Thursday 18th, April 2024
canara news

ಕುಂದಾಪುರ - ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಪ್ರತಿಭಾಶಾಲಿಗಳಿಗೆ ಪುರಸ್ಕಾರ

Published On : 15 Aug 2016   |  Reported By : Bernard J Costa


ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದಿಂದ ಕುಂದಾಪುರ ಹೋಲಿ ರೋಜರಿ ಮಾತೆಯ ಇಗರ್ಜಿಯ ಮೈದಾನದಲ್ಲಿ, 70 ನೇಯ ಸ್ವಾತಂತ್ರ್ಯತ್ಸೊವನ್ನು ಆಚರಿಸಿ ಪ್ರತಿಭಾಶಾಲಿ ವಿಧ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ನಿವ್ರತ್ತ ಶಿಕ್ಷಕ ಜೋನ್ ಡಿಸೋಜಾ ಕೆಡೇಟಗಳಿಂದ ಗೌರವ ಸ್ವೀಕರಿಸಿ ಧ್ವಜಾ ರೋಹಣ ಮಾಡಿ ಸಂದೇಶ ನೀಡಿ, ಕಥೊಲಿಕ ಸಭಾ ಎರ್ಪಡಿಸಿದ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಚರ್ಚಿನ ಸಹಾಯಕ ಧರ್ಮಗುರು ವ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಹತ್ತನೇ ತರಗತಿಯಿಂದ ಪದವಿ ಶಿಕ್ಷಣ ಕ್ಷೇತ್ರದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಾಸ್ಕಾರ ನೀಡಿ ಗೌರವಿಸಿದರು.

ಘಟಕದ ಅಧ್ಯಕ್ಷ ವಿಲ್ಸನ್ ಆಲ್ಮೇಡಾ ಸ್ವಾಗತ ಕೋರಿದರು. ಕಾರ್ಯದರ್ಶಿ ಶೈಲಾ ಆಲ್ಮೇಡಾ ವಂದಿಸಿದರು. ಇಗರ್ಜಿಯ ಗಾಯನ ಮಂಡಳಿ ರಾಸ್ಠ್ರ ಭಕ್ತಿ ಗೀತೆಗಳನ್ನು ಹಾಡಿತು. ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಿನ್ಸಿಪಾಲ್ ಧರ್ಮಗುರು ವ|ಪ್ರವೀಣ್ ಎ ಮಾರ್ಟಿಸ್, ಪಾಲನ ಮಂಡಳಿ ಅಧ್ಯಕ್ಷ ಜಾನ್ಸನ್ ಆಲ್ಮೇಡಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಸಮಾರಂಭದಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀ ವಿಲ್ಸನ್ ಒಲಿವೇರಾ ನಿರುಪಿಸಿದರು.

ಈ ಕಾರ್ಯಕ್ರಮದ ಮೊದಲು ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಬಹಳ ಸಡಗರ ಹಾಗೂ ಭಕ್ತಿ ಪೂರ್ವಕವಾಗಿ ಧರ್ಮಗುರು ವ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ ನೇತ್ರದ್ವಲ್ಲಿ ಪವಿತ್ರ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here