.18 ಗುರುವಾರ ಬೆಳಿಗ್ಗೆ ಮಾಟುಂಗಾ (ಸೆಂಟ್ರಲ್ ರೈಲ್ವೇ) ಪೂರ್ವದ ಲಕ್ಷ್ಮೀನಾರಾಯಣ ಲೇನ್ ಅಲ್ಲಿನ ಜಮ್ನಾದಾಸ್ ಮೆನ್ಶನ್ ಕಟ್ಟಡಲ್ಲಿ ಶುಭಾರಂಭ ಗೊಳಿಸಲಾಗುವುದು ಎಂದು ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದ್ದಾರೆ.

     

   Jaya C. Suvarna                            Rohini J. Salian                             C. R Mulky

ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ನೂತನ ಶಾಖೆಯನ್ನು ಸೇವಾರ್ಪಣೆ ಮಾಡಲಿದ್ದು, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲಿಯಾನ್ ಬ್ಯಾಂಕ್‍ನ ವಿವಿಧ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆ ಪ್ರಯುಕ್ತ ಮುಂಜಾನೆಯಿಂದ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ದ್ವಾರಪೂಜೆ ಇತ್ಯಾದಿ ಧಾರ್ಮಿಕ ಪೂಜಾಧಿಗಳು ನೆರವೇರಿಸಲಾಗುವುದು ಎಂದು ಬ್ಯಾಂಕ್‍ನ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ (ಉಪ ಪ್ರಧಾನ ಪ್ರಬಂಧÀಕ) ಈ ಮೂಲಕ ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ಬ್ಯಾಂಕ್‍ನ ಸರ್ವ ಗ್ರಾಹಕರು, ಶೇರುದಾರರು, ನೂತನ ಗ್ರಾಹಕರು ಮತ್ತು ಹಿತೈಷಿಗಳು ಆಗಮಿಸಿ ನೂತನ ಎರಡೂ ಶಾಖೆಗಳ ಯಶಸ್ವೀ ಸೇವೆ ಶುಭ ಕೋರುವಂತೆ ಬೋರಿವಲಿ ಶಾಖೆಯ ಮುಖ್ಯಸ್ಥೆ ರೇಖಾ ಎ.ಬಂಗೇರ ಹಾಗೂ ಮಾಟುಂಗಾ ಶಾಖೆಯ ಮುಖ್ಯಸ್ಥ ಅನೀಲ್ ವಿ.ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here