Saturday 20th, April 2024
canara news

ಖಾರ್ ಪಶ್ಚಿಮದಲ್ಲಿ 100ನೇ ಶಾಖೆ ಸೇವಾರ್ಪಿಸಿದ ಭಾರತ್ ಬ್ಯಾಂಕ್

Published On : 20 Aug 2016


ಸಹಕಾರಿ ಬ್ಯಾಂಕ್‍ಗಳು ಸಮಾಜ-ಸರಕಾರಕ್ಕೆ ಸಮೀಪವು :ಸಂಸದ ಗೋಪಾಲ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.20: ಭಾರತ್ ಬ್ಯಾಂಕ್‍ನ ನೂರರ ಶಾಖೆ ಅಭಿನಂದನೀಯ. ಈ ಶುಭಾಸರಕ್ಕೆ ಇಡೀ ಮುಂಬಯಿಯ ಜನತೆ ಪರವಾಗಿ ಶುಭ ಕೋರುತ್ತೇನೆ. ಇದೊಂದು ದೊಡ್ಡ ಸಾಧನೆÉ. ಬಡವರು ಮತ್ತು ಮಧ್ಯಮ ವರ್ಗದ ಜನತೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಕ್ಕಿಂತ ಲೂ ಸಹಕಾರಿ ಬ್ಯಾಂಕ್‍ಗಳಲ್ಲೇ ಧನ್ಯರೆಣಿಸುತ್ತಿರುವುದಕ್ಕೆ ಕಾರಣವೇ ಕೋ.ಆಪರೇಟಿವ್ ಬ್ಯಾಂಕ್‍ಗಳ ಪ್ರಾಮಾಣಿಕ ಸೇವೆ ಆಗಿದೆ. ಜನಸಾಮಾನ್ಯರ ಪಾಲಿಗೆ ಸಹಕಾರಿ ಬ್ಯಾಂಕ್‍ಗಳೇ ಕಲ್ಪವೃಕ್ಷಗಳಾಗಿವೆ. ಕೊಡು ಕೊಳ್ಳುವಿಕೆ ಮೂಲಕ ಸಮಾಜಕ್ಕೂ ಸರಕಾರಕ್ಕೂ ಸಮೀಪವಾಗಿವೆ. ಸಹಕಾರಿ ಬ್ಯಾಂಕ್‍ಗಳು ರಾಷ್ಟ್ರೀಕೃತ ಬ್ಯಾಂಕ್‍ಕ್ಕಿಂತ ಸಮಾಜಕ್ಕೆ ತುಂಬಾ ಲಾಭ ಮಾಡಿವೆ. ಇವು ರಾಷ್ಟ್ರೀಕೃತ ಬ್ಯಾಂಕ್‍ಕ್ಕಿಂತಲೂ ಪ್ರಾಮಾಣಿಕ ಸೇವೆ ಮಾಡುವುದರಿಂದ ಸಹಕಾರಿ ಬ್ಯಾಂಕ್‍ಗಳಲ್ಲಿ ಜನರೂ ಅಧಿಕ ವಿಶ್ವಾಸವನ್ನಿರಿಸುತ್ತಿರುವುದು ಅಭಿಮಾನದ ವಿಷಯ ಎಂದು ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.

ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 100ನೇ ಶಾಖೆಯನ್ನು ಇಂದಿಲ್ಲಿ ಶನಿವಾರ ಬೆಳಿಗ್ಗೆ ಖಾರ್ ಪಶ್ಚಿಮದಲ್ಲಿನ ರೈಲ್ವೇ ಸ್ಟೇಶನ್‍ನ ಸನಿಹದ ನಾಲ್ಕನೇ ರಸ್ತೆಯಲ್ಲಿನ ಧರ್ವೇಶ್ ಗ್ರ್ಯಾಂಡ್ ಕಟ್ಟಡದಲ್ಲಿ ಸೇವಾರಂಭಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿತ ಸಂಸದ ಗೋಪಾಲ್ ಶೆಟ್ಟಿ ರಿಬ್ಬನ್ ಬಿಡಿಸಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸರ್ವೋಭಿವೃದ್ಧಿಯ ಸರದಾರ ಜಯ ಸಿ.ಸುವರ್ಣರ ಮುಂದಾಳುತ್ವದಲ್ಲಿ ನೆರವೇರಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಹಿರಿಯ ತುಳುಕನ್ನಡಿಗ, ಬಂಟ್ಸ್ ನ್ಯಾಯ ಮಂಡಳಿ ಸ್ಥಾಪಕಾಧ್ಯಕ್ಷ ಎಂ.ಡಿ ಶೆಟ್ಟಿ ಅವರನ್ನೊಳಗೊಂಡು ಗೋಪಾಲ್ ಶೆಟ್ಟಿ ದೀಪ ಪ್ರಜ್ವಲಿಸಿ ಶಾಖೆಯನ್ನು ಹಾಗೂ ಎಟಿಎಂ ಸೇವೆಗೆ ಚಾಲನೆಯನ್ನೀಡಿದರು. ಜಯ ಸುವರ್ಣರು ಭದ್ರತಾಕೋಶಕ್ಕೆ ಚಾಲನೆ ನೀಡಿದರು.

