Saturday 20th, April 2024
canara news

ಬಸ್ರೂರು ಮೂರುಕೈಯಲ್ಲಿ ಮೇಲ್ಸೇತುವೆ ಬೇಡಿಕೆ : ತಜ್ಞರೊಂದಿಗೆ ಜಯಪ್ರಕಾಶ ಹೆಗ್ಡೆ ಚರ್ಚೆ

Published On : 16 Aug 2016   |  Reported By : Bernard J Costa


ಕುಂದಾಪುರದ ಬಸ್ರೂರು ಮೂರುಕೈಯಲ್ಲಿ ಪ್ರಸ್ತಾವಿತ ಅಂಡರ್‍ಪಾಸ್ ಬದಲಿಗೆ ಫೈಓವರ್ ನಿರ್ಮಿಸುವಂತೆ ಕೋರಿರುವ ಸ್ಥಳೀಯರ ಮನವಿಯ ಮೇರೆಗೆ ಇಂದು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರು ಚತುಷ್ಪಥ ಹೆದ್ದಾರಿ ಗುತ್ತಿಗೆದಾರರಾದ ನವಯುಗ ಕಂಪೆನಿಯ ಮುಖ್ಯ ಇಂಜಿನಿಯರ್ ಶ್ರೀ ರಾಘವೇಂದ್ರರವರ ಜೊತೆಗೂಡಿ ಬಸ್ರೂರು ಮೂರುಕೈ ಪರಿಸರದಲ್ಲಿ ವೀಕ್ಷಣೆ ನಡೆಸಿ ಸ್ಥಳೀಯರ ಮತ್ತು ತಜ್ಞರ ಅಭಿಪ್ರಾಯವನ್ನು ಆಲಿಸಿ ಚರ್ಚೆ ನಡೆಸಿದರು.

 

ಬಸ್ರೂರು ಮೂರುಕೈ ರಾಷ್ಟ್ರೀಯ ಹೆದ್ದಾರಿ ಹಾಗೂ ಅಂತರ್‍ಜಿಲ್ಲಾ ರಾಜ್ಯ ಹೆದ್ದಾರಿಯನ್ನು ಬೆಸೆಯುವ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ದಿನವೂ ನೂರಾರು ಬಸ್ಸು, ಲಾರಿ, ಕಾರುಗಳು ಹಾಗೂ ಹತ್ತು ಚಕ್ರಗಳ ಸರಕು ಸಾಗಣೆಯ ಭಾರೀ ವಾಹನಗಳು ಚಲಿಸುವ ಕಾರಣಕ್ಕಾಗಿ ಇಲ್ಲಿ ಅಂಡರ್‍ಪಾಸ್ ನಿರ್ಮಿಸಿದರೆ ದಿನವಿಡಿ ಟ್ರಾಫಿಕ್ ಜಾಮ್ ಆಗುವ ಅಪಾಯವಿರುವ ಕಾರಣಕ್ಕಾಗಿ ಫ್ಲೈಓವರ್ ನಿರ್ಮಿಸುವಂತೆ ಕೋರಿ ಸ್ಥಳೀಯರು ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಜಯಪ್ರಕಾಶ ಹೆಗ್ಡೆಯವರು ಮಾತನಾಡಿ ನಾನು ಮೇಲ್ಸೇತುವೆ ನಿರ್ಮಾಣದ ಕುರಿತು ಈ ಭಾಗದ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಜೊತೆ ಮತ್ತು ರಾಜ್ಯದ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರ ಜೊತೆ ಈಗಾಗಲೇ ಚರ್ಚಿಸಿದ್ದು ಅವರುಗಳು ಈ ಕುರಿತು ಪ್ರಸ್ತಾವನೆ ಸಲ್ಲಿಸಲು ತಿಳಿಸಿರುತ್ತಾರೆ. ಆದ ಕಾರಣ ಸ್ಥಳೀಯ ಹೋರಾಟಗಾರರ ಬೆಂಬಲಕ್ಕೆ ನಾನು ಸದಾ ಸಿದ್ಧನಿದ್ದೇನೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮುಂದಾಳುಗಳಾದ ಬಸ್ರೂರು ನರೇಂದ್ರ ಶೆಟ್ಟಿ, ಮಾಣಿಗೋಪಾಲ, ಬಿ. ಕಿಶೋರ್ ಕುಮಾರ್, ವಿನೋದ್ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಕಾವೇರಿ ರಾಜೇಶ್, ಸತೀಶ್ ಗಾಣಿಗ, ನಾರಾಯಣ ಆಚಾರ್, ಶಂಕರ ಅಂಕದಕಟ್ಟೆ, ಟಿ. ಪ್ರವೀಣ್ ಕುಮಾರ್, ರಂಜಿತ್ ಕುಮಾರ್ ಶೆಟ್ಟಿ, ಗಿರೀಶ್ ಜಿ.ಕೆ., ಶೇಖರ ಪೂಜಾರಿ, ವಿಶ್ವನಾಥ ಶೆಟ್ಟಿ, ಕೃಷ್ಣ ದೇವಾಡಿಗ, ರವಿ. ವಿ.ಎಂ., ಸತೀಶ್ ಪೈ, ಸುಕುಮಾರ್ ಶೆಟ್ಟಿ, ಉದುಯ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here