Thursday 28th, March 2024
canara news

ಕರ್ಣಾಟಕ ಬ್ಯಾಂಕ್‌: ಕದ್ರಿ ಪಾರ್ಕ್‌ನಲ್ಲಿ ಸೌರದೀಪ ಅಳವಡಿಕೆ

Published On : 20 Aug 2016   |  Reported By : Canaranews Network


ಮಂಗಳೂರು: ಮಂಗಳೂರಿನ ಪ್ರಮುಖ ಆಕರ್ಷಣಾ ಕೇಂದ್ರವಾಗಿ ರುವ ಕದ್ರಿ ಪಾರ್ಕ್‌ನ ಅಭಿವೃದ್ಧಿಗೆ ಕೊಡುಗೆ ನೀಡಿರುವ ಕರ್ಣಾಟಕ ಬ್ಯಾಂಕ್‌, ಸಾರ್ವಜನಿಕರ ಸಂಜೆಯ ವಾಯುವಿಹಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉದ್ಯಾನವನದ ಕಾಲು ದಾರಿಯುದ್ದಕ್ಕೂ 18 ಲಕ್ಷ ರೂ. ವೆಚ್ಚದ ಸುಮಾರು 60ಕ್ಕೂ ಮಿಕ್ಕಿ ಸೌರ ದೀಪಗಳನ್ನು ಅಳವಡಿಸಿದೆ.

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪ್ರಾಯೋಜಿಸಲಾಗಿರುವ ಈ ಸೋಲಾರ್‌ ದೀಪಗಳ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಜಯರಾಂ ಭಟ್‌ ಮಂಗಳವಾರ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಕರ್ಣಾಟಕ ಬ್ಯಾಂಕ್‌ ಸುಮಾರು 6 ಕೋಟಿ ರೂ. ಅನ್ನು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌)ಯಡಿ ವ್ಯಯಿಸಿದ್ದು, ಪ್ರಸ್ತುತ ಸಾಲಿನಲ್ಲಿ ಈಗಾಗಲೇ 3 ಕೋ.ರೂ. ವ್ಯಯ ಮಾಡಿದೆ.

ಸೋಲಾರ್‌ ದೀಪ ಅಳವಡಿಕೆ ಕನಸಿನ ಯೋಜನೆಯಾಗಿದ್ದು, ಸಿಎಸ್‌ಆರ್‌ ಯೋಜನೆಯಡಿಯಲ್ಲೇ ಕದ್ರಿ ಪಾರ್ಕ್‌ ಉದ್ಯಾನವನದ ಕಾಲುದಾರಿಯುದ್ದಕ್ಕೂ 60ಕ್ಕೂ ಮಿಕ್ಕಿ ಸೌರ ದೀಪಗಳನ್ನು ಅಳವಡಿಸಿದೆ. ಇದರಿಂದ ಸಂಜೆ ವಾಯು ವಿಹಾರಕ್ಕೆ ತೆರಳುವವರಿಗೆ ಸಾಕಷ್ಟು ಸಹಾಯಕವಾಗಲಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here