ಬಿಲ್ಲವ ಸಮುದಾಯಕ್ಕೆ ಇದೊಂದು ಸುವರ್ಣಕ್ಷರದಲ್ಲಿ ಬರೆಯುವ ಸುದಿನ. ನಮ್ಮವರ ನೂರರ ಶಾಖೆಯ ಬ್ಯಾಂಕ್ ಇತಿಹಾಸ ನಿರ್ಮಾಣ ಮಾಡಿದೆ. ಈ ಬಾರಿಯ ಒಲಿಂಪಿಕ್‍ನಲ್ಲಿ ರಜತ ಪಡೆದರೆ ಭಾರತ್ ಬ್ಯಾಂಕ್‍ನ ಸಾಧನೆ ಬಂಗರಾದ ಪದಕ ಗಳಿಸಿದ ಸಂತಸ ತಂದಿದೆ ಎಂದು ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಹಾಗೂ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ತಿಳಿಸಿದರು.

ಎಂ.ಡಿ ಶೆಟ್ಟಿ ಮಾತನಾಡಿ ಜಯ ಸುವರ್ಣರಂತಹ ನೂರಾರು ಜನರ ಅಗತ್ಯ ಈ ಸಮಾಜಕ್ಕಿದೆ. ಅವರಂತವರಿಂದಲೇ ನಮ್ಮ ಸಮಾಜ ಬೆಳೆಯಬೇಕಾಗಿದೆ. ವಿಜಯ ಬ್ಯಾಂಕ್‍ಗೆ ಹೇಗೆ ಸುಂದರಾಮ್ ಶೆಟ್ಟಿಯೋ ಅಂತಹ ದೂರದೃಷ್ಟಿತ್ವ ಜಯ ಸುವರ್ಣರಲ್ಲಿದೆ. ಸಹಕಾರಿ ಬ್ಯಾಂಕುಗಳಲ್ಲಿ 2% ಬಡ್ಡಿ ಜಾಸ್ತಿಯಾದರೂ ಜನಸಾಮಾನ್ಯರ ಬದುಕಿಗೆ ಆಸ್ತಿಯಾಗಬಲ್ಲದು ಎಂದರು.

ಬಿಲ್ಲವ ಜಾಗೃತಿ ಬಳಗದ ಗೌರವಾಧ್ಯಕ್ಷ, ಬ್ಯಾಂಕ್‍ನ ಮಾಜಿ ನಿರ್ದೇಶಕ ಸುರೇಶ್ ಎಸ್.ಪೂಜಾರಿ ಮಾತನಾಡಿ ಜಯ ಸುವರ್ಣರು ತನ್ನ ಅಧಿಕಾರವಧಿಗೆ ಬ್ಯಾಂಕ್ ಎಂಬ ಮಗುವನ್ನು ಪಡೆದು ಇಂದು ಯುವಕನಾಗಿ ಮಾತ್ರವಲ್ಲ ರಾಷ್ಟ್ರದ ಹಿರಿಮೆಯ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ. ಅಂದು ಸಂಸ್ಥೆಯಲ್ಲಿ ಬೆಳೆದ ಕಳೆಗಳನ್ನು ಕಿತ್ತುಹಾಕಿ ಮುತ್ತಿನಂತಹ ಮೌಲ್ಯದ ಸಹಕಾರಿ ಬ್ಯಾಂಕ್ ಆಗಿ ರೂಪಿಸಿದ್ದಾರೆ. ಆದುದರಿಂದ ಅವರ ದಕ್ಷ ನೇತೃತ್ವದಲ್ಲಿ ಈ ಬ್ಯಾಂಕ್ ಸಮಗ್ರ ಸಮಾಜಕ್ಕೆ ವರವಾಗಲಿ ಎಂದು ಶುಭಕಾಮನೆಗಳು ಎಂದರು.

