Tuesday 23rd, April 2024
canara news

ಮೀನುಗಾರಿಕಾ ಬೋಟುಗಳಿಗೆ ಸಕ್ರಮ ಪ್ರಮಾಣಪತ್ರ ವಿತರಣೆ

Published On : 16 Aug 2016   |  Reported By : Canaranews Network


ಮಂಗಳೂರು: ಮೀನುಗಾರಿಕಾ ಇಲಾಖೆಯಲ್ಲಿ ನೋಂದಾಯಿಸದೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಯಾಂತ್ರೀಕೃತ ದೋಣಿಗಳನ್ನು ಸಕ್ರಮಗೊಳಿಸುವ ಅವಕಾಶವನ್ನು ರಾಜ್ಯ ಸರಕಾರ ಒದಗಿಸಿದ್ದು, ಮೀನುಗಾರರು, ದೋಣಿ ಮಾಲಕರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಬಿ.ಎ. ಮೊದೀನ್‌ ಬಾವಾ ತಿಳಿಸಿದ್ದಾರೆ.ಮಂಗಳೂರಿನ ಕಚೇರಿಯಲ್ಲಿ ಸಕ್ರಮಗೊಂಡ ಬೋಟ್‌ ಮಾಲಕರಿಗೆ ಸಕ್ರಮೀಕರಣ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಯಾವುದೇ ರೀತಿಯಲ್ಲಿ ನೋಂದಣಿಯಾಗದ ಮೀನುಗಾರಿಕೆಯಲ್ಲಿ ತೊಡಗಿಕೊಂಡ ಬೋಟುಗಳಿಗೆ ಸರಕಾರದ ಡೀಸೆಲ್‌ ಸಬ್ಸಿಡಿ ಲಭ್ಯವಾಗುವುದಿಲ್ಲ.ಅಲ್ಲದೇ, ಬೋಟುಗಳು ಅವಘಡಕ್ಕೀಡಾದರೆ ಯಾವುದೇ ವಿಮಾ ಪರಿಹಾರವೂ ಸಿಗುವುದಿಲ್ಲ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಈ ಹಿಂದೆ ತಾನು ಪ್ರಸ್ತಾಪಿಸಿದ್ದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಅಕ್ರಮ ಯಾಂತ್ರೀಕೃತ ದೋಣಿಗಳಿಗೆ ಸಕ್ರಮಗೊಳಿಸುವ ಅವಕಾಶ ನೀಡಿದೆ. ಕರಾವಳಿ ಮೀನುಗಾರರು, ಇದನ್ನು ಉಪಯೋಗಿಸಿ ದೋಣಿಗಳ ಸಕ್ರಮೀಕರಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here