Saturday 20th, April 2024
canara news

ಬರೋಡದಲ್ಲಿ ಸ್ವಾತಂತ್ರ್ಯೋತ್ಸವದೊಂದಿಗೆ ತೃತೀಯ ತುಳು ಸಾಂಸ್ಕೃತಿಕ ಕಾರ್ಯಕ್ರಮ

Published On : 18 Aug 2016   |  Reported By : Rons Bantwal


ಹೊರನಾಡ ತುಳು ಚಾವಡಿ ಇತಿಹಾಸ ನಿರ್ಮಿತ : ವಿಶ್ವನಾಥ ಪೂಜಾರಿ

ಮುಂಬಯಿ, ಅ.18: ಗುಜರಾತಿನಲ್ಲಿ ತುಳು ಚಾವಡಿ ನಿರ್ಮಾಣ ವಾಗಿರುವುದು ನಿಜಕ್ಕೂ ಇತಿಹಾಸ ಕಟ್ಟುವ ಒಂದು ಮಹತ್ವದ ಹೆಜ್ಜೆ ಗುರುತಾಗಿದೆ. ನಮ್ಮ ಪೂರ್ವಜರು ಕೂಡು ಕುಟುಂಬದಂತೆ ಪ್ರಸ್ತುತ ನಿಯೋಜಿತ ತುಳು ಚಾವಡಿ ಮದರಿಯಾಗಿ ಮೂಡಿ ಬರಲಿ. ವರ್ಷದ ಹನ್ನೆರಡು ತಿಂಗಳು ತುಳು ನಾಡಿನ ಪಾರಂಪರಿಕ ಆಚರಣೆಗಳು ಹಬ್ಬ ಹದಿನಗಳು, ಜಾನಪದ ಸಾಂಸ್ಕೃತಿಕ ಸಂಭ್ರಮಗಳು ಈ ತುಳು ಚಾವಡಿಯಲ್ಲಿ ರಾರಾಜಿಸಲಿ. ಮುಂದಿನ ನವ ಪೀಳಿಗೆಗಳ ಪಾಲಿಗೆ ವರದಾನವಾಗಲಿ ಎಂದು ಸೂರತ್ ಯುವ ಉದ್ಯಮಿ ಹಾಗೂ ಗುಜರಾತ್ ಬಿಲ್ಲವ ಸಂಘ ಸ್ಥಳೀಯ ಶಾಖೆಯ ಅಧ್ಯಕ್ಷ ವಿಶ್ವನಾಥ ಪೂಜಾರಿ ಮಾತನಾಡಿದರು.

ಕಳೆದ (ಆ.15) ಸೋಮವಾರ ಸ್ಥಳೀಯ ಬೈದಶ್ರಿ ಸಾಂಸ್ಕೃತಿಕ ಕೇಂದ್ರದ ಸಭಾಗೃಹದಲ್ಲಿ ಜರುಗಿದ ಬರೋಡದ ಪ್ರಪ್ರಥಮ ತುಳು ಚಾವಡಿಯ ಪೂರ್ವಭಾವಿ ತೃತೀಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದೇಶದ 70 ಸ್ವಾತಂತ್ರ ್ಯ ದಿನಾಚರಣಾ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿs ಅಹ್ಮದಬಾದಿನ ಬಂಟರ ಸಂಘದ ಅಧ್ಯಕ್ಷ ಉದ್ಯಮಿ ಅಪ್ಪು ಪಿ.ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿದ ಅವರು ತುಳು ಚಾವಡಿ ನಿರ್ಮಾಣದ ಸುದ್ಧಿಗಳನ್ನು ಮಾಧ್ಯಮಗಳ ಮೂಲಕ ಓದಿ ಪುಳಕಿತನಾಗಿದ್ದೇನೆ. ಹೊರನಾಡ ಪ್ರಪ್ರಥಮ ತುಳು ಚಾವಡಿ ಗುಜರಾತ್‍ನ ಪುಣ್ಯ ಭೂಮಿಯಲ್ಲಿ ಮೂಡಿ ಬರುವುದು ದೊಡ್ಡ ಸಾಧನೆ. ಇದು ಸಮಗ್ರ ದೇಗುಲದಂತೆ ಇಂತಹ ಕೆಲಸಗಳಲ್ಲಿ ವಿಘ್ನು ಸಂತೋಷಿಗಳು ಮೂಗು ತೂರಿಸದಂತೆ ನಾವೂ ಎಚ್ಚರಿಕೆ ವಹಿಸಬೇಕು ಎಂದು ಮಾತು ನುಡಿದರು.

ಅಹ್ಮದಬಾದಿನ ಬಂಟರ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ದೇವಾದತ್ತ ಎನ್.ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದರು. ಗೌರವ ಅತಿಥಿsಗಳಾಗಿ ಅಹ್ಮದಬಾದಿನ ಉದ್ಯಮಿಗಳಾದ ಜಯರಾಮ ಶೆಟ್ಟಿ, ನಿತೇಶ್ ಎಸ್.ಶೆಟ್ಟಿ, ಅಪ್ಪು ಎ.ಶೆಟ್ಟಿ, ಜಗನ್ನಾಥ ಶೆಟ್ಟಿ, ನಾರಯಣ ರೈ, ರವೀಂದ್ರ ಕುಮಾರ್ ಶೆಟ್ಟಿ ಮತ್ತು ಸುರೇಖಾ ಎಂ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಬೆಳ್ತಂಗಡಿ) ಅವರು ಸ್ವಾಗತಿಸಿ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರಿದರು. ತುಳು ಸಂಘದ ಸ್ಥಾಪಕ ಸಂಚಾಲಕ ಎಸ್.ಕೆ.ಹಳೆಯಂಗಡಿ ಮತ್ತು ಸ್ಥಾಪಕ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಅವರು ಮೂರ ದಶಕಗಳ ಹಿಂದೆ ತುಳು ಸಂಘ ಸ್ಥಾಪನೆಯ ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ವಿದ್ಯಾಥಿರ್sಯರಿಂದ ಹಲವಾರು ವಿಭಿನ್ನ ಸ್ಪರ್ಧೆಗಳು ನೇರವೇರಿದವು. ರಾಷ್ಟ್ರಭಕ್ತಿಗೀತೆ, ಛದ್ಮವೇಷ, ಭಾವಗೀತೆ ಮತ್ತು ಮಕ್ಕಳು ಮತ್ತು ಪೆÇೀಷಕರಿಗಾಗಿ ಸಂಘ ಸಂಸ್ಥೆಗಳು ಏಕೆ ಬೇಕು ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ನೇರವೇರಿತು. ಗೌ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here