ಬ್ಯಾಂಕ್‍ನ ಶತ ಶಾಖೆ ಜಯ ಸುವರ್ಣ ಅವಿರತ ಪರಿಶ್ರಮದ ಫಲವಾಗಿದೆ. ಸುವರ್ಣರ ಮತ್ತು ಅವರ ತಂಡದ ಅದ್ಭುತ ಸಮರ್ಪಣೆ, ನಿರ್ಧಿಷ್ಟ ಕಲ್ಪನೆ, ವಿವೇಚನೆಯಿಂದ ಮಾತ್ರ ಇದು ಸಾಧ್ಯವಾಗಿದೆ. ಇದು ನಮಗೆಲ್ಲರಿಗೂ ಪ್ರೇರಣೆ ನೀಡಿದೆ ಎಂದು ಆಹಾರ್‍ನ ಮಾಜಿ ಅಧ್ಯಕ್ಷ ನಾರಾಯಣ ಆಳ್ವ ತಿಳಿಸಿದರು.

ಈ ಸಾಧನೆ ಸಮಸ್ತÀ ಗ್ರಾಹಕರ ಮತ್ತು ನೌಕರ ವರ್ಗದ ಸಹಯೋಗ, ಶ್ರಮದ ಫಲವಾಗಿದೆ. ಭವಿಷ್ಯತ್ತಿನಲ್ಲಿ ಇನ್ನೂ ನೂರಾರು ಶಾಖೆಗಳನ್ನು ತೆರೆದು ಜನಮಾನಸದಲ್ಲಿ ಭರವಸೆಯ ಸಹಕಾರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್ ಆಶಯ ವ್ಯಕ್ತ ಪಡಿಸಿದರು.

ಚಿಕ್ಕ ಸಮಾಜದ ದೊಡ್ಡ ಸಾಧನೆಗೈದ ಭಾರತ್ ಬ್ಯಾಂಕ್‍ನ ಸೇವೆ ವರ್ಣನೆಗೆ ನಿಲುಕದ್ದಾಗಿದೆ. ಸೇವೆ ಕೊಂಡಾಡಲೂ ಶಬ್ದಗಳಿಲ್ಲ. ಅಂತಹ ಸಾಧನೆ ಇದು ಮಾಡಿದೆ. ಇದಕ್ಕಿಂತಲೂ ಮಿಗಿಲಾಗಿ ಬ್ಯಾಂಕ್ ಮುನ್ನಡೆಯಲಿ ಎಂದು ಉದ್ಯಮಿ ರವಿಎಸ್.ಶೆಟ್ಟಿ ನುಡಿದರು.

ಉದ್ಯಮಿಗಳಾದ ಪ್ರಫುಲ್ ಗೋಸಾ, ಶಂಕರ್ ಕೆ.ಸುವರ್ಣ ಖಾರ್, ಪದ್ಮಾಕರ್ ಕೋಟ್ಯಾನ್, ಶ್ಯಾಮ ಎಸ್.ಸುವರ್ಣ ಪುಣೆ ಸಂದರ್ಭೋಚಿತವಾಗಿ ಮಾತನಾಡಿ ಬ್ಯಾಂಕ್‍ನ ನೂರು ಶಾಖೆಗಳ ಕಾರ್ಯವೈಖರಿಯನ್ನು ಪ್ರಶಂಸಿಸಿ ಶುಭಾರೈಸಿದರು.

ಅತಿಥಿüಗಳಾಗಿ ಎನ್‍ಸಿಪಿ ನೇತಾರ ಲಕ್ಷ್ಮಣ ಪೂಜಾರಿ, ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ವರದ ವಿ.ಉಳ್ಳಾಲ್, ಮಾಜಿ ಅಧ್ಯಕ್ಷ ಡಿ.ಬಿ ಅವಿೂನ್, ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಮೋಹನ್ ಜಿ.ಪೂಜಾರಿ, ಜಗನ್ನಾಥ್ ವಿ. ಕೋಟ್ಯಾನ್, ರಾಜ ವಿ.ಸಾಲ್ಯಾನ್, ಶಂಕರ್ ಡಿ.ಪೂಜಾರಿ, ಉದ್ಯಮಿಗಳಾದ ಗಣೇಶ್ ಬಂಗೇರ ಮಂಗಳೂರು, ಹರೀಶ್ ಜಿ.ಅವಿೂನ್, ಸುರೇಂದ್ರ ಎಸ್.ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್, ಸಂತೋಷಿ ಸುರೇಶ್ ಪೂಜಾರಿ, ಲೀಲಾವತಿ ಜಯ ಸುವರ್ಣ, ನ್ಯಾ| ಶಶಿಧರ್ ಕಾಪು, ಪ್ರಭಾ ಎನ್.ಸುವರ್ಣ,ನೂತನ ಎಸ್.ಸುವರ್ಣ ಪುಣೆ, ಸದಾನಂದ ಕೆ.ಪೂಜಾರಿ, ಯೋಗೇಶ್ ಹೆಜ್ಮಾಡಿ, ಸಿಎ| ಅಶ್ವಜಿತ್ ಸುವರ್ಣ, ಎಂ.ಎನ್ ಕರ್ಕೇರಾ ಪೆÇವಾಯಿ, ವಿಠಲ್ ಎಸ್.ಪೂಜಾರಿ, ಸಿಎ| ವೇಣು ಆರ್.ಶೆಟ್ಟಿ, ರಾಘವ ಕೆ. ಕುಂದರ್, ದೇವೇಂದ್ರ ಬಂಗೇರ ಖಾರ್, ಶ್ರೀನಿವಾಸ ಕರ್ಕೇರ, ಸಂತೋಷ್ ಕೆ.ಪೂಜಾರಿ ಮಲಾಡ್, ಚಿತ್ರಾಪು ಕೆ.ಎಂ ಕೋಟ್ಯಾನ್, ನಿಲೇಶ್ ಪೂಜಾರಿ ಪಲಿಮಾರು ಸೇರಿದಂತೆ ನೂರಾರು ಗ್ರಾಹಕರು, ಷೇರುದಾರರು, ಹಿತೈಷಿಗಳು ಉಪಸ್ಥಿತರಿದ್ದರು.

ಈ ಶುಭಾವಸರದಲ್ಲಿ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ಎಂ.ಬಿ ಕುಕ್ಯಾನ್, ವಾಸುದೇವ ಆರ್.ಕೋಟ್ಯಾನ್, ಪುಷ್ಫಲತಾ ಎನ್.ಸಾಲ್ಯಾನ್, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಅನ್ಬಲಗನ್ ಸಿ.ಹರಿಜನ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಹಾಜರಿದ್ದು ನೂತನ ಶಾಖೆಯ ಸರ್ವ ಸಿಬ್ಬಂದಿಗಳಿಗೆ ಪುಷ್ಫಗುಪ್ಚವನ್ನೀಡಿ ಅಭಿನಂದಿಸಿದರು.

ಉಳ್ಳೂರು ಧನಂಜಯ್ ಶಾಂತಿ, ಉಳ್ಳೂರು ದಿನೇಶ್ ಶಾಂತಿ ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ಉಳ್ಳೂರು ಶೇಖರ್ ಶಾಂತಿ ದ್ವಾರಪೂಜೆ ನೆರವೇರಿಸಿ ಹರಸಿದರು. ಅಮಿತ್ ಗುಜರಿಯಾ ಮತ್ತು ಸೋನಲ್ ಎ. ಗುಜರಿಯಾ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಕು| ಕೃತಿಕಾ ಡಿ.ಕೋಟ್ಯಾನ್ ಸ್ವಾಗತಿಸಿದರು. ಬ್ಯಾಂಕ್‍ನ ಡಿಜಿಎಂ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಬ್ಯಾಂಕ್‍ನ ನೂರರ ಶಾಖೆಗಳ ಸಾಧನೆ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಮುಖ್ಯಸ್ಥ ಕರುಣಾಕರ್ ಬಿ.ಸುವರ್ಣ